ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಜಿ.ಹೊಸಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಶೀತಲೀಕರಣ (ಬಿಎಂಸಿ) ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಒಕ್ಕೂಟ ಗುಣಮಟ್ಟದಲ್ಲೂ ಒಳ್ಳೆಯ ಸ್ಥಾನದಲ್ಲಿದೆ. ಎಲ್ಲರ ಸಹಕಾರವಿಲ್ಲದೆ ಹೋದರೆ ಯಾವುದೇ ಸಂಘಗಳು ಮುಂದೆ ಬರಲು ಸಾಧ್ಯವಿಲ್ಲ ಎಂದರು.
ಸಹಕಾರ ಸಂಘಗಳು, ಮನ್‌ಮುಲ್ ಅಭಿವೃದ್ಧಿಯತ್ತ ಮುನ್ನಡೆಯಬೇಕಾದರೆ ಉತ್ಪಾದಕರು ಗುಣಮಟ್ಟದ ಹಾಲನ್ನು ಡೇರಿಗೆ ಹಾಕಬೇಕು. ಸಹಕಾರ ಸಂಘಗಳು ನಮ್ಮದು ಎನ್ನುವ ಮನೋಭಾವ ಬಂದಾಗ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದರು.ಎರಡು ಹಸುಗಳನ್ನು ಸಾಕಿ ಉತ್ಪಾದಕರು ಡೇರಿಗೆ ಹಾಲು ಸರಬರಾಜು ಮಾಡಿದರೆ ಪ್ರತಿವಾರ ಹಣ ಸಂದಾಯವಾಗುತ್ತದೆ. ಆದ್ದರಿಂದ ನಿರುದ್ಯೋಗಿ ಯುವಕ ಮಿತ್ರರು ಉದ್ಯೋಗಕ್ಕೆ ಅಲೆಯದೆ ಹೈನುಗಾರಿಕೆ ಕೈಗೊಂಡರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ಉತ್ಪಾದಕರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಹಲವು ಸೌಲಭ್ಯ ಪಡೆಯಬಹುದು. ಉತ್ಪಾದಕರಿಗಾಗಿ ಮ್ಯಾಟ್, ಹಾಲು ಕರೆಯುವ ಯಂತ್ರ, ಚಾಪ್ ಕಟ್ಟರ್ ಸೇರಿದಂತೆ ಮನ್ಮುಲ್‌ನಿಂದ ಹಲವು ಯೋಜನೆ ರೂಪಿಸಲಾಗಿದೆ ಎಂದರು.
ಮನ್ ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಮಂಡ್ಯ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಎ.ಎನ್. ಮಂಜೇಶ್ ಗೌಡ, ಮಾರ್ಗ ವಿಸ್ತರಣಾಧಿಕಾರಿ ಎಂ.ಲಕ್ಷ್ಮಿ, ನೌಕರರ ಯೂನಿಯನ್ ಅಧ್ಯಕ್ಷ ಜಿ.ಕೆ.ಶಿವಕುಮಾರ್, ಜಿ.ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಲ್.ಧನಂಜಯ, ಉಪಾಧ್ಯಕ್ಷೆ ಸಾವಿತ್ರಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ನಾಗೇಶ್, ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ಸದಸ್ಯರಾದ ಅಜಯ್, ಚಿಕ್ಕ ಬೋರಯ್ಯ ಇತರರಿದ್ದರು.