ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಟು ಮಾಡ್ಯುಲರ್ ಕೈಗಾರಿಕಾ ಹೈಡ್ರೋಜನ್ ಉತ್ಪಾದನಾ ಸ್ಕಿಡ್‌ಗಳಿಗೆ ಶನಿವಾರ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಮಂಗಳೂರು: ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಟು ಮಾಡ್ಯುಲರ್ ಕೈಗಾರಿಕಾ ಹೈಡ್ರೋಜನ್ ಉತ್ಪಾದನಾ ಸ್ಕಿಡ್‌ಗಳಿಗೆ ಶನಿವಾರ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ವಿಶ್ವ ದರ್ಜೆಯ ಹೈಡ್ರೋಜನ್ ಉತ್ಪಾದನಾ ಘಟಕ (ಹೈಡ್ಜನ್) ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಸ್ಥಳೀಯ ಮಟ್ಟದಲ್ಲಿ ಮತ್ತು ಭಾರತ ಸರ್ಕಾರದಿಂದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಕೈಗಾರಿಕಾ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರೋಲೈಜರ್ ವ್ಯವಸ್ಥೆಗಳನ್ನು ಉತ್ಪಾದಿಸಲು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವಂತೆ ಅವರು ತಂಡಕ್ಕೆ ಸಲಹೆ ಮಾಡಿದರು.ಮಂಗಳೂರು ಮೂಲದ ಹೈಡ್ರೋಜನ್ ತಂತ್ರಜ್ಞಾನ ಕಂಪನಿಯಾದ ಹೈಡ್ಜೆನ್ ಇಲ್ಲಿನ ತನ್ನ ಸೌಲಭ್ಯದಿಂದ ಎಂಟು ಮಾಡ್ಯುಲರ್ ಕೈಗಾರಿಕಾ ಹೈಡ್ರೋಜನ್ ಉತ್ಪಾದನಾ ಸ್ಕಿಡ್ ಉತ್ಪನ್ನಗಳ ರವಾನೆ ಮಾಡುತ್ತಿದೆ. ಇದು ಭಾರತದಲ್ಲಿ ಸ್ಥಳೀಯವಾಗಿ ವಿನ್ಯಾಸಗೊಳಿಸಿ ತಯಾರಿಸಿದ ಎಲೆಕ್ಟ್ರೋಲೈಜರ್ ತಂತ್ರಜ್ಞಾನವಾಗಿದ್ದು, ವಾಣಿಜ್ಯ ನಿಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.
ಡಾ. ಮಾಣಿಪ್ಪಾಡಿ ಕೃಷ್ಣ ಕುಮಾರ್ (ಸಿಒಒ), ಡಾ. ಗೌತಮ್ ದಳಪತಿ (ಸಿಟಿಒ), ಮತ್ತು ರಮ್ಯಶ್ರೀ ದೊಡ್ಡಮಣಿ ಶ್ರೀವಾಸ್ತವ (ನಿರ್ದೇಶಕರು), ಉದ್ಯಮದ ಸದಸ್ಯರು ಮತ್ತು ಹೈಡ್ರೋಜನ್ ನಾವೀನ್ಯತೆ ಸಮುದಾಯದ ಸದಸ್ಯರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.