ಲೋಕಾಯುಕ್ತ ಬಲೆಗೆ ಮಂಚೇನಹಳ್ಳಿ ಗ್ರಾಮ ಲೆಕ್ಕಾಧಿಕಾರಿ

KannadaprabhaNewsNetwork |  
Published : Feb 22, 2026, 01:45 AM IST
ಲೋಕಾಯುಕ್ತ ಬಲೆಗೆ | Kannada Prabha

ಸಾರಾಂಶ

₹10 ಸಾವಿರ ಬೇಡಿಕೆ ಇಟ್ಟಿದ್ದರು, ₹8 ಸಾವಿರಗಳನ್ನು ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿಸಿಕೊಳ್ಳುವ ವೇಳೆ ಗೌರಿಬಿದನೂರು ನಗರದ ಮಾದನಹಳ್ಳಿಯಲ್ಲಿರುವ ಅವರ ಮನೆಯಲ್ಲಿಯೇ ಲೋಕಾಯುಕ್ತರು ಗ್ರಾಮಲೆಕ್ಕಾಧಿಕಾರಿಯನ್ನು ಬಂಧಿಸಿದ್ದಾರೆ.

ಮಂಚೇನಹಳ್ಳಿ: ಗ್ರಾಪಂ ವ್ಯಾಪ್ತಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ರೈತರೊಬ್ಬರಿಂದ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ರೈತ ಪುನೀತ್ ಕಡಿವಾಳ್ ಅವರಿಗೆ 28 ಗುಂಟೆ ಜಮೀನಿನ ಕ್ರಯ ಮಾಡಿಸಿಕೊಳ್ಳಲು ₹10 ಸಾವಿರ ಬೇಡಿಕೆ ಇಟ್ಟಿದ್ದರು, ₹8 ಸಾವಿರಗಳನ್ನು ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿಸಿಕೊಳ್ಳುವ ವೇಳೆ ಗೌರಿಬಿದನೂರು ನಗರದ ಮಾದನಹಳ್ಳಿಯಲ್ಲಿರುವ ಅವರ ಮನೆಯಲ್ಲಿಯೇ ಲೋಕಾಯುಕ್ತರು ಗ್ರಾಮಲೆಕ್ಕಾಧಿಕಾರಿಯನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ ಪಿ ಅಂಟೋನಿ ಜಾನ್ ನೇತೃತ್ವದಲ್ಲಿ ಡಿವೈಎಸ್ ಪಿ ವೀರೇಂದ್ರ ಕುಮಾರ್ ನೇತೃತ್ವದಲ್ಲಿ ನಡೆದಿದೆ, ಸಿಬ್ಬಂದಿ ಗುರು ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಎಸ್ ಮ್ಯಾಗ್ನೆಟ್ ಯೋಜನೆ: ಬಟ್ಟಲಕಟ್ಟೆಯಲ್ಲಿ ಪ್ರತಿಭಟನೆ
ಹನೂರು ಚನ್ನಪ್ಪ ಕೃತಿ ಗಟ್ಟಿತನದಿಂದ ಕೂಡಿದೆ: ವಿ. ಮನೋಹರ್‌