ಕನ್ನಡಪ್ರಭ ವಾರ್ತೆ ಹಾಸನ
ಪೊಲೀಸ್ ಠಾಣೆ ಮೇಲಿಂದ ಏತಕ್ಕಾಗಿ ಬಿದ್ದು ಪ್ರಾಣ ಬಿಟ್ಟಿದ್ದಾನೆ ಎಂಬುದರ ಬಗ್ಗೆ ಸತ್ಯಾಂಶ ತಿಳಿದು ಬಂದಿಲ್ಲ. ಹೊಳೆನರಸೀಪುರ ತಾಲೂಕಿನ ಡೊಡ್ಡಕಾಡನೂರು ಮಲ್ಲೆನಹಳ್ಳಿ ನಿವಾಸಿ ಸುನೀಲ್ (30 ವರ್ಷ) ಎಂಬುವನೇ ಮೇಲಿಂದ ಕೆಳಗೆ ಬಿದ್ದು ಸಾವನಪ್ಪಿದ ದುರ್ದೈವಿ. ಶನಿವಾರ ಈತ ಹಾಸನ ನಗರ ಪೊಲೀಸ್ ಉಪಾಧೀಕ್ಷಕರ ಕಛೇರಿ ಸಂಕೀರ್ಣದಲ್ಲಿ ಇರುವ ಹಾಸನ ನಗರ ಠಾಣೆ, ಗ್ರಾಮಂತರ ಪೊಲೀಸ್ ಠಾಣೆ, ಸಿಇಎನ್ ಪೊಲೀಸ್ ಠಾಣೆ, ಪೊಲೀಸ್ ಉಪಾಧೀಕ್ಷಕರ ಕಚೇರಿ ಈ ಎಲ್ಲಾ ಪೊಲೀಸ್ ಠಾಣೆಗೆ ಸುಮ್ಮನೆ ಹೋಗಿ ಸುತ್ತಾಡಿಕೊಂಡು ನಂತರ ಪೊಲೀಸ್ ಠಾಣೆಯ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಮಹಡಿಯಿಂದ ಕೆಳಕ್ಕೆ ಜಿಗಿದು ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆತನ ತಲೆ, ಮುಖಕ್ಕೆ ಗಂಭೀರ ಗಾಯವಾಗಿದ್ದು, ನಂತರ ಸ್ಥಳದಲ್ಲಿ ಇದ್ದ ಪೊಲೀಸರು ಗಾಯಾಳು ಸುನೀಲ್ ಆತನನ್ನು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಈ ವ್ಯಕ್ತಿ ಮೃತಪಟ್ಟಿದ್ದಾನೆ.
ಈ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.