ಕನ್ನಡಪ್ರಭ ವಾರ್ತೆ, ಮಂಡ್ಯ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ಶೇ.೯೭.೧೩ರಷ್ಟು ಫಲಿತಾಂಶ ಗಳಿಸಿ ಹೊಸ ದಾಖಲೆಯನ್ನು ನಿರ್ಮಿಸಿದೆ. ರ್ಯಾಂಕ್ ಪಟ್ಟಿಯಲ್ಲಿ ರಾಜ್ಯಕ್ಕೇ ಐದನೇ ಸ್ಥಾನದಲ್ಲಿದೆ. ೨೦೨೧-೨೨ನೇ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೯೪.೭೦ರಷ್ಟು ಫಲಿತಾಂಶ ಗಳಿಸಿದ್ದು ಜಿಲ್ಲೆಯ ಇದುವರೆಗಿನ ಸಾಧನೆಯಾಗಿತ್ತು.೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ ಶೇ.೬೯.೨೭ರಷ್ಟು ಫಲಿತಾಂಶ ಗಳಿಸುವುದರೊಂದಿಗೆ ರಾಜ್ಯಕ್ಕೆ ೧೨ನೇ ಸ್ಥಾನ ಪಡೆದುಕೊಂಡಿತ್ತು. ೨೦೨೩-೨೪ನೇ ಸಾಲಿನಲ್ಲಿ ಜಿಲ್ಲೆ ಶೇ.೭೪.೫೪ ರಷ್ಟು ಫಲಿತಾಂಶ ಗಳಿಸಿ ೧೯ನೇ ಸ್ಥಾನದಲ್ಲಿತ್ತು. ೨೦೨೩-೨೪ನೇ ಸಾಲಿಗಿಂತ ಶೇ.೫.೨೭ರಷ್ಟು ಕಡಿಮೆ ಫಲಿತಾಂಶ ಗಳಿಸಿದ್ದರೂ ಸ್ಥಾನಪಲ್ಲಟಗೊಂಡಿತ್ತು. ಈ ವರ್ಷ ಶೇ.೨೭.೮೬ರಷ್ಟು ಫಲಿತಾಂಶ ಹೆಚ್ಚಿಸಿಕೊಂಡು ಮತ್ತೆ ಏಳು ಸ್ಥಾನಗಳಷ್ಟು ಮೇಲಕ್ಕೇರಿದೆ.ಪರೀಕ್ಷೆಗೆ ನೋಂದಣಿಯಾಗಿದ್ದ ೯೪೬೭ ಗಂಡು, ೯೩೪೮ ಹೆಣ್ಣು ಮಕ್ಕಳು ಸೇರಿದಂತೆ ೧೮೮೧೫ ವಿದ್ಯಾರ್ಥಿಗಳಲ್ಲಿ ೯೦೮೭ ಗಂಡು, ೯೧೮೮ ಹೆಣ್ಣು ಸೇರಿ ೧೮೨೭೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗಂಡು ಮಕ್ಕಳು ಶೇ.೯೫.೯೯ರಷ್ಟು ಫಲಿತಾಂಶ ಗಳಿಸಿ ಹಿನ್ನಡೆ ಅನುಭವಿಸಿದ್ದರೆ, ಹೆಣ್ಣು ಮಕ್ಕಳು ಶೇ.೯೫.೯೯ ರಷ್ಟು ಫಲಿತಾಂಶದೊಂದಿಗೆ ಮೇಲುಗೈ ಸಾಧಿಸಿದ್ದಾರೆ.ತಾಲೂಕುವಾರು ಫಲಿತಾಂಶದಲ್ಲಿ ಮಂಡ್ಯ ಉತ್ತರ ಶೇ.೯೮.೨೫ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಶ್ರೀರಂಗಪಟ್ಟಣ ಶೇ.೯೫.೪೧ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಕಳೆದ ವರ್ಷ ಮಂಡ್ಯ ದಕ್ಷಿಣ ಶೇ.೭೯.೭೭ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿತ್ತು.ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೪೫೪೬ ಬಾಲಕರು, ೪೫೪೧ ಬಾಲಕಿಯರು ಸೇರಿ ೯೦೮೭ ವಿದ್ಯಾರ್ಥಿಗಳಲ್ಲಿ ೪೪೭೭ ಬಾಲಕರು ೪೫೨೩ ಬಾಲಕಿಯರು ಸೇರಿದಂತೆ ೯೦೦೦ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬಾಲಕರು ಶೇ.೭೩.೪೯ ಫಲಿತಾಂಶ, ಬಾಲಕಿಯರು ಶೇ.೮೬.೭೩ರಷ್ಟು ಫಲಿತಾಂಶದೊಂದಿಗೆ ೯೯.೦೪ರಷ್ಟು ಫಲಿತಾಂಶ ಗಳಿಸಿದ್ದಾರೆ.ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೪೯೨೧ ಬಾಲಕರು, ೪೮೦೭ ಬಾಲಕಿಯರು ಸೇರಿ ೯೭೨೮ ವಿದ್ಯಾರ್ಥಿಗಳಲ್ಲಿ ೪೬೧೦ ಬಾಲಕರು ೪೬೬೫ ಬಾಲಕಿಯರು ಸೇರಿ ೯೨೭೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರು ಶೇ.೯೩.೬೮ ಹಾಗೂ ಬಾಲಕಿಯರು ೯೭.೦೫ ಫಲಿತಾಂಶ ಗಳಿಸಿದ್ದು, ಒಟ್ಟು ೯೫.೩೪ರಷ್ಟು ಫಲಿತಾಂಶ ದೊರಕಿದೆ.ಗ್ರಾಮೀಣ ಭಾಗದಲ್ಲಿ ಪರೀಕ್ಷೆ ಬರೆದ ೭೦೬೦ ಬಾಲಕರು, ೬೮೮೬ ಬಾಲಕಿಯರು ಸೇರಿ ೧೩೯೪೬ ವಿದ್ಯಾರ್ಥಿಗಳಲ್ಲಿ ೬೭೮೩ ಬಾಲಕರು, ೬೭೬೮ ಬಾಲಕಿಯರು ಸೇರಿ ೧೩೫೫೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರು ಶೇ.೯೬.೦೮ ರಷ್ಟು, ಬಾಲಕಿಯರು ಶೇ.೯೮.೨೯ ಫಲಿತಾಂಶ ಪಡೆದುಕೊಂಡಿದ್ದು, ಒಟ್ಟು ೯೭.೧೭ರಷ್ಟು ಫಲಿತಾಂಶ ದೊರಕಿದೆ.ನಗರ-ಪಟ್ಟಣ ಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೨೪೦೭ ಬಾಲಕರು, ೨೪೬೨ ಬಾಲಕಿಯರು ಸೇರಿ ೪೮೬೯ ವಿದ್ಯಾರ್ಥಿಗಳಲ್ಲಿ ೨೩೦೪ ಬಾಲಕರು, ೨೪೨೦ ಬಾಲಕಿಯರು ಸೇರಿ ೪೭೨೪ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬಾಲಕರು ಶೇ.೯೫.೭೨ ಹಾಗೂ ಬಾಲಕಿಯರು ೯೮.೨೯ರಷ್ಟು ಫಲಿತಾಂಶದೊಂದಿಗೆ ಒಟ್ಟು ೯೭.೦೨ ಫಲಿತಾಂಶ ದೊರಕಿದೆ.-------------------------------------------ಜಿಲ್ಲೆಯ ಫಲಿತಾಂಶದ ವಿವರತಾಲೂಕು ಒಟ್ಟು ಶಾಲೆ ನೋಂದಣಿ ಉತ್ತೀರ್ಣರಾದವರು ಫಲಿತಾಂಶ ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟುಮಂಡ್ಯ ಉತ್ತರ ೩೩ ೬೩೬ ೫೬೨ ೧೧೯೮ ೬೨೫ ೫೫೨ ೧೧೭೭ ೯೮.೨೭ ೯೮.೨೨ ೯೮.೨೫ಕೆ.ಆರ್.ಪೇಟೆ ೫೬ ೧೧೬೭ ೧೨೫೫ ೨೪೨೨ ೧೧೩೨ ೧೨೩೯ ೨೩೭೧ ೯೭.೦೦ ೯೮.೭೩ ೯೭.೮೯ಮಂಡ್ಯ ದಕ್ಷಿಣ ೬೭ ೧೬೧೪ ೧೫೩೬ ೩೧೫೦ ೧೫೬೨ ೧೫೧೪ ೩೦೭೬ ೯೬.೭೮ ೯೮.೫೭ ೯೭.೬೫ಪಾಂಡವಪುರ ೪೮ ೧೦೦೮ ೧೦೨೯ ೨೦೩೭ ೯೭೦ ೧೦೧೬ ೧೯೮೬ ೯೬.೨೩ ೯೮.೭೪ ೯೭.೫೦ಮದ್ದೂರು ೯೦ ೧೫೬೧ ೧೫೫೫ ೩೧೧೬ ೧೪೯೮ ೧೫೩೪ ೩೦೩೨ ೯೫.೯೬ ೯೮.೬೫ ೯೭.೩೦ಮಳವಳ್ಳಿ ೭೪ ೧೪೨೬ ೧೫೩೭ ೨೯೬೩ ೧೩೬೩ ೧೫೦೯ ೨೮೭೨ ೯೫.೫೮ ೯೮.೧೮ ೯೬.೯೩ನಾಗಮಂಗಲ ೫೩ ೧೧೮೧ ೯೮೪ ೨೧೬೫ ೧೧೨೦ ೯೫೮ ೨೦೭೮ ೯೪.೮೩ ೯೭.೩೬ ೯೫.೯೮ಶ್ರೀರಂಗಪಟ್ಟಣ ೫೩ ೮೭೪ ೮೯೦ ೧೭೬೪ ೮೧೭ ೮೬೬ ೧೬೮೩ ೯೩.೪೮ ೯೭.೩೦ ೯೫.೪೧ಒಟ್ಟು ೪೭೪ ೯೪೬೭ ೯೩೪೮ ೧೮೮೧೫ ೯೦೮೭ ೯೧೮೮ ೧೮೨೭೫೬ ೯೫.೯೯ ೯೮.೨೯ ೯೭.೧೩----------------------------------------------------------------------------ಸರ್ಕಾರಿ, ಅನುದಾನ, ಅನುದಾನ ರಹಿತ ಶಾಲೆಗಳ ಫಲಿತಾಂಶ ಪರೀಕ್ಷೆಗೆ ಹಾಜರಾದವರು ಉತ್ತೀರ್ಣರಾದವರು ಫಲಿತಾಂಶ ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟುಸರ್ಕಾರಿ ೪೩೮೬ ೪೬೪೫ ೯೦೩೧ ೪೧೯೫ ೪೫೬೪ ೮೭೫೯ ೯೫.೬೫ ೯೮.೨೬ ೯೬.೯೯ಅನುದಾನ ೧೭೦೮ ೧೯೫೬ ೩೬೬೪ ೧೫೭೬ ೧೮೯೩ ೩೪೬೯ ೯೨.೨೭ ೯೬.೭೮ ೯೪.೬೮ಅನುದಾನರಹಿತ ೩೩೭೩ ೨೭೪೭ ೬೧೨೦ ೩೩೧೬ ೨೭೩೧ ೬೦೪೭ ೯೮.೩೧ ೯೯.೪೨ ೯೮.೮೧ಒಟ್ಟು ೯೪೬೭ ೯೩೪೮ ೧೮೮೧೫ ೯೦೮೭ ೯೧೮೮ ೧೮೨೭೫ ೯೫.೯೯ ೯೮.೨೯ ೯೭.೧೩-----------------------------------------------------------------------------ಶೇ.೧೦೦ರಷ್ಟು ಫಲಿತಾಂಶ ಗಳಿಸಿದ ಶಾಲೆಗಳುತಾಲೂಕು ಒಟ್ಟು ಶಾಲೆ ಸರ್ಕಾರಿ ಅನುದಾನ ಅ.ರಹಿತ ಒಟ್ಟುಕೆ.ಆರ್.ಪೇಟೆ ೫೬ ೨೩ ೦೪ ೧೨ ೩೯ಮದ್ದೂರು ೯೦ ೩೩ ೦೪ ೨೩ ೬೦ಮಂಡ್ಯ ಉತ್ತರ ೩೩ ೧೫ ೦೩ ೦೩ ೨೧ಮಂಡ್ಯ ದಕ್ಷಿಣ ೬೭ ೧೪ ೦೫ ೧೯ ೩೮ನಾಗಮಂಗಲ ೫೩ ೧೬ ೦೬ ೦೬ ೨೮ಪಾಂಡವಪುರ ೪೮ ೧೧ ೦೧ ೧೨ ೨೪ಶ್ರೀರಂಗಪಟ್ಟಣ ೫೩ ೧೧ ೦೧ ೧೧ ೨೩ಒಟ್ಟು ೪೭೪ ೧೪೩ ೨೮ ೯೪ ೨೬೫-------------------------------------------------------ಜಿಲ್ಲೆಯ ಎಸ್ಸೆಸ್ಸೆಲ್ಸಿ ಟಾಪರ್ಸ್‌ಎಸ್.ಶ್ರೀಲಕ್ಷ್ಮೀ ೬೨೧ ಸಂತ ಜೋಸೆಫ್ ಪ್ರೌಢಶಾಲೆ ಮಂಡ್ಯ ಟಿ.ಆರ್.ಚಂದುಶ್ರೀ ೬೨೧ ಜೆ..ಜೆ. ಪಬ್ಲಿಕ್ ಸ್ಕೂಲ್, ಮಳವಳ್ಳಿಎಂ.ಕೀರ್ತನಾ ೬೨೧ ಬಿಜಿಎಸ್ ಪ್ರೌಢಶಾಲೆ, ಪಾಂಡವಪುರಕೆ.ಎಂ.ಚರಣ್ಯ ೬೨೦ ಆಶೀರ್ವಾದ್ ಪ್ರೌಢಶಾಲೆ, ತೇಗನಹಳ್ಳಿ, ಕೆ.ಆರ್.ಪೇಟೆಹೆಚ್.ಧನ್ಯತಾ ೬೨೦ ಆಶೀರ್ವಾದ್ ಪ್ರೌಢಶಾಲೆ, ತೇಗನಹಳ್ಳಿ, ಕೆ.ಆರ್.ಪೇಟೆಎನ್.ಶ್ರೇಯಾ ೬೧೯ ಇಂದಿರಾಗಾಂಧಿ ವಸತಿ ಶಾಲೆ, ಶ್ರೀರಂಗಪಟ್ಟಣಎಲ್.ವೈ.ಲಾವಣ್ಯ ೬೧೯ ಆಚಾರ್ಯ ವಿದ್ಯಾಶಾಲೆ, ಕೆ.ಆರ್.ಪೇಟೆಜಿ.ಎಸ್.ರಮ್ಯಾ ೬೧೯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೆ.ಆರ್.ಪೇಟೆಎಂ.ಕೆ.ಭಾನುಜಾ ೬೧೮ ಎಸ್‌ಎಸ್‌ಕೆಸಿ ಪ್ರೌಢಶಾಲೆ, ಕೆ.ಆರ್.ಪೇಟೆಹೆಚ್.ವಿ.ನವ್ಯಾ ೬೧೮ ಡಿ.ಕೆ.ಗೌಡ ಪ್ರೌಢಶಾಲೆ, ಚಂದೂಪುರ, ಮದ್ದೂರುಫಿರ್ದೋಸ್ ಷರೀಫ್ ೬೧೮ ಶ್ರೀ ಭಕ್ತನಾಥಸ್ವಾಮಿ ಪ್ರೌಢಶಾಲೆ, ಬಿ.ಜಿ.ನಗರ, ನಾಗಮಂಗಲಎಸ್.ಶರ್ಮಿಳಾ ೬೧೭ ಸಂತ ಜೋಸೆಫರ ಪ್ರೌಢಶಾಲೆ, ಮಂಡ್ಯ-------------------------------------------------ಮಂಡ್ಯ ಜಿಲ್ಲೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಾಖಲೆಯ ಫಲಿತಾಂಶ ಬಂದಿರುವುದು ಖುಷಿ ತಂದಿದೆ. ನಮ್ಮ ಶ್ರಮ ಸಾರ್ಥಕವಾಗಿದೆ. ೨೦೨೨ರಲ್ಲಿ ಜಿಲ್ಲೆಗೆ ಶೇ.೯೪.೭೦ರಷ್ಟು ಫಲಿತಾಂಶ ಬಂದಿತ್ತು. ಇದೀಗ ೯೭.೧೩ರಷ್ಟು ಫಲಿತಾಂಶ ಸಿಕ್ಕಿದೆ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಜಿಲ್ಲೆಗೆ ಒಳ್ಳೆಯ ಹೆಸರು ಬರುವಂತೆ ಮಾಡಿದ್ದಾರೆ. ಶಿಕ್ಷಕರ ಶ್ರಮವೂ ಸಾಧನೆಯ ಹಿಂದಿದೆ.- ಜಿ.ಎ.ಲೋಕೇಶ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ.