2 ಕರುಗಳನ್ನು ಕೊಂದಿದ್ದ ಚಿರತೆ ಕೊನೆಗೂ ಬೋನಿಗೆ

KannadaprabhaNewsNetwork |  
Published : Feb 22, 2026, 01:45 AM IST
ಸಫಾರಿ | Kannada Prabha

ಸಾರಾಂಶ

ಕಳೆದ ವಾರ ಎರಡು ಕರುಗಳನ್ನು ಬಲಿ ಪಡೆದಿದ್ದ ಚಿರತೆಯೊಂದು ಮತ್ತೆ ಆಹಾರ ಅರಸಿ ಬಂದು ಬೋನಿಗೆ ಬಿದ್ದು ಬಂಧಿಯಾದ ಘಟನೆ ಪಟ್ಟಣದ ಬಳಿಯ ಮಣಗಳ್ಳಿ ಬಳಿ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.

- ಮಣಗಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕಳೆದ ವಾರ ಎರಡು ಕರುಗಳನ್ನು ಬಲಿ ಪಡೆದಿದ್ದ ಚಿರತೆಯೊಂದು ಮತ್ತೆ ಆಹಾರ ಅರಸಿ ಬಂದು ಬೋನಿಗೆ ಬಿದ್ದು ಬಂಧಿಯಾದ ಘಟನೆ ಪಟ್ಟಣದ ಬಳಿಯ ಮಣಗಳ್ಳಿ ಬಳಿ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.

ಗುಂಡ್ಲುಪೇಟೆ-ಹಂಗಳ ರಸ್ತೆಯ ಮಣಗಳ್ಳಿಯ ನಾಗರಾಜುಗೆ ಸೇರಿದ ಜಮೀನಿನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಸಿಬ್ಬಂದಿ ಇರಿಸಿದ್ದ ಬೋನಿಗೆ ಸುಮಾರು ೩ ವರ್ಷದ ಹೆಣ್ಣು ಚಿರತೆ ಲಾಕ್‌ ಆಗಿದೆ.

ಕಳೆದ ಗುರುವಾರ ರಾತ್ರಿ ಮಣಗಳ್ಳಿ ಬಳಿ ಎರಡು ಹಸುಗಳ ಕರುಗಳ ಮೇಲೆ ದಾಳಿ ನಡೆಸಿ ಬಲಿ ಪಡೆದಿತ್ತು. ವಿಷಯ ತಿಳಿದ ಗುಂಡ್ಲುಪೇಟೆ ಬಫರ್‌ ಜೋನ್‌ ವಲಯ ಅರಣ್ಯಾಧಿಕಾರಿ ಶಿವಕುಮಾರ್‌, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ರೈತ ನಾಗರಾಜು ಜಮೀನಿನಲ್ಲಿ ಶುಕ್ರವಾರ ಸಂಜೆ ಬೋನು ಇರಿಸಿದ್ದರು.

ಎರಡು ಜಾನುವಾರಗಳ ತಿಂದ ರುಚಿ ಕಂಡಿದ್ದ ಚಿರತೆ ಶುಕ್ರವಾರ ರಾತ್ರಿ ನಾಗರಾಜು ಜಮೀನಿಗೆ ಬಂದಾಗ ಬೋನಿಗೆ ಬಿದ್ದಿದೆ. ವಲಯ ಅರಣ್ಯಾಧಿಕಾರಿ ಶಿವಕುಮಾರ್‌ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೋನಿಗೆ ಬಿದ್ದ ಚಿರತೆಯನ್ನು ಎಸಿಎಫ್‌ ಕೆ. ಸುರೇಶ್‌ ಗಮನಕ್ಕೆ ತಂದು ಬಂಡೀಪುರ ಮೂಲೆಹೊಳೆ ಅರಣ್ಯದಲ್ಲಿ ಬಿಡಲಾಗಿದೆ.

---

೨೧ಜಿಪಿಟಿ೩

ಮಣಗಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಲಿ ನಿವೇಶನ‌ದ ಕಸ ಸ್ವಚ್ಛಮಾಡದಿದ್ದರೆ 1 ಲಕ್ಷ ದಂಡ
ನಿನ್ನೆ 17 ಕಿ.ಮೀ ಫುಟ್ಪಾತ್ ಒತ್ತುವರಿ ತೆರವು