- ಉಪವಾಸ ಆರಂಭವಾದ ಅರ್ಧ ದಿನದಲ್ಲಿಯೇ ಮುಕ್ತಾಯ । ಮತ್ತೆ ಧರಣಿ ಕೂರುವ ಎಚ್ಚರಿಕೆ---ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಬೆಳಗ್ಗೆ 10ರ ಸುಮಾರಿಗೆ ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಧರಣಿ ಕುಳಿತ ಮಧುಚಂದ್ರ ಅವರ ಬೆಂಬಲಕ್ಕೆ ಬಿಜೆಪಿಯ ಹಿರಿಯ ಮುಖಂಡ, ಉದ್ಯಮಿ ನಟರಾಜಗೌಡ, ನಿವೃತ್ತ ರೈಲ್ವೆ ನೌಕರ ಲಿಂಗರಾಜು, ನಗರಸಭೆ ಮಾಜಿ ಸದಸ್ಯ ಕೆ.ಕೆ. ಮೂರ್ತಿ, ಮಹದೇವಪ್ಪ, ಪ್ರಭು, ರವಿ, ಸುರೇಶ್, ವಾಸೀಕ್, ಅಬ್ಬೂಕರ್, ಅಗಸ್ಟೀನ್, ಮಲ್ಲಿಕಾರ್ಜುನ, ರೇಚಣ್ಣ, ಶಂಕರ್, ರೈತ ಸಂಘದ ರಾಮಕೃಷ್ಣ, ಮೋಳೆ ಸೋಮಣ್ಣ ಸೇರಿದಂತೆ ಅನೇಕರು ಬೆಂಬಲ ಸುಚಿಸಿದರು.
ಈ ವೇಳೆ ಮಧುಚಂದ್ರ ಮಾತನಾಡಿ ಇ-ಸ್ವತ್ತು ವಿತರಣೆ ಸಮರ್ಪಕವಾಗಿಲ್ಲ. ಇ-ಸ್ವತ್ತು ನಿರಾಕರಿಸುವ ಅಧಿಕಾರಿಗಳು ಅದಕ್ಕೆ ಸೂಕ್ತ ಕಾರಣ ನೀಡಲ್ಲ. ಸೂಕ್ತ ದಾಖಲೆಗಳಿದ್ದರೂ ಸಹ ಅರ್ಜಿಯನ್ನು ವಿಲೇವಾರಿ ಮಾಡುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬಿತ್ಯಾದಿ ಗಂಭೀರ ಆರೋಪ ಮಾಡಿದರು. ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ತೊಂದರೆ ತಪ್ಪಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆವಿತ್ತರು. ಪ್ರತಿಭಟನಾಕಾರರು ಒಪ್ಪದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂದು ನಿರ್ಗಮಿಸಿದರು. ಬಳಿಕ ಚಾಮರಾಜನಗರ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳು ಪ್ರತಿಭಟನಾನಿರತರ ಜೊತೆ ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆ ಇತ್ಯರ್ಥದ ಭರವಸೆ ನೀಡಿದರು.ಮಧ್ಯಾಹ್ನ ಮತ್ತೆ ಧರಣಿನಿರತರನ್ನು ಭೇಟಿ ಮಾಡಿದ ಪೌರಾಯುಕ್ತರು 1 ವಾರದೊಳಗೆ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು.ಬಾಕ್ಸ್...)))1 ವಾರದಲ್ಲಿ 600 ಅರ್ಜಿ ಇತ್ಯರ್ಥ- ರುದ್ರಮ್ಮ
---26ಕೆಜಿಎಲ್ 32