ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ತಾ. ಪಂ.ಸಭಾಂಗಣದಲ್ಲಿ ತಾ.ಆಡಳಿತ ಹಾಗೂ ವಿವಿಧ ಇಲಾಖೆಗಳು ಮತ್ತು ತಾ.ಕುಂಬಾರ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
ಕನ್ನಡ ಬಾಷೆ ಬೆಳೆಸಿ,ಉಳಿಸಿ ಕನ್ನಡ ಪ್ರಜ್ಞೆಯನ್ನು ವಿಸ್ತರಿಸಿ ವಿಶ್ವಮಟ್ಟ ಕೇರಿಸಿದ ಹಿರಿಮೆಯನ್ನು ಸರ್ವಜ್ಞ ಹೊಂದಿದ್ದಾನೆ ಎಂದ ಅವರು ನೇರ ನಡೆನುಡಿಯ ತ್ರಿಪದಿಯ ಬ್ರಹ್ಮ ಎಂದು ಬಿರುದಾಂಕಿತ ಸರ್ವಜ್ಞ ಭಾರತೀಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ನಿರ್ಮಾಪಕರಲ್ಲಿ ಒಬ್ಬನಾಗಿದ್ದು ಸಮಾಜದಲ್ಲಿ ಕಂಡ ಸಂಗತಿಗಳನ್ನು ಬಿಚ್ಚು ಮಾತುಗಳಿಂದ ಚುಚ್ಚುವಂತೆ ಹೇಳಿರುವ ಧೀರ ಎಂದು ಬಣ್ಣಿಸಿದರು.ತಾ. ಕುಂಬಾರ ಸಂಘದ ಗೌರವಾಧ್ಯಕ್ಷ ಶಿವರುದ್ರಪ್ಪ, ಅಖಿಲ ಭಾರತ ಕುಂಬಾರ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು, ಕಾರ್ಯದರ್ಶಿ ಯುವರಾಜ್, ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಸುರೇಶ್ ತಡಗಣಿ, ಜಿಲ್ಲಾ ಕುಂಬಾರ ಸಂಘದ ನಿರ್ದೇಶಕ ಕೆ.ಷಣ್ಮುಖಪ್ಪ, ಉಡುಪಿ ಜಿಲ್ಲಾ ಕುಲಾಲ್ ಕುಂಬಾರ ಯುವ ವೇದಿಕೆ ಅಧ್ಯಕ್ಷ ಮಂಜುನಾಥ್ ಕುಲಾಲ್ ಸಿದ್ದಾಪುರ, ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ.ಬಸವರಾಜ್ ಕುಲಾಲ್, ಶಿಕ್ಷಕ ರಾಜು ಕುಸ್ಕೂರು ಮಾತನಾಡಿದರು.
ತಹಸೀಲ್ದಾರ್ ವಾಣಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು, ಹಿರಿಯರನ್ನು ಸನ್ಮಾನಿಸಲಾಯಿತು.ಗ್ರೇಡ್ 2 ತಹಸಿಲ್ದಾರ್ ರವಿಕುಮಾರ್, ಭೂ ಹಕ್ಕು ದಾಖಲೆ ಶಿರಸ್ತೇದಾರ್ ವಿನಯ ಆರಾಧ್ಯ, ಪುರಸಭೆ ವ್ಯವಸ್ಥಾಪಕ ರಾಜಕುಮಾರ್, ತಾ.ಪಂ ಪ್ರಥಮ ದರ್ಜೆ ಸಹಾಯಕ ಲಿಂಗರಾಜ್,ಗ್ರಾಮ ಲೆಕ್ಕಾಧಿಕಾರಿ ಅಶ್ಪಕ್ ಅಹಮದ್ ಸಮಾಜದ ಮಾಜಿ ಅಧ್ಯಕ್ಷ ಸಂಗಪ್ಪ, ಸಿ.ಎಚ್.ಚಂದ್ರಶೇಖರಪ್ಪ, ಫಕೀರಪ್ಪ ನಾಗರಾಜಪ್ಪ, ಚಿಕ್ಕೇರಿ ಬಸವರಾಜಪ್ಪ, ಎಂ. ಮಲ್ಲಿಕಾರ್ಜುನಪ್ಪ, ರಾಜೇಂದ್ರ ಚಕ್ರಸಾಲಿ, ಛಾಯಾಗ್ರಹಕ ಲೋಕೇಶ್ ಮತ್ತಿತರರು ಹಾಜರಿದ್ದರು.
ಆರಂಭದಲ್ಲಿ ಸರ್ವಜ್ಞನ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾಪ್ರಕಾರಗಳೊಂದಿಗೆ ನಡೆಯಿತು. ಶ್ರೇಯ ತೊಗರ್ಸಿ ಸಂಗಡಿಗರು ನೃತ್ಯ ಪ್ರದರ್ಶಿಸಿದರು. ಗದಿಗೇಶ್ ಸ್ವಾಗತಿಸಿ,ಸುಧೀರ್ ನಿರೂಪಿಸಿ ವಂದಿಸಿದರು.