ಮಂಡ್ಯ ಮಂಜುನಾಥ
ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿದ ಬೆನ್ನಲ್ಲೇ ಹಳ್ಳಿಗಳಲ್ಲಿ ಈಗ ಚುನಾವಣಾ ಜ್ವರ ಶುರುವಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲ್ಲೆಲ್ಲೂ ಚುನಾವಣೆಯದ್ದೇ ಮಾತು. ಸ್ಪರ್ಧಾಕಾಂಕ್ಷಿಗಳಲ್ಲಿ ರಣೋತ್ಸಾಹ. ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದವರಿಂದ ಪ್ರಚಾರ ಚಟುವಟಿಕೆ ಆರಂಭ. ರಾಜಕೀಯ ಕಾರಣಗಳಿಂದ ಮೀಸಲು ಕ್ಷೇತ್ರವಾಗಿರುವ ಕಡೆ ಹಲವರಿಗೆ ನಿರಾಸೆ. ಮೀಸಲು ಬದಲಾವಣೆ ಮಾಡುವಂತೆ ನ್ಯಾಯಾಲಯಕ್ಕೆ ಮೊರೆ.
ಮಳೆ ಕೊರತೆ ಹಾಗೂ ಬರದ ನಡುವೆಯೂ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ನಿಗದಿಯಾಗಿರುವ ಮೀಸಲು ಹಳ್ಳಿಗಳಲ್ಲಿ ಸಂಚಲನ ಸೃಷ್ಟಿಸುವಂತೆ ಮಾಡಿದೆ. ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಲೆಕ್ಕಾಚಾರ ಶುರುವಾಗಿದೆ. ಯಾವ ಯಾವ ಕ್ಷೇತ್ರಗಳಲ್ಲಿ ನಮ್ಮ ಬಲವಿದೆ. ಎಲ್ಲಿ ನಮ್ಮ ಪ್ರಾಬಲ್ಯ ಕುಂದಿದೆ. ಸಮನಾಂತರ ಪೈಪೋಟಿ ಇರುವ ಕ್ಷೇತ್ರಗಳು ಯಾವುವು. ಗೆಲ್ಲುವ ಅಭ್ಯರ್ಥಿಗಳು ಯಾರಿದ್ದಾರೆ. ಯಾರನ್ನು ಕಣಕ್ಕಿಳಿಸಿದರೆ ಗೆಲುವು ಸಾಧ್ಯ. ಮಹಿಳಾ ಕ್ಷೇತ್ರಗಳಲ್ಲಿ ಯಾರನ್ನು ಅಭ್ಯರ್ಥಿ ಮಾಡುವುದು. ಮೀಸಲು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲುವುದು ಹೇಗೆ ಎಂಬೆಲ್ಲಾ ಲೆಕ್ಕಾಚಾರಗಳು ಒಳಗೊಳಗೆ ನಡೆಯುತ್ತಿವೆ.ರಾಜಕೀಯ ಪ್ರಭಾವದಿಂದ ಮೀಸಲು ಕ್ಷೇತ್ರ:
ಕುಟುಂಬದವರೇ ಎದುರಾಳಿಗಳಾಗುವ ಸಾಧ್ಯತೆ:
ಪರೋಕ್ಷವಾಗಿ ಚುನಾವಣಾ ಪ್ರಚಾರ:
ಶಾಸಕರು- ಮಾಜಿ ಶಾಸಕರಿಂದ ಅವಲೋಕನ:
ಅನ್ಯ ಕ್ಷೇತ್ರಗಳತ್ತ ಗಮನ:
ಮೀಸಲು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ. ಆನಂತರದಲ್ಲಿ ಚುನಾವಣಾ ಕಾರ್ಯಚಟುವಟಿಕೆಗಳು ಮತ್ತಷ್ಟು ಬಿರುಸನ್ನು ಪಡೆದುಕೊಳ್ಳಲಿವೆ.
ಜಿಲ್ಲೆಯಲ್ಲಿ ಯಾವುದೇ ಚುನಾವಣೆ ನಡೆದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಸೆಣಸಾಟ ಇದ್ದೇ ಇರುತ್ತದೆ. ಹಿಂದೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದ್ದ ಬಿಜೆಪಿ ಅಲ್ಲಲ್ಲಿ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳುತ್ತಾ ಬೆಳವಣಿಗೆ ಸಾಧಿಸುತ್ತಿರುವುದು ಬಹಿರಂಗ ಸತ್ಯ. ಬಿಜೆಪಿ ಮುಖಂಡರು ಪ್ರವರ್ಧಮಾನಕ್ಕೆ ಬರುತ್ತಿದ್ದು, ಹಲವೆಡೆ ತ್ರಿಕೋನ ಪೈಪೋಟಿ ಏರ್ಪಡುವ ಸಾಧ್ಯತೆಗೂ ಇವೆ. ಗ್ರಾಮ ಪಂಚಾಯಿತಿ ಚುನಾವಣೆ ರಾಜಕೀಯ ಪಕ್ಷಗಳ ಚಿಹ್ನೆಗಳ ಮೇಲೆ ನಡೆಯದೇ ಇದ್ದರೂ ಮೂರು ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಆ ಪಕ್ಷದ ನಾಯಕರು ಹಲವಾರು ಕ್ಷೇತ್ರಗಳ ಮೀಸಲಾತಿಯನ್ನು ಬದಲಾಯಿಸಿ ಪ್ರಬಲ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ನೀಡದಂತೆ ಪ್ರಯತ್ನಗಳನ್ನು ನಡೆಸಿದ್ದಾರೆನ್ನಲಾಗಿದೆ. ಅದೇ ರೀತಿ ಜೆಡಿಎಸ್- ಬಿಜೆಪಿಯವರು ಅದಕ್ಕೆ ಸೆಡ್ಡು ಹೊಡೆದು ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದರೆ, ಪ್ರತಿಷ್ಠೆಯಾಗಿ ಪರಿಗಣಿಸಿದವರು ಮೀಸಲು ರದ್ಧತಿ ಕೋರಿ ನ್ಯಾಯಾಲಯದ ಕದ ತಟ್ಟಿದ್ದಾರೆ. ಇದರಿಂದ ಹಲವು ಗ್ರಾಮ ಪಂಚಾಯಿತಿ ಕ್ಷೇತ್ರದ ಚುನಾವಣೆಗಳಿಗೆ ಬ್ರೇಕ್ ಬೀಳುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.ಜೆಡಿಎಸ್ ನಾಯಕರೂ ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ೨೦೨೮ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಂಚಾಯಿತಿಗಳನ್ನು ಗೆಲ್ಲುವುದಕ್ಕೆ ರಣತಂತ್ರ ರೂಪಿಸುತ್ತಿದ್ದಾರೆ. ಪಂಚಾಯಿತಿ ಸ್ಥಾನಗಳು ಕೈತಪ್ಪಿ ಹೋಗದಂತೆ ಮುಖಂಡರು- ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಪಕ್ಷದ ಮುಖಂಡರು- ಕಾರ್ಯಕರ್ತರು ಪಂಚಾಯಿತಿಯೊಳಗಿನ ಲಾಭ- ನಷ್ಟದ ಲೆಕ್ಕಾಚಾರವನ್ನು ನಾಯಕರ ಮುಂದಿಟ್ಟು ಗೆಲುವಿಗೆ ಬೇಕಾದ ಕಾರ್ಯತಂತ್ರಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಕಾಂಗ್ರೆಸ್ ಪ್ರಾಬಲ್ಯವಿರುವ ಕಡೆಗಳಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಕೂಟ ಒಂದಾಗಿ ತಮ್ಮ ಪಕ್ಷದ ಬೆಂಬಲಿಗ ಅಭ್ಯರ್ಥಿಗಳಾಗಿ ಪ್ರಬಲರನ್ನು ಕಣಕ್ಕಿಳಿಸಿ ಕೈ ಪಕ್ಷಕ್ಕೆ ಹಿನ್ನಡೆ ಉಂಟುಮಾಡುವುದಕ್ಕೆ ತಂತ್ರಗಾರಿಕೆ ನಡೆಸಲಾಗುತ್ತಿದೆ. ಸ್ಪರ್ಧೆಗೆ ತೀವ್ರ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರಾದವರನ್ನು ತಮ್ಮತ್ತ ಸೆಳೆದುಕೊಂಡು ಕಣಕ್ಕಿಳಿಸುವ ಪ್ರಯತ್ನಗಳನ್ನು ಮೈತ್ರಿ ಪಕ್ಷದ ಮುಖಂಡರು- ನಾಯಕರು ನಡೆಸುತ್ತಿದ್ದಾರೆ. ಬಿಜೆಪಿ ಬಲವಿರುವ ಪಂಚಾಯಿತಿ ಕ್ಷೇತ್ರಗಳಲ್ಲಿ ಜೆಡಿಎಸ್‌ನವರು ಅವರಿಗೆ ಶಕ್ತಿ ತುಂಬುತ್ತಿದ್ದಾರೆ.ಹೀಗೆ ಹಳ್ಳಿ ಕದನ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ಮೀಸಲು ನಿಗದಿ ಬೆನ್ನಲ್ಲೇ ಚುನಾವಣಾ ಕಣ ರಣಕಣವಾಗಿ ರೂಪಾಂತರಗೊಂಡು ಎಲ್ಲರ ಗಮನಸೆಳೆಯುವಂತೆ ಮಾಡಿದೆ.