- - ಡಾ. ಮಾಧವ ಪೆರಾಜೆ
ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಡಾ.ಬಿ. ಪವಿತ್ರಾ ಅವರ ಕಡಲೊಳಗಿನ ಕಿಡಿಗಳು ಎಂಬ ಸಂಶೋಧನ ಮಹಾಪ್ರಬಂಧವನ್ನು ಡಾ. ಮಾಧವ ಪೆರಾಜೆ ಬಿಡುಗಡೆಗೊಳಿಸಿದರು. ಪ್ರೊ. ರಾಜಪ್ಪ ದಳವಾಯಿ, ಡಾ.ಎನ್.ಎಂ. ತಳವಾರ, ಡಾ. ಚಿಕ್ಕಮಗಳೂರು ಗಣೇಶ್, ಯು.ಎಸ್. ಮಹೇಶ್ ಇದ್ದರು.
----ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಡಾ.ಬಿ. ಪವಿತ್ರಾ ಅವರ ಕಡಲೊಳಗಿನ ಕಿಡಿಗಳು ಎಂಬ ಸಂಶೋಧನ ಮಹಾಪ್ರಬಂಧವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಾಧ್ಯಾಪಕರಾಗಿ ಬಡ್ತಿ ಹೊಂದಲು ತಮ್ಮದೇ ಗುಂಪಿನ ಪ್ರಕಾಶನ ಮೂಲಕ ಪುಸ್ತಕ ಪ್ರಕಟಿಸಿ, ಸಂಶೋಧನ ಲೇಖನಗಳನ್ನು ಪ್ರಕಟಿಸುವ ಮೂಲಕ ವಿಶ್ವವಿದ್ಯಾನಿಲಯಗಳಿಗೆ ನೇಮಕಗೊಳ್ಳುತ್ತಾರೆ ಎಂದರು.
ಜಾತಿಯನ್ನು ವಿರೋಧಿಸಿ ಮಾತನಾಡುವ ಶೇ.90 ರಷ್ಟು ಜನರು ಜಾತಿಗಳ ಪರವಾಗಿ ಇರುತ್ತಾರೆ. ಹೀಗೆಯೇ ಮಹಿಳಾ ದೌರ್ಜನ್ಯ ಕುರಿತು ಮಾತನಾಡುವವರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೆ, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿಗಳಾಗಿದ್ದವರು ಕನ್ನಡ ವಿವಿ ಕುಲಪತಿ ಮನೆಗೆ ಬಂದಾಗ ಊಟ ಮಾಡಲಿಲ್ಲ ಅಂದರೆ ಅಸ್ಪೃಶ್ಯತೆ ಈಗಲೂ ಜಾರಿಯಲ್ಲಿದೆ ಎನ್ನುವುದು ಸ್ಪಷ್ಟ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಎನ್.ಎಂ. ತಳವಾರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಚಿಕ್ಕಮಗಳೂರು ಗಣೇಶ್, ರೂಪ ಪ್ರಕಾಶನದ ಯು.ಎಸ್. ಮಹೇಶ್ ಇದ್ದರು. ಟಿ.ಆರ್. ಬಸವರಾಜ ಪ್ರಾರ್ಥಿಸಿದರು. ಆರ್. ಚಲಪತಿ ಸ್ವಾಗತಿಸಿದರು. ಡಾ. ಅನ್ನಪೂರ್ಣ ನಿರೂಪಿಸಿದರು.