ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತಾಲೂಕಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಬಾಗಲಕೋಟೆಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆಯ ಮೇಲೆ ಸುಮಾರು 200 ಜನ ಮುಸ್ಲಿಂ ಗೂಂಡಾಗಳು ಮಸೀದಿ ಮೇಲಿಂದ ಮೆರವಣಿಗೆಗಾರರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಎಸ್ಪಿ ಸೇರಿದಂತೆ ಮೂವರು ಪೊಲೀಸರಿಗೆ ಗಾಯಗಳಾಗಿವೆ. ಆದರೆ, ಬಾಗಲಕೋಟೆ ಎಸ್ಪಿ ತಮ್ಮ ತಲೆಗೆ ಕಲ್ಲುಬಿದ್ದು ಗಾಯವಾಗಿ ರಕ್ತಸ್ರಾವ ಆಗುತ್ತಿದ್ದರೂ ಮಾಧ್ಯಮದ ಎದುರು ಕೆಲವು ಸಣ್ಣ ಕಲ್ಲುಗಳ ತೂರಾಟವಾಗಿದೆ. ಯಾರಿಗೂ ಪೆಟ್ಟಾಗಲಿಲ್ಲ ಎಂದು ಹೇಳಿರುವುದು ಪೊಲೀಸ್ ಇಲಾಖೆಯ ದೌರ್ಬಲ್ಯಕ್ಕೆ ಸಾಕ್ಷಿಯಾಗಿದೆ. ಕೂಡಲೇ ಎಸ್ಪಿಯವರು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಇದ್ದಂತಾಗಿದೆ.ಮದ್ದೂರು, ಚಿತ್ತಾಪುರ, ಬಾಗಲಕೋಟೆ, ಸೇರಿದಂತೆ ಹಲವೆಡೆ ಗಲಾಟೆಯಾಗಿದೆ.ನಾನು ಎಲ್ಲಾ ಮುಸಲ್ಮಾರಿಗೆ ಗೂಂಡಾ ಎಂದು ಕರೆಯೋದಿಲ್ಲ.ಆದರೆ, ಗಲಾಟೆ ಮಾಡದವರೆಲ್ಲಾ ಗೂಂಡಾ ಮುಸ್ಲಿಮರೇ ಆಗಿದ್ದಾರೆ.ರಾಜ್ಯದಲ್ಲಿ ಗೂಂಡಾ ಮುಸಲ್ಮಾನರಿಗೆ, ದೇಶದ್ರೋಹ ಮಾಡುವ ಮುಸಲ್ಮಾನರಿಗೆ ರಕ್ಷಣೆ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.ಔರಂಗಜೇಬನ ಸಂತತಿಯ ಮುಸಲ್ಮಾನ ಗೂಂಡಾಗಳು ಗಲಾಟೆ ನಡೆಸಿದ್ದಾರೆ. ಕಲ್ಲು, ಚಪ್ಪಲಿ ಮಸೀದಿಯಲ್ಲಿ ಇಟ್ಟುಕೊಂಡು ಏನು ಮಾಡುತ್ತಿದ್ದರು. ಕೂಡಲೇ ಕಲ್ಲು, ಚಪ್ಪಲಿ ತೂರಿದ ಮಸೀದಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಕಾಂಗ್ರೆಸ್ ರಾಜಕೀಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ‘ರಣರಂಗ ಬಿಟ್ಟು ಓಡಿಹೋಗುವ ಹೇಡಿ ನಾನಲ್ಲ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವ ಕಾಂಗ್ರೆಸ್ ನಾಯಕರು, ಪಟ್ಟಭದ್ರರ ಹಾಗೂ ಜಾತಿಯ ಬಗ್ಗೆ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಇಲ್ಲದಿದ್ದಲ್ಲಿ ಅವರೇ ಹೇಡಿಗಳಾಗುತ್ತಾರೆ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿರುವುದರಿಂದ ರಾಜ್ಯದ ಜನತೆ ಗೊಂದಲಕ್ಕೀಡಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ತಮ್ಮ, ಹೈಕಮಾಂಡ್ ಹಾಗೂ ಡಿಕೆಶಿ ನಡುವೆ ನಡೆದ ಮಾತುಕತೆ ಏನೆಂಬುದನ್ನು ಬಹಿರಂಗಪಡಿಸಬೇಕು ಎಂದರು.
ಪ್ರಿಯಾಂಕ್ ಖರ್ಗೆ ಚಿಲ್ಲರೆ ವ್ಯಕ್ತಿ
ವಿಧಾನಸೌಧದಲ್ಲಿ ಸರ್ಕಾರ ಮಾಧ್ಯಮದವರಿಗೆ ನಿರ್ಬಂಧ ಹೇರಿರುವುದು ತುಘಲಕ್ ದರ್ಬಾರದಂತೆ ಆಗಿದೆ. ಈ ಹಿಂದೆ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನಾವೂ ಕೂಡ ಜೈಲಿಗೆ ಹೋಗಿದ್ದೆವು. ಆಡಳಿತದಲ್ಲಿ ಮಾಧ್ಯಮದ ಪಾತ್ರ ಏನೆಂಬುದು ನಮಗೆ ತಿಳಿದಿದೆ. ಆದರೆ ಕಾಂಗ್ರೆಸ್ ಈಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಿರುವುದು ಸಂವಿಧಾನ ವಿರೋಧಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.