ಇಂದಿನ ಮಕ್ಕಳೇ ನಾಳಿನ ವಿಜ್ಞಾನಿಗಳು. ಸಣ್ಣ ಸಣ್ಣ ಆವಿಷ್ಕಾರಗಳೇ ಮುಂದೆ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ. ವಿದ್ಯಾರ್ಥಿಗಳು ಪ್ರಶ್ನೆ ಕೇಳುವ, ಪ್ರಯೋಗ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪಠ್ಯ ವಿಷಯ ಕಲಿಯುವುದರ ಜೊತೆಗೆ ಪ್ರಾಯೋಗಿಕ ಜ್ಞಾನವೂ ಮಕ್ಕಳಿಗೆ ಅತ್ಯಗತ್ಯ.
ಕನ್ನಡಪ್ರಭ ವಾರ್ತೆ ಮಂಡ್ಯ
ವಿಜ್ಞಾನ, ಸೃಜನಶೀಲತೆ, ನಾವೀನ್ಯತೆ, ಯುವ ಸಂಶೋಧಕರ ಸಂಭ್ರಮಾಚರಣೆ. ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಮತ್ತು ಕುತೂಹಲ ಕೆರಳಿಸುವ ಉದ್ದೇಶದಿಂದ ತಾಲೂಕಿನ ಸಾತನೂರು ಗ್ರಾಮದಲ್ಲಿರುವ ಅಚೀವರ್ಸ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ‘ಅಚೀವರ್ಸ್ ಸಿಯೋರಾ’ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವಸ್ತು ಪ್ರದರ್ಶನ ಉದ್ಘಾಟಿಸಿದ ಪ್ರಾಂಶುಪಾಲೆ ವಿದ್ಯಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಸಾಮರ್ಥ್ಯ, ಕುತೂಹಲ ಮತ್ತು ಸಂಶೋಧನಾಸಕ್ತಿ ಬೆಳೆಸುವುದೇ ಈ ಪ್ರದರ್ಶನದ ಮುಖ್ಯ ಉದ್ದೇಶ. ಪಠ್ಯ ವಿಷಯ ಕಲಿಯುವುದರ ಜೊತೆಗೆ ಪ್ರಾಯೋಗಿಕ ಜ್ಞಾನವೂ ಮಕ್ಕಳಿಗೆ ಅತ್ಯಗತ್ಯ ಎಂದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಬಿ.ಎಸ್. ಅನುಪಮಾ ಅವರು ಮಾತನಾಡಿ, ಇಂದಿನ ಮಕ್ಕಳೇ ನಾಳಿನ ವಿಜ್ಞಾನಿಗಳು. ಸಣ್ಣ ಸಣ್ಣ ಆವಿಷ್ಕಾರಗಳೇ ಮುಂದೆ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ. ವಿದ್ಯಾರ್ಥಿಗಳು ಪ್ರಶ್ನೆ ಕೇಳುವ, ಪ್ರಯೋಗ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಶಾಲೆಯ ವಿದ್ಯಾರ್ಥಿಗಳು ನೂತನವಾಗಿ ತಯಾರಿಸಿರುವ ಕೃತಕ ಬುದ್ಧಿಮತ್ತೆಯ ಎಐ ರೋಬೋ ಅತ್ಯುತ್ತಮವಾಗಿ ನಮ್ಮ ಭಾವನೆಗಳಿಗೆ ತಕ್ಕಂತೆ ಮಾತನಾಡುತ್ತದೆ. ಪ್ರಶ್ನೆಗಳಿಗೆ ಅತ್ಯುತ್ತಮ ಉತ್ತರ ನೀಡುತ್ತದೆ ಇಂತಹ ರೋಬೋಗಳು ಮುಂದಿನ ಶೈಕ್ಷಣಿಕ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದರು.
ಶಾಲೆಯ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ಎಐ ರೋಬೋ, ಮಾನವನ ಹುಟ್ಟು ಮತ್ತು ಜೀವನ ಚಕ್ರ, ಪರಿಸರ, ಸ್ಮಾರ್ಟ್ ಸಿಟಿ, ಸೋಲಾರ್ ಸಿಸ್ಟಮ್, ಸುಗಮ ರಸ್ತೆ ಸಂಚಾರ, ಅತ್ಯಾಧುನಿಕ ತಾಂತ್ರಿಕ ಮಾಹಿತಿ, ಸ್ಥಳದಲ್ಲೇ ರಕ್ತ ತಪಾಸಣೆ ಗುಂಪು, ವರ್ಗೀಕರಣ, ಸೂರ್ಯನ ಬೆಳಕು ಚಂದ್ರನ ಚಲನೆ ಗ್ರಹಗಳ ಗ್ರಹಣಗಳು ಸೇರಿದಂತೆ ಹಲವು ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಸೃಜನಶೀಲ ಪ್ರದರ್ಶನಗಳಿಗೆ ಪೋಷಕರು ಹಾಗೂ ಸಂದರ್ಶಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಅಡ್ಮಿನ್ ರಾಮ್ ಸಿಂಗ್, ಸಂಯೋಜಕರಾದ ರೂಪ, ಅಶ್ವಿನಿ, ಹೇಮಾ, ರಮ್ಯಶೃಂಗ, ಜ್ಯೋತಿ, ಅಜಯ್, ಪಂಚಲಿಂಗ, ಮುತ್ತುರಾಜ್, ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.