ರಾಮನಗರ: ತಾಲೂಕಿನ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರಮ್ಯಾಧನಂಜಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದ ಸುಶೀಲರಾಮಯ್ಯ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡಕುಂಠನಹಳ್ಳಿ ಮತ ಕ್ಷೇತ್ರದ ಸದಸ್ಯೆ ರಮ್ಯಾ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಎಇಇ ಜಯಪ್ರಕಾಶ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಪಿಡಿಒ ಚಂದ್ರಶೇಖರ್, ಕಾರ್ಯದರ್ಶಿ ಲಕ್ಷ್ಮಿಬಾಯಿ ಇತರರಿದ್ದರು.ನೂತನ ಉಪಾಧ್ಯಕ್ಷೆ ರಮ್ಯಾ ಮಾತನಾಡಿ, ನನ್ನನ್ನು ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಎಲ್ಲ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ. ಶಾಸಕರಾದ ಬಾಲಕೃಷ್ಣರ ಮಾರ್ಗದರ್ಶನ ಮತ್ತು ಸಹಕಾರ ಪಡೆದು ಎಲ್ಲ ಗ್ರಾಮಗಳಿಗೂ ಮೂಲಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು.
ನೂತನ ಉಪಾಧ್ಯಕ್ಷೆ ರಮ್ಯಾ ಅವರನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜು, ನಿರ್ದೇಶಕ ಪುಟ್ಟಯ್ಯ, ಕಾಂಗ್ರೆಸ್ ಮುಖಂಡರಾದ ಶಿವಣ್ಣ, ಎಸ್‌ಆರ್‌ಎಸ್ ರಾಜಣ್ಣ, ವೆಂಕಟೇಶ್, ಸತೀಶ್, ಉಮಾಶಂಕರ್, ಬಸವರಾಜು, ಬ್ಯಾಟಪ್ಪ, ವೀರಭದ್ರಯ್ಯ, ನರಸಿಂಹಯ್ಯ, ಮಾಜಿ ಗ್ರಾಪಂ ಉಪಾಧ್ಯಕ್ಷ ನಾರಾಯಣಸ್ವಾಮಿ, ನರಸಿಂಹಯ್ಯ, ಮಾಜಿ ಸದಸ್ಯರಾದ ವೆಂಕಟೇಶ್, ಶಾಂತರಾಜು, ಗ್ರಾಪಂ ಅಧ್ಯಕ್ಷರಾದ ಪವಿತ್ರಬಸವರಾಜು, ಸದಸ್ಯರಾದ ಸಂಪತ್ ಕುಮಾರ್, ಸತೀಶ್‌ಕುಮಾರ್, ಸುಮಾ, ಮಹೇಶ್‌ಕುಮಾರ್, ಜ್ಯೋತಿ, ರಮ್ಯಾ, ಮೂರ್ತಿ, ಸುಶೀಲ, ಪುಟ್ಟರೇವಯ್ಯ, ಮಂಜುಳಾ, ವೇಣು ಗೋಪಾಲ್, ಪುಷ್ಪ, ಭಾಗ್ಯ, ಮುನಿರತ್ನ, ವರಲಕ್ಷ್ಮಿ, ಶಾಂತರಾಜು, ತಾಯಮ್ಮರಂಗಸ್ವಾಮಿ ಇತರರು ಅಭಿನಂದಿಸಿದರು. ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡಕುಂಠನಹಳ್ಳಿ ಮತ ಕ್ಷೇತ್ರದ ಮುಖಂಡರು ಬೃಹತ್ ಹಾರ ಹಾಕಿ, ಸಿಹಿ ತಿನಿಸಿ ಸಂಭ್ರಮಿಸಿದರು.3ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕಿನ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷೆ ರಮ್ಯಾಧನಂಜಯ್ಯ ಅವರನ್ನು ಮುಖಂಡರು ಅಭಿನಂದಿಸಿದರು.