ಯುವ ಸಂಭ್ರಮ; ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕನ್ನಡ ವೈಭವಕ್ಕೆ ಸಾಕ್ಷಿ

KannadaprabhaNewsNetwork |  
Published : Sep 13, 2025, 02:04 AM IST
12 | Kannada Prabha

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯ ಸ್ಮರಣೆ, ಕನ್ನಡ ನಾಡು ನುಡಿ, ರಾಷ್ಟ್ರೀಯ ಭಾವೈಕ್ಯತೆಯ ಜಪ, ಭಾರ ತೀಯ ಯೋಧರ ಸ್ಮರಣೆಯೊಂದಿಗೆ ಮೊಳಗಿದ ಜೈ ಜವಾನ್, ಜೈ ಕಿಸಾನ್ ಘೋಷಣೆಗಳು. ಬೆಂಗಳೂರು ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಪರಿಸರ ಸಂರಕ್ಷಣೆ ಎಂಬ ನೃತ್ಯಕ್ಕೆ ಹೆಜ್ಜೆ

ಕನ್ನಡಪ್ರಭ ವಾರ್ತೆ ಮೈಸೂರುಸಂವಿಧಾನದ ಮಹತ್ವ, ದೇಶದ ಯೋಧರ ಕೆಚ್ಚೆದೆಯ ಹೋರಾಟ, ರಾಷ್ಟ್ರೀಯ ಭಾವೈಕ್ಯತೆ, ಕನ್ನಡದ ವೈಭವಕ್ಕೆ ಸಾಕ್ಷಿಯಾಗಿದ್ದು ದಸರಾ ಮಹೋತ್ಸವದ ಆಕರ್ಷಣಿಯ ಕೇಂದ್ರವಾದ ಯುವ ಸಂಭ್ರಮ.ಇವೆಲ್ಲವೂ ಯುವ ಸಂಭ್ರಮದಲ್ಲಿ ಮೂರನೇ ದಿನದ ವಿದ್ಯಾರ್ಥಿಗಳ ಪ್ರದರ್ಶಿಸಿದ ನೃತ್ಯದಲ್ಲಿ ಅನಾವರಣಗೊಂಡವು. ದಸರಾ ಮಹೋತ್ಸವದ ಅಂಗವಾಗಿ ನಗರದ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ಹಬ್ಬ ಯುವ ಜನತೆ ಯಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನದೊಂದಿಗೆ ದೇಶ ಭಕ್ತಿಯ ಕಿಚ್ಚನ್ನು ಹಚ್ಚುವಂತೆ ಮಾಡಿತು.ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯ ಸ್ಮರಣೆ, ಕನ್ನಡ ನಾಡು ನುಡಿ, ರಾಷ್ಟ್ರೀಯ ಭಾವೈಕ್ಯತೆಯ ಜಪ, ಭಾರ ತೀಯ ಯೋಧರ ಸ್ಮರಣೆಯೊಂದಿಗೆ ಮೊಳಗಿದ ಜೈ ಜವಾನ್, ಜೈ ಕಿಸಾನ್ ಘೋಷಣೆಗಳು. ಬೆಂಗಳೂರು ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಪರಿಸರ ಸಂರಕ್ಷಣೆ ಎಂಬ ನೃತ್ಯಕ್ಕೆ ಹೆಜ್ಜೆ ಹಾಕಿದರು, ಮೈಸೂರು ಹಿನಕಲ್ ಮೈಸೂರು ರೂರಲ್ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಮೈಸೂರು ರಾಜರ ಕೊಡುಗೆಯ ಬಗ್ಗೆ ತಿಳಿಸಿದರು.ಹುಣಸೂರು ಟ್ಯಾಲೆಂಟ್ ಎಜುಕೇಶನ್ ಟ್ರಸ್ಟ್ ವತಿಯಿಂದ ಪೌರಾಣಿಕ ನೃತ್ಯ ಪ್ರದರ್ಶಿಸಿದರು. ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿಗಳು ಭಾರತೀಯ ಸಾಂಸ್ಕೃತಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು.ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ 59 ನೃತ್ಯ ಪ್ರದರ್ಶನವನ್ನು ವಿದ್ಯಾರ್ಥಿಗಳು ನೀಡಿದರು. ಅಯೋಧ್ಯ ಶ್ರೀರಾಮ ಶಿಲ್ಪಿ ಮೈಸೂರಿನ ಹೆಮ್ಮೆಯ ಅರುಣ್ ಯೋಗಿರಾಜ್, ಮೈಸೂರು ದಸರಾ ವೈಭವ ಅಂದು ಇಂದು, ದೇಶ ಕಾಯುವ ಯೋಧರ ಬಗ್ಗೆ, ಸರ್ಕಾರದ ಗ್ಯಾರೆಂಟಿ ಯೋಜನೆಗಳು ಹೀಗೆ ನಾನಾ ಕಾಲೇಜು ತಂಡಗಳು ಕನ್ನಡ ನಾಡು ನುಡಿ ಯೊಂದಿಗೆ ಕರ್ನಾಟಕದ ಜಾನಪದ ವೈವಿಧ್ಯತೆ ಮತ್ತು ಪರಂಪರೆಯನ್ನು ಬಿಂಬಿಸುವ ನೃತ್ಯಗಳನ್ನು ಮಾಡುವ ಮೂಲಕ ಗಮನ ಸೆಳೆದವು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ