ಕೆಂದಟ್ಟಿ ಬಳಿ ದುಷ್ಕರ್ಮಿಗಳಿಂದ ವ್ಯಕ್ತಿಯ ಕೊಲೆ

KannadaprabhaNewsNetwork |  
Published : Jan 29, 2026, 01:15 AM IST
ಚಾಕವೇಲು ವಸತಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾ ಡಿಡಿ ತೇಜನಂದ ರೆಡ್ಡಿ. ಈ ವೇಳೆ ತಾಲೂಕು ಕಲ್ಯಾಣಾಧಿಕಾರಿ ಮಂಜುಳಾ, ಮ್ಯಾನೇಜರ್ ನಾಗರಾಜು ಹಾಗೂ ಮೇಲ್ವಿಚಾರಕಿ ಸರಸ್ವತಮ್ಮ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಕೊಲೆಯಾದ ಯಲ್ಲೇಶ ತನ್ನ ಹೆಂಡತಿಯನ್ನು ಬಿಟ್ಟು ನರಸಾಪುರ ಸಂತೋಷ್‌ರ ಹೆಂಡತಿಯನ್ನು ಕೆರೆದುಕೊಂಡು ಬಂದು ಮನೆಯಲ್ಲಿರಿಸಿಕೊಂಡು ಕಳೆದ ಆರೇಳು ವರ್ಷದಿಂದ ಆಕೆಯೊಂದಿಗೆ ಸಂಸಾರ ನಡೆಸುತ್ತಿದ್ದ.

ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ಕೆಂದಟ್ಟಿ ಬಳಿ ಕಳೆದ ಮಂಗಳವಾರ ರಾತ್ರಿ ನರಸಾಪುರದ ಯಲ್ಲೇಶ (45) ಎಂಬಾತನನ್ನು ದುಷ್ಕರ್ಮಿಗಳು ಲಾಂಗು ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿ ನಂತರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆ ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಕನ್ನಿಕಾ ಸಿಕ್ರಿವಾಲ್, ಶ್ವಾನದಳ, ಸೋಕೋ ಟೀಂ ಭೇಟಿ ನೀಡಿ ಸಾಕ್ಷಿಗಳನ್ನು ಸಂಗ್ರಹಿಸುವ ಕೆಲಸ ಮಾಡಿದೆ. ಕಳೆದ ರಾತ್ರಿ ಡೈರಿಗೆ ಹಾಲು ಹಾಕಿ ವಾಪಸ್ ಬರುವ ವೇಳೆ ಬೈಕ್ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಲಾಂಗು ಮಚ್ಚಿನಿಂದ ಹಲ್ಲೆ ಮಾಡಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಕೊಲೆಯಾದ ಯಲ್ಲೇಶ ತನ್ನ ಹೆಂಡತಿಯನ್ನು ಬಿಟ್ಟು ನರಸಾಪುರ ಸಂತೋಷ್‌ರ ಹೆಂಡತಿಯನ್ನು ಕೆರೆದುಕೊಂಡು ಬಂದು ಮನೆಯಲ್ಲಿರಿಸಿಕೊಂಡು ಕಳೆದ ಆರೇಳು ವರ್ಷದಿಂದ ಆಕೆಯೊಂದಿಗೆ ಸಂಸಾರ ನಡೆಸುತ್ತಿದ್ದ. ಸದ್ಯ ಈ ವಿಚಾರವಾಗಿ ನಡೆಯುತ್ತಿದ್ದ ಗಲಾಟೆ ಕಳೆದ ರಾತ್ರಿ ಬರ್ಬರ ಕೊಲೆಯೊಂದಿಗೆ ಅಂತ್ಯವಾಗಿದೆ.ರೇಣುಕಾ 2021ರಲ್ಲಿ ತಂಡ ಸಂತೋಷ್‌ನನ್ನು ಬಿಟ್ಟು ನರಸಾಪುರದ ಯಲ್ಲೇಶ್ ಎಂಬಾತನ ಜೊತೆ ಹೋಗಿ ಆತನೊಂದಿಗೆ ಹೋಗಿ ಬದುಕುತ್ತಿದ್ದಳು. ಈ ವೇಳೆ ಯಲ್ಲೇಶ್‌ನನ್ನು ಮದುವೆಯಾಗಿದ್ದ ಜಯಲಕ್ಷ್ಮೀ ಎಂಬಾಕೆ ಆತನನ್ನು ಬಿಟ್ಟು ತವರು ಮನೆ ಸೇರಿಕೊಂಡಳು. ಹೀಗಿರುವಾಗಲೇ ಸಂತೋಷ್‌ಗೆ ಯಲ್ಲೇಶನ ಮೇಲೆ ಆಕ್ರೋಶ ಕುದಿಯುತ್ತಲೇ ಇತ್ತು, ತನ್ನ ಹೆಂಡತಿಯನ್ನು ಕರೆದುಕೊಂಡು ಹೋದ ಅನ್ನೋ ಕಾರಣಕ್ಕೆ ದ್ವೇಷ ಹೊಗೆಯಾಡುತ್ತಲೇ ಇತ್ತೀಚೆಗೆ ಯಲ್ಲೇಶ್‌ನನ್ನು ಕೊಲೆ ಮಾಡುವುದುದಾಗಿ ಆಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿಯೇ ಬಿಟ್ಟಿದ್ದನು. ಅಲ್ಲದೆ ಸಂತೋಷ್ ಯಲ್ಲೇಶನನ್ನು ಕೊಲೆ ಮಾಡಲು ಹವಣಿಸುತ್ತಿದ್ದ. ಹಾಗಾಗಿ ಕಳೆದ ರಾತ್ರಿ ಯಲ್ಲೇಶ್ ಡೈರಿಗೆ ಹಾಲು ಹಾಗೂ ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರ ಸಂಘದ ಚುನಾವಣೆ ಹಿನ್ನೆಲೆ ಸ್ವಲ್ಪ ತಡವಾಗಿ ಮನೆಗೆ ಬರುತ್ತಿದ್ದ. ಈ ವೇಳೆ ಹೊಂಚುಹಾಕಿದ್ದ ದುಷ್ಕರ್ಮಿಗಳು ಲಾಂಗು ಮಚ್ಚಿನಿಂದ ಹಲ್ಲೆ ಮಾಡಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮತ್ತೊಂದು ಖಾಸಗಿ ಸ್ಲೀಪರ್‌ ಬಸ್‌ ಬೆಂಕಿಗೆ ಆಹುತಿ!
ಸರ್ಕಾರಿ ಅಧಿಕಾರಿ, ನೌಕರರಿಗೆ ಖಾದಿ ದಿರಿಸು ಕಡ್ಡಾಯ ?