ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿತ

KannadaprabhaNewsNetwork |  
Published : Aug 30, 2024, 01:03 AM IST
ಚಾಕು ಇರಿದ ಪ್ರೇಮಿ ಆದಿಲ್  | Kannada Prabha

ಸಾರಾಂಶ

ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದು ಪರಾರಿ ಆಗುವಾಗ ಪ್ರೇಮಿಯನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸ್ ಠಾಣೆಗೆ ನೀಡಿದ ಘಟನೆ ಪಟ್ಟಣದ ದೊಡ್ಡಪೇಟೆ ಬಳಿ ನಡೆದಿದೆ.

ಕುಣಿಗಲ್: ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದು ಪರಾರಿ ಆಗುವಾಗ ಪ್ರೇಮಿಯನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸ್ ಠಾಣೆಗೆ ನೀಡಿದ ಘಟನೆ ಪಟ್ಟಣದ ದೊಡ್ಡಪೇಟೆ ಬಳಿ ನಡೆದಿದೆ.

ಮಂಡ್ಯ ಪಟ್ಟಣದ ಆದೀಲ್ (23) ಚಾಕುವಿನಿಂದ ಇರಿದ ಆರೋಪಿ. ಪಟ್ಟಣದ ಕೋಟೆ ನಿವಾಸಿ ಮಹಮದ್ ಆಲೀಸಾ ಖಾದ್ರಿ (21) ಮಂಗಳಮುಖಿಯಾಗಿ ಬದಲಾಗಿದ್ದು, ಹನೀಶಾ ಎಂದು ಹೆಸರು ಇಟ್ಟುಕೊಂಡಿದ್ದು, ಚಾಕು ಇರಿತಕ್ಕೆ ಒಳಗಾದ ಪ್ರೇಯಸಿ.

ಪ್ರೇಮದ ಹಿನ್ನೆಲೆ:

ಕಳೆದ ಆರು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಮಂಗಳಮುಖಿ ಹನೀಶಾ ಮಂಡ್ಯದ ಆದೀಲ್‌ಗೆ ಪರಿಚಯವಾಗಿ ನಂತರ ಪ್ರೇಮಕ್ಕೆ ತಿರುಗಿತ್ತು. ಪ್ರೇಮಿ ಆದೀಲ್ ಕುಣಿಗಲ್ ಹನಿಶಾ ಮನೆಗೆ ಬಂದು ಅನಾಥ ಎಂದು ಸುಳ್ಳಿ ಹೇಳಿ ಕಳೆದ ನಾಲ್ಕು ಐದು ತಿಂಗಳಿನಿಂದ ವಾಸವಾಗಿದ್ದನು. ಮನೆಯ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಎನ್ನಲಾಗಿದೆ. ಇಬ್ಬರ ಪ್ರೀತಿಯಲ್ಲಿ ವ್ಯತ್ಯಾಸ ಉಂಟಾಗಿ ಕೆಲ ವಿಚಾರವಾಗಿ ಹನೀಶಾ ಹಾಗೂ ಆದೀಲ್ ನಡುವೆ ಜಗಳ ನಡೆಯುತ್ತಿತ್ತು.

ಹನೀಶಾ ಮೇಲೆ ಆದೀಲ್ ಹಲ್ಲೆ ನಡೆಸಿ ಮಂಡ್ಯಗೆ ಹೋಗಿ ನೆಲೆಸಿದ್ದನು. ಪ್ರೇಮದ ವಿಚಾರವಾಗಿ

ಮಾತನಾಡಲು ಕರೆಸಿ ಗ್ರಾಮ ದೇವತೆ ಸರ್ಕಲ್ ಬಳಿ ಚಾಕುವಿನಿಂದ ಇರಿದ ಆದೀಲ್ ಆಕೆಯ ಕಿರುಚಾಟದಿಂದ ಗಾಬರಿಗೊಂಡ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆತನನ್ನು ಹಿಂಬಾಲಿಸಿದ ಪುರಸಭೆ ಸದಸ್ಯ ರಂಗಸ್ವಾಮಿ ಮತ್ತು ಸ್ನೇಹಿತರು ದೊಡ್ಡಪೇಟೆ ರಸ್ತೆ ಬಳಿ ಆತನ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳು, ಮಂಗಳಮುಖಿ ಹನಿಷಾಗೆ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಕು ಇರಿದ ಆರೋಪಿಯನ್ನು ಕುಣಿಗಲ್ ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಾಗಿದೆ.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ