- ಹರಿಹರ ನಗರದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹರಿಹರ
ಸಮಾಜದಲ್ಲಿ ಸಮಾನತೆ, ವ್ಯಕ್ತಿಯ ಘನತೆ, ರಾಷ್ಟ್ರದಲ್ಲಿ ಭಾವೈಕ್ಯತೆ ಬಾಗಿಲು ತೆರೆಯುವಲ್ಲಿ ರಾಷ್ಟ್ರೀಯ ಸೇವಾ ಸಂಘ ಮತ್ತು ಹಿಂದೂ ಸೇವಾ ಸಂಘದ ಕಾರ್ಯಗಳು ಶ್ಲಾಘನೀಯ ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷ ವಚನಾನಂದ ಶ್ರೀ ನುಡಿದರು.ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಸೋಮವಾರ ಸಂಜೆ ನಗರದ ಪಕ್ಕೀರಸ್ವಾಮಿ ಮಠದ ಮುಂಭಾಗ ನಡೆದ, ಹಿಂದೂ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಹಳ್ಳಿಯ ಬಳ್ಳಿ ಬಲವಾಗಿದ್ದರೆ, ದಿಲ್ಲಿಯ ಮೊಗದಲ್ಲಿ ಮಂದಹಾಸ ಎನ್ನುವಂತೆ, ದೇಶದ ತುಂಬೆಲ್ಲ ಹಿಂದೂ ಸಂಘಟನೆಯ ಮತ್ತು ಹಿಂದೂ ಸಮಾಜೋತ್ಸವ ಅನ್ನುವ ಪರಿಕಲ್ಪನೆ ಅತ್ಯಧ್ಬುತ. ಇಂಥ ಕಾರ್ಯದಿಂದಾಗಿ ಜನರು ಜಾಗೃತರಾಗಿ ಬಲಿಷ್ಠ ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತಾದರೆ ವಿಶ್ವಮಟ್ಟದಲ್ಲಿ ಭಾರತ ಶ್ರೇಷ್ಠ ಆಗಲಿದೆ ಎಂದು ಹೇಳಿದರು.ದಿಕ್ಸೂಚಿ ಭಾಷಣದಲ್ಲಿ ತೀರ್ಥಹಳ್ಳಿ ರಾಮಚಂದ್ರ ಒಳೆಬೈಲು ಮಾತನಾಡಿ, ಭಾರತವು ಒಂದು ದೃಷ್ಟಿಯಿಂದ ಹೆಮ್ಮೆಪಡುವಂಥ ರಾಷ್ಟ್ರವಾಗಿದೆ. ವಿಶ್ವದ ಬೇರೆ ರಾಷ್ಟ್ರಗಳು ನಶಿಸಿ ಅವನತಿ ಹೊಂದಿದ್ದರೂ ಭಾರತ ಒಂದೂವರೆ ಸಾವಿರ ದೀರ್ಘ ಆಕ್ರಮಣಕ್ಕೆ ಬಲಿಯಾದರೂ ಮೂಲ ಸಂಸ್ಕೃತಿ ಬಿಡಲಿಲ್ಲ. ಅದರ ಮೂಲಸತ್ವ ಉಳಿಸಿಕೊಂಡು, ದಿನದಿಂದ ದಿನಕ್ಕೆ ಸದೃಢವಾಗಿ ಮೇಲೆ ಏಳುತ್ತಿದೆ ಎಂದರು.
ಹಿಂದೂ ಸಂಗಮ ಅಧ್ಯಕ್ಷ ಸಿ.ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ನಿರಂಜನ, ಹಿಂಡಸಗಟ್ಟ ಲಿಂಗರಾಜ್, ಶಿವಪ್ರಕಾಶ್ ಶಾಸ್ತ್ರಿ, ಹೆಚ್.ಎಸ್.ರಾಘವೇಂದ್ರ, ಪ್ರಕಾಶ್ ಕೋಳೂರ, ಧರಣೇಂದ್ರ, ಒಡ್ನಾಳ ಪ್ರಕಾಶ್, ದಿನೇಶ್ ಕೊಣ್ಣೂರು, ಬಾತಿ ಚಂದ್ರಶೇಖರ್, ಹೊನ್ನಾಳಿ ಚಂದ್ರು, ಚಂದ್ರಕಾಂತ ಗೌಡ, ರೂಪ ಶಶಿಕಾಂತ್, ಸಂತೋಷಿ ಮಹೊಯಿತೆ, ನಾಗಮಣಿ ಶಾಸ್ತ್ರಿ, ಸುಮನ್ ಖಮಿತ್ಕರ್, ರೂಪಾ ಕಾಟ್ವೆ, ಅಶ್ವಿನಿ ರೀಗಲ್, ಶಿವಯೋಗಿ ಸ್ವಾಮಿ ಕತ್ತಲಗೇರಿ, ಇತರರು ಹಾಜರಿದ್ದರು.- - -
-27HRR.01. &01A:ಹರಿಹರದ ಪಕ್ಕೀರಸ್ವಾಮಿ ಮಠದ ಮುಂಭಾಗ ಹಿಂದೂ ಸಂಗಮ ಆಯೋಜನಾ ಸಮಿತಿಯಯಿಂದ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು.