- ಸಫಾರಿಗೆ ಶೇ.50ರಷ್ಟು ವಾಹನಗಳ ಮಾತ್ರ ಬಳಕೆ । ಟ್ರಿಪ್‌ಗಳ ಸಂಖ್ಯೆಯೂ ಶೇ.50ರಷ್ಟು ಕಟ್ । ಬೆಳಗ್ಗೆ, ಸಂಜೆ ತಲಾ ಒಂದೊಂದೇ ಟ್ರಿಪ್
- ಬಿ.ಎಂ. ಮಲ್ಲೇಶ್, ವಲಯ ಅರಣ್ಯಾಧಿಕಾರಿ
---ಏನೇನು ಬದಲಾವಣೆ?
31 ವಾಹನಗಳ ಬದಲಿಗೆ 15 ಮಾತ್ರ ಸಫಾರಿಗೆ ಪ್ರವೇಶ
ಬೆಳಗ್ಗೆ 6.30 ಗಂಟೆಗೆ, ಮಧ್ಯಾಹ್ನ 3.30 ಗಂಟೆಗೆ ಸಫಾರಿ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಸಫಾರಿಯಲ್ಲಿ 107 ದಿನಗಳ ಹಿಂದೆ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ತಲಾ 2 ಟ್ರಿಪ್‌ಗೆ ಅರಣ್ಯ ಇಲಾಖೆಯ ೧೯ ವಾಹನ, ಜೆಎಲ್‌ಆರ್‌ನ 12 ವಾಹನಗಳು ಸಂಚರಿಸುತ್ತಿದ್ದವು.
ಹೊಸ ಆದೇಶ ಹೀಗಿದೆ?
ಫೆ.21ರಂದು ಮೈಸೂರಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮೈಸೂರು, ಚಾಮರಾಜನಗರ, ಕೊಡಗು ವಿಭಾಗದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕೆಲ ಷರತ್ತುಗಳನ್ನು ವಿಧಿಸಿ ಕಟ್ಟುನಿಟ್ಟಾಗಿ ಸಫಾರಿ ಆರಂಭಿಸಲು ಸೂಚನೆ ಹೊರಡಿಸಿದ್ದರು.
೧೦೭ ದಿನ ಸ್ಥಗಿತ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿ 4 ಮಂದಿ ರೈತರು ಸಾವನ್ನಪ್ಪಿದ ಹಿನ್ನಲೆ ರಾಜ್ಯ ಸರ್ಕಾರ ಕಳೆದ ವರ್ಷ ನ.7ರಂದು ತಾತ್ಕಾಲಿಕವಾಗಿ ಸಫಾರಿ ಸ್ಥಗಿತಗೊಳಿಸಿತ್ತು.
---ಸಫಾರಿ ಆರಂಭಕ್ಕೆ ಷರತ್ತುಗಳಿವು!
೧. ಸುಪ್ರೀಂ ಕೋರ್ಟ್‌ನ ಸಫಾರಿ ಕುರಿತ ಆದೇಶ ಕಡ್ಡಾಯ ಪಾಲನೆ೨. ವನ್ಯಜೀವಿ/ ಹುಲಿ ಪ್ರಾಧಿಕಾರ ಮಾರ್ಗಸೂಚಿಗಳ ಪಾಲಿಸುವುದು
೩. ಸಫಾರಿಯ ಆದಾಯದಲ್ಲಿ ಶೇ.35ರಷ್ಟು ಜನ ಕಲ್ಯಾಣಕ್ಕೆ ಬಳಕೆ೪. ಮಾನವ-ಮೃಗ ಸಂಘರ್ಷ ತಡೆಗೆ ಸಮರ್ಪಕ ಕ್ರಮ ಕೈಗೊಳ್ಳುವಿಕೆ
೫. 2 ತಿಂಗಳಲ್ಲಿ ವಾಹನಗಳಿಗೆ ಜಿಪಿಎಸ್, ಡ್ಯಾಷ್ ಕ್ಯಾಂ ಅಳವಡಿಕೆ೬. ಸಫಾರಿಯಲ್ಲಿ ಬಳಸುತ್ತಿದ್ದ ವಾಹನಗಳ ಪೈಕಿ ಶೇ.50ರಷ್ಟು ಸಫಾರಿಗೆ
7. ಶೇ.50ರಷ್ಟು ಮಾನವ-ಪ್ರಾಣಿ ಸಂಘರ್ಷ, ಕಾಡ್ಗಿಚ್ಚು ತಡೆಗೆ ಮೀಸಲು8. ಸಫಾರಿ ವಾಹನಗಳ ಪೈಕಿ ಆದ್ಯತೆಯಲ್ಲಿ ಬಸ್ಸುಗಳನ್ನೇ ಬಳಸತಕ್ಕದ್ದು
---