)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊಬೈಲ್ ಗೇಮಿಂಗ್, ಮದ್ಯಪಾನ, ಧೂಮಪಾನದ ಚಟದಂತೆ ಷೇರು ಮಾರುಕಟ್ಟೆಯ ವ್ಯವಹಾರವನ್ನೆ ಚಟವಾಗಿಸಿಕೊಂಡು ಮಾನಸಿಕವಾಗಿ ಬಳಲಿದ ಯುವಕನ ಕತೆಯಿದು.
ಬೆಂಗಳೂರು ಮೂಲದ ಶ್ರೀಮಂತ ಕುಟುಂಬ ಹಿನ್ನೆಲೆಯ ಹಾಗೂ ಉತ್ತಮ ಉದ್ಯೋಗದಲ್ಲಿದ್ದ ಈತ 4 ವರ್ಷದ ಹಿಂದೆ ಷೇರು ವ್ಯವಹಾರಕ್ಕೆ ಇಳಿದಿದ್ದ. ಆರಂಭದಲ್ಲಿ ಒಂದಿಷ್ಟು ಲಾಭ ಗಳಿಸಿದ ಬಳಿಕ ಸ್ಟಾಕ್ಸ್‌ನಿಂದ ಫ್ಯೂಚರ್ ಆ್ಯಂಡ್ ಆಪ್ಷನ್, ಇಂಟ್ರಾಡೇ ವ್ಯವಹಾರಕ್ಕೆ ಮುಂದಾಗಿದ್ದಾನೆ. ಒಂದಿಷ್ಟು ದಿನ ಲಾಭ ಗಳಿಸಿದ್ದಾನೆ. ಆದರೆ, ಬಳಿಕ ನಷ್ಟ ಅನುಭವಿಸಿ ಕೈ ಸುಟ್ಟುಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಆ್ಯಪ್ ಮೂಲಕ ನಷ್ಟ ಸರಿಪಡಿಸಿಕೊಳ್ಳಲು ಲಕ್ಷಾಂತರ ಸಾಲ ಮಾಡಿಕೊಂಡಿದ್ದಾನೆ.ಷೇರು ವ್ಯವಹಾರ ಕ್ರಮೇಣ ಗೀಳಾಗಿ ಮಾರ್ಪಟ್ಟಿದೆ. ಮನೆ, ಕಚೇರಿಯ ಕೆಲಸದ ಸಮಯದಲ್ಲೂ ಮತ್ತು ಅದರ ನಂತರವೂ ಗಂಟೆಗಟ್ಟಲೆ ಮೊಬೈಲ್ ನೋಡುತ್ತಾ, ಯುಟ್ಯೂಬ್‌ನಲ್ಲಿ ಬರುವ ಷೇರು ವ್ಯವಹಾರದ ವಿಡಿಯೋ ನೋಡುವುದು ಚಟವಾಗಿದೆ. ನಿದ್ದೆಗೆಟ್ಟು ಷೇರು ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸುವುದೇ ಕಾಯಕವಾಗಿದೆ.
ಟ್ರೇಡಿಂಗ್ ಮಾಡದ ಸಮಯದಲ್ಲಿ ಉದ್ವೇಗಕ್ಕೆ ಒಳಗಾಗಿ ವಿಪರೀತ ಆತಂಕ, ಕೈಕಾಲು ನಡುಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆ ಕಾಣಿಸಿಕೊಂಡಿವೆ. ಆನ್‌ಲೈನ್ ಟ್ರೇಡಿಂಗ್ ಆ್ಯಪ್ ಜೂಜಿನಂತೆ ಆತನನ್ನು ಆವರಿಸಿಕೊಂಡಿದೆ. ಲಾಭಕ್ಕಿಂತ ನಷ್ಟವೇ ಹೆಚ್ಚಾದಾಗ ₹ 80 ಲಕ್ಷ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ. ನಷ್ಟ ಮುಚ್ಚಿಡಲು ಕುಟುಂಬದವರಿಗೆ ಕುಟುಂಬ ಮತ್ತು ಸಮಾಜದಿಂದ ದೂರ ಉಳಿದು ಒಂಟಿತನಕ್ಕೆ ಜಾರಿದ್ದಾನೆ.
ಒಟ್ಟು 10 ಸೆಷನ್‌ಗಳಲ್ಲಿ ಸಮಾಲೋಚನೆ ನಡೆಸಲಾಯಿತು. ಡಿಜಿಟಲ್ ಉಪವಾಸ ಅಂದರೆ ಟ್ರೇಡಿಂಗ್ ಆ್ಯಪ್‌ಗಳಿಂದ ಸಂಪೂರ್ಣವಾಗಿ ದೂರವಿರಿಸಿ, ಹಣಕಾಸು ನಿಯಂತ್ರಣ ಬದಲು, ಯುವಕನ ಹಣಕಾಸಿನ ವ್ಯವಹಾರಗಳ ಅಧಿಕಾರವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿ, ಟ್ರೇಡಿಂಗ್ ನಿಯಂತ್ರಣ. ಟ್ರೇಡಿಂಗ್‌ಗೆ ಪ್ರೇರೇಪಿಸುವ ಅಂಶಗಳಿಂದ ದೂರವಿರಿಸಲಾಯಿತು.
ಯುವಕ ಟ್ರೇಡಿಂಗ್‌ನಿಂದ ಮಾನಸಿಕ ಖಿನ್ನತೆ ಸೇರಿ ಹಲವು ಸಮಸ್ಯೆಗೆ ಒಳಗಾಗಿದ್ದ. ಮಲ್ಟಿಮೋಡಲ್ ಬಿಹೇವಿಯರಲ್ ಇಂಟರ್ವೆನ್ಷನ್'''''''''''''''' ಎಂಬ ವಿಶೇಷ ಚಿಕಿತ್ಸೆ ಮೂಲಕ ಗುಣಪಡಿಸಿದ್ದೇವೆ.