ಕೊಪ್ಪಪ್ರತಿ ವರ್ಷ ಜ.೨೬ರಂದು ನಾವೆಲ್ಲಾ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ನಮಗೆ ೧೯೪೭ರಲ್ಲಿ ಸ್ವಾತಂತ್ರ ಸಿಕ್ಕಿದ್ದರೂ ನಮ್ಮ ದೇಶಕ್ಕೆ ತನ್ನದೇ ಆದ ನಿಯಮಗಳ ಚೌಕಟ್ಟು ಇರಲಿಲ್ಲ. ಈ ಚೌಕಟ್ಟಿನ ಅರ್ಥವೇ ನಮ್ಮೆಲ್ಲರ ಹೆಮ್ಮೆಯ ಸಂವಿಧಾನವಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ಲಾಲ್ ಬಹುದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ, ಕೊಪ್ಪ
ಪ್ರತಿ ವರ್ಷ ಜ.೨೬ರಂದು ನಾವೆಲ್ಲಾ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ನಮಗೆ ೧೯೪೭ರಲ್ಲಿ ಸ್ವಾತಂತ್ರ ಸಿಕ್ಕಿದ್ದರೂ ನಮ್ಮ ದೇಶಕ್ಕೆ ತನ್ನದೇ ಆದ ನಿಯಮಗಳ ಚೌಕಟ್ಟು ಇರಲಿಲ್ಲ. ಈ ಚೌಕಟ್ಟಿನ ಅರ್ಥವೇ ನಮ್ಮೆಲ್ಲರ ಹೆಮ್ಮೆಯ ಸಂವಿಧಾನವಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚಾರಣಾ ಸಮಿತಿಯಿಂದ ಪಟ್ಟಣದ ಲಾಲ್ ಬಹುದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ನಡೆದ ೭೭ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿ ೧೯೫೦ರ ಜ. ೨೬ರಂದು ಈ ಸಂವಿಧಾನ ಜಾರಿಗೆ ಬಂದಿದ್ದರಿಂದ ಈ ದಿನವನ್ನು ನಾವು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿದ್ದೇವೆ ಎಂದರು.
ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ₹೫೦ ಸಾವಿರದ ಅನುದಾನದ ಚೆಕ್ ವಿತರಿಸಲಾಯಿತು.
ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಲಿಖಿತ ಮೋಹನ್ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿ ಸಂವಿಧಾನ ಜಾರಿ ನಂತರ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವತಂತ್ರ, ಧರ್ಮ, ಸಂಸ್ಕೃತಿ, ಶಿಕ್ಷಣ ಸಿಕ್ಕಿವೆ. ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜ.೨೬, ೧೯೫೦ ರಂದು ಭಾರತ ಸಂವಿಧಾನ ಜಾರಿಗೆ ಬಂದಿದೆ. ನಾವೆಲ್ಲರೂ ಇಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ಸಂವಿಧಾನದ ಮಹತ್ವ ಅರಿತು ಸ್ವಾತಂತ್ರ ಸಮಾನತೆ ಹೀಗೆ ಹತ್ತು ಹಲವು ಕಾಯ್ದೆ ಕಾನೂನನ್ನು ಅರ್ಥಪೂರ್ಣವಾಗಿ ಅನುಸರಿಸಬೇಕಿದೆ ಎಂದರು.ಡಿವೈಎಸ್‌ಪಿ. ಬಾಲಾಜಿ ಸಿಂಗ್, ಎಪಿಎಂಸಿ ಅಧ್ಯಕ್ಷ ಎಸ್.ಡಿ. ರಾಜೇಂದ್ರ, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್, ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ಗೋಪಾಲ್, ನೌಕರ ಸಂಘದ ಅಧ್ಯಕ್ಷ ರಾಜೇಂದ್ರ, ಕಾರ್ಯ ನಿರ್ವಹಣಾ ಅಧಿಕಾರಿ ನವೀನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ, ಕೆಡಿಪಿ ಸದಸ್ಯರಾದ ರಾಜಶಂಕರ್, ಬಿ.ಪಿ. ಚಿಂತನ್, ಮೊಹಮ್ಮದ್ ಸಾಧಿಕ್, ಅಶೋಕ್, ಪಪಂ ಮುಖ್ಯಾಧಿಕಾರಿ ಕುರಿಯ ಕೋಸ್, ಅನ್ನಪೂರ್ಣ ನರೇಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.