ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ

KannadaprabhaNewsNetwork |  
Published : Feb 21, 2026, 03:00 AM IST
ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ನಡೆಯಿತು. | Kannada Prabha

ಸಾರಾಂಶ

ಮಂಗಳಾ ಸಮೂಹ ಶಿಕ್ಷಣ ಸಂಸ್ಥೆ ಅಧೀನದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ

ಮಂಗಳೂರು: ಮಂಗಳಾ ಸಮೂಹ ಶಿಕ್ಷಣ ಸಂಸ್ಥೆ ಅಧೀನದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.

ಎಕ್ಸ್‌ಪರ್ಟ್ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ಸಾಧನೆಗೆ ಎಂದಿಗೂ ಕೊನೆ ಎಂಬುದಿಲ್ಲ. ಪ್ರತಿಭೆ, ಪರಿಶ್ರಮ ಜತೆಗೆ ಗುರಿ ಸಾಧಿಸುವ ಅಚಲತೆಯಿಂದ ಮಾತ್ರ ಸಾಧಕರಾಗಬಹುದು. ಪ್ರತಿಯೊಬ್ಬರೂ ಅಸಾಮಾನ್ಯರಾಗಲು ಬಯಸುತ್ತಾರೆ. ಆದರೆ ಅದಕ್ಕೆ ಅಷ್ಟೇ ಪರಿಶ್ರಮದ ಅಗತ್ಯವಿದೆ. ಜತೆಗೆ ಪದವಿ ಪ್ರದಾನ ಕಾರ್ಯಕ್ರಮಗಳು ಪ್ರಮಾಣಪತ್ರ ನೀಡುವುದಕ್ಕೆ ಮಾತ್ರವಲ್ಲ, ಗುರಿಯನ್ನು ಸಮರ್ಥವಾಗಿ ನಿರ್ಧರಿಸುವ ವೇದಿಕೆಯೂ ಆಗಿದೆ ಎಂದರು.

ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಶಿವಶರಣ ಶೆಟ್ಟಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಹೆಚ್ಚಿನ ಪ್ರಮಾಣದಲ್ಲಿದೆ. ಅದಕ್ಕೆ ತಕ್ಕಂತೆ ನಾವು ಅಪ್‌ಡೇಟ್ ಆಗಲೇಬೇಕು. ಇಲ್ಲದೇ ಹೋದರೆ ಔಟ್‌ಡೇಟ್ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಇದಕ್ಕಾಗಿ ನಿರಂತರ ಓದುವ ಕಲೆಯನ್ನು ಸಿದ್ಧಿಸಿಕೊಳ್ಳಿ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಗಣಪತಿ ಪಿ. ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಜತೆ ಹೆಚ್ಚು ಸಮಯ ವ್ಯಯ ಮಾಡಬೇಡಿ. ವೃತ್ತಿಗೆ ಸೇರಿಕೊಂಡಾಗ ತಮ್ಮ ವೇತನದಲ್ಲಿ ಉಳಿಸುವ ಕೆಲಸ ಮಾಡಿಕೊಂಡು ದೇಶಕ್ಕೆ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಿ ಎಂದರು.ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ವರದಿ ಮಂಡಿಸಲಾಯಿತು. ಸಾಧಕ ಹಾಗೂ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗಣ್ಯರು ಗೌರವಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶರಣ್ಯ ಅಮೀನ್ ರ‍್ಯಾಂಕ್ ವಿಜೇತರ ಪಟ್ಟಿ ವಾಚಿಸಿದರು.

ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಅನಿತಾ ಜಿ. ಭಟ್, ಮಂಗಳಾ ಕಾಲೇಜ್ ಆಫ್ ನರ್ಸಿಂಗ್ ಆ್ಯಂಡ್ ಸ್ಕೂಲ್ ಆಫ್ ನರ್ಸಿಂಗ್ ಪ್ರಿನ್ಸಿಪಾಲ್ ಪ್ರೊ. ಸುಬ್ರಹ್ಮಣ್ಯ ನಾಯಕ್, ಮಂಗಳಾ ಕಾಲೇಜ್ ಆಫ್ ಫ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈನ್ಸಸ್‌ನ ಪ್ರಿನ್ಸಿಪಾಲ್ ಪ್ರೊ. ಪ್ರತಿಜ್ಞಾ ಸುವಾಸಿನಿ ಜಿ. ಆರ್., ಮಂಗಳಾ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆ್ಯಂಡ್ ಅಲೈಡ್ ಹೆಲ್ತ್ ಸೈನ್ಸಸ್‌ನ ವೈಸ್ ಪ್ರಿನ್ಸಿಪಾಲ್ ಪ್ರೊ. ಗೀತಾಲಕ್ಷ್ಮಿ, ಮಂಗಳಾ ಕಾಲೇಜ್ ಆಫ್ ಪಿಸಿಯೋಥೆರಪಿಯ ಪ್ರೊ.ಡಾ.ಭರತ್ ಕೆ.ಎಚ್. ಇದ್ದರು.

--------------

ಫೋಟೊ

18ಮಂಗಳಾ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಎಸ್ಸಿ ಸಾಹುಕಾರ್‌ರಿಂದ 120 ಎಕರೆ ಭೂಮಿ ಖರೀದಿ?
ಸಂಪುಟ ಸರ್ಕಸ್‌ ಸಭೆ ಮತ್ತೆ ಮುಂದಕ್ಕೆ - ಇಂದು ಖರ್ಗೆ ನಿವಾಸದಲ್ಲಿ ಸಭೆ