ಶಿರಸಿಯಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

KannadaprabhaNewsNetwork |  
Published : Oct 14, 2024, 01:16 AM IST
ಶಿರಸಿಯ ಭೀಮನಗುಡ್ಡ ಅರಣ್ಯ ಪ್ರದೇಶದ ಹತ್ತಿರ ಅಕ್ರಮವಾಗಿ ಗಾಂಜಾ ಮತ್ತು ಚರಾಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. | Kannada Prabha

ಸಾರಾಂಶ

ಮಂಗಳೂರು ಶಕ್ತಿನಗರದ ವಿಕ್ರಮ ವಿಕ್ಕಿ ದೇವದಾಸ್ ಶೆಟ್ಟಿ ಬಂಧಿತ ವ್ಯಕ್ತಿ.

ಶಿರಸಿ: ನಗರದ ಭೀಮನಗುಡ್ಡ ಅರಣ್ಯ ಪ್ರದೇಶದ ಸಮೀಪ ಅಕ್ರಮವಾಗಿ ಗಾಂಜಾ ಮತ್ತು ಚರಾಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಂಗಳೂರು ಶಕ್ತಿನಗರದ ವಿಕ್ರಮ ವಿಕ್ಕಿ ದೇವದಾಸ್ ಶೆಟ್ಟಿ ಬಂಧಿತ ವ್ಯಕ್ತಿ. ಈತ ಅಕ್ರಮವಾಗಿ ಗಾಂಜಾ ಮತ್ತು ಚರಾಸ್ ಸಾಗಾಟ ಮಾಡಿಕೊಂಡು ಬಂದು ಭೀಮನಗುಡ್ಡದ ಅರಣ್ಯ ಪ್ರದೇಶದ ಬಳಿ ಮಾರಾಟ ಮಾಡುತ್ತಿದ್ದ ವೇಳೆ ನಗರ ಠಾಣೆ ಪಿಎಸ್‌ಐ ನಾಗಪ್ಪ ಬಿ. ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, ಆತನನ್ನು ವಶಕ್ಕೆ ಪಡೆದು ಅಂದಾಜು ₹೧೨,೦೦೦ ಮೌಲ್ಯದ ೧೧೫ ಗ್ರಾಂ ತೂಲದ ಗಾಂಜಾ ಹಾಗೂ ₹೫೦ ಸಾವಿರ ಮೌಲ್ಯದ ೨೫ ಗ್ರಾಂ ತೂಕದ ಚರಾಸ್ ಹಾಗೂ ಕೃತ್ಯಕ್ಕೆ ಬಳಸಲಾದ ₹೨೫ ಸಾವಿರ ಮೌಲ್ಯದ ಮಾರುತಿ ಆಲ್ಟೋ ಕಾರು, ಚಿಲುಮೆ, ರೋಲಿಂಗ್ ಪೆಪರ್, ಗಾಂಜಾ ಕ್ರಷರ್ ಡಬ್ಬ ಮತ್ತು ₹೪,೪೫೦ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ. ಜಯಕುಮಾರ್, ಜಗದೀಶ್ ಎಂ., ಶಿರಸಿ ಉಪ ವಿಭಾಗದ ಡಿಎಸ್ಪಿ ಗಣೇಶ ಕೆ.ಎಲ್., ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಅವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್‌ಐ ನಾಗಪ್ಪ ಬಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಹನುಮಂತ ಕಬಾಡಿ, ಮಲ್ಲಿಕಾರ್ಜುನ ಕುದರಿ, ಅರುಣ ಲಮಾಣಿ, ಮಂಜುನಾಥ ಕಾಶಿಕೋವಿ, ಸದ್ದಾಂ ಹುಸೇನ್, ಪ್ರವೀಣ್ ಎನ್., ರಾಜಶೇಖರ ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಎಸ್‌ಐ ಮಹಾಂತಪ್ಪ ಕುಂಬಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಶಿರಸಿ ನಗರ ಠಾಣೆಯ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬೈಕ್ ಸವಾರನಿಗೆ ಹಂದಿ ದಾಳಿ: ಗಾಯ

ಭಟ್ಕಳ: ಇಲ್ಲಿನ ಸಾಗರ ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕದ ಎದುರು ಬೈಕ್ ಸವಾರರೊಬ್ಬರಿಗೆ ಕಾಡುಹಂದಿಗಳ ಹಿಂಡು ಅಡ್ಡ ಬಂದಿದ್ದಲ್ಲದೇ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.ಮಾರುಕೇರಿಯ ಕೋಟಖಂಡದ ಕಲ್ಲಬ್ಬೆ ನಿವಾಸಿ ಗೋಪಾಲ ಮಾದೇವ ಪ್ರಭು ಎಂಬವರೇ ಕಾಡು ಹಂದಿದಾಳಿಯಿಂದ ಗಾಯಗೊಂಡವರಾಗಿದ್ದಾರೆ. ಇವರು ಅ. 3ರಂದು ರಾತ್ರಿ 10.30 ಗಂಟೆಗೆ ಪಟ್ಟಣದಿಂದ ಕೆಲಸ ಮುಗಿಸಿ ಮನೆಗೆ ಬೈಕಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಸಾಗರ ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ದಿಢೀರ್ ಹಂದಿಗಳ ಹಿಂಡು ಅಡ್ಡ ಬಂದಿದ್ದಲ್ಲದೇ, ಆಯ ತಪ್ಪಿ ಬಿದ್ದಿರುವ ಇವರಿಗೆ ದಾಳಿ ಮಾಡಿ ಎರಡು ಕೈ, ಮುಖ, ಹಣೆ ಮುಂತಾದ ಭಾಗಗಳಿಗೆ ಗಾಯಗೊಳಿಸಿದೆ.ಅಂದು ಎಚ್ಚರ ತಪ್ಪಿ ಬಿದ್ದಿದ್ದ ಇವರನ್ನು ದಾರಿಹೋಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''