ಕೊಟ್ಟ ಸಾಲ ಕೇಳಿದ್ದಕ್ಕೆ ಹಲ್ಲೆ: ಆರೋಪಿಗೆ 2 ವರ್ಷ ಜೈಲು

KannadaprabhaNewsNetwork |  
Published : Apr 09, 2026, 01:45 AM IST
8ಎಚ್ಎಸ್ಎನ್12 :  | Kannada Prabha

ಸಾರಾಂಶ

ಕೊಟ್ಟ ಸಾಲ ವಾಪಸ್‌ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೊಳ್ಳೇಗಾಳ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಿದೆ. ಜೊತೆಗೆ ದಂಡ ಹಾಕಿದೆ.

ಕನ್ನಡಪ್ರಭ ವಾರ್ತೆ ಹನೂರು

ಕೊಟ್ಟ ಸಾಲ ವಾಪಸ್‌ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೊಳ್ಳೇಗಾಳ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಿದೆ. ಜೊತೆಗೆ ದಂಡ ಹಾಕಿದೆ.

ಘಟನೆ ಹಿನ್ನೆಲೆ:

2021ರ ಜೂನ್‌ 21ರಂದು ಚಂದು ಎಂಬಾತ ಮಹೇಶ್ ಎಂಬುವರಿಂದ ಸಾಲ ಪಡೆದುಕೊಂಡಿದ್ದರು. ಈ ಸಾಲವನ್ನು ಮಹೇಶ್‌ ವಾಪಸ್ಸು ಕೇಳಿದ್ದಾಗ, ಹಣವಿಲ್ಲ ಆಗುವುದಿಲ್ಲ ಎಂದು ಉದ್ಧಟತನದಿಂದ ಹೇಳಿದ್ದಾರೆ. ಇದರಿಂದ ಕ್ರೋಧಗೊಂಡ ಮಹೇಶ್‌ ‘ನಾಳೆ ಹಣ ಬೇಕು’ ಎಂದು ಹೇಳಿ ಹೋಗಿದ್ದಾರೆ. ಅದೇ ರಾತ್ರಿ ಸರ್ಕಲ್‌ ಅಂಗಡಿ ಹತ್ತಿರ ಚಂದು ಕಬ್ಬಿಣದ ಮಚ್ಚಿನಿಂದ ಮಹೇಶ್‌ ಮೇಲೆ ತೀವ್ರವಾಗಿ ದಾಳಿ ನಡೆಸಿ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಮತ್ತು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಚಂದುಗೆ 2 ವರ್ಷದ ಜೈಲುಶಿಕ್ಷೆ ಮತ್ತು ದಂಡವನ್ನು ವಿಧಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದಿ ಕುರಿತು ರಾಜ್ಯಪಾಲರ ಪತ್ರಕ್ಕೆ ಕರವೇ ಕಾವು: ಹೋರಾಟದ ಬಿಸಿ
ಗೊಲ್ಲರಹಳ್ಳಿ ಕಾಳಮ್ಮದೇವಿ ಜಾತ್ರಾ ಮಹೋತ್ಸವ ಸಂಪನ್ನ..!