ಶೈಕ್ಷಣಿಕ ಕ್ರಾಂತಿಗೆ ಬಂಥನಾಳ ಶ್ರೀಗಳು ಕಾರಣ

KannadaprabhaNewsNetwork |  
Published : Mar 25, 2026, 03:00 AM IST
24ಬಿಎಸ್ವಿ01- ಬಸವನಬಾಗೇವಾಡಿ ತಾಲೂಕಿನ ಯರನಾಳ ವಿರಕ್ತ ಮಠದ ಜಾತ್ರಾಮಹೋತ್ಸವದಂಗವಾಗಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಂಥನಾಳ ಸಂಗಬಸವ ಶಿವಯೋಗಿಗಳ 125 ನೇ ಜಯಂತಿಯಂಗವಾಗಿ ಸ್ಮರಣ ಸಂಚಿಕೆಯನ್ನು ಹುಬ್ಬಳ್ಳಿಯ ಜಗದ್ಗುರು ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ಬಿಡುಗಡೆ ಗೊಳಿಸಿದರು. | Kannada Prabha

ಸಾರಾಂಶ

ಶಿಕ್ಷಣದ ಮಹತ್ವ ಅರಿತಿದ್ದ ಜ್ಞಾನ ದಾಸೋಹಿ ಬಂಥನಾಳ ಸಂಗನಬಸವ ಸ್ವಾಮೀಜಿ ಅವರು ತಮ್ಮ ಪ್ರವಚನಗಳಿಂದ ಬಂದ ಕಾಣಿಕೆಯಿಂದ ಅವಿಭಜಿತ ವಿಜಯಪುರ ಜಿಲ್ಲೆಯ 30 ಕಡೆಗಳಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿದರು. ಈ ಮೂಲಕ ಶಾಲಾ-ಕಾಲೇಜು ಆರಂಭಿಸಿ ಮೂಲಕ ಶಿಕ್ಷಣದ ಬೀಜ ಬಿತ್ತಿ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರ ವಿರಕ್ತ ಮಠದ ಜಗದ್ಗುರು ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಶಿಕ್ಷಣದ ಮಹತ್ವ ಅರಿತಿದ್ದ ಜ್ಞಾನ ದಾಸೋಹಿ ಬಂಥನಾಳ ಸಂಗನಬಸವ ಸ್ವಾಮೀಜಿ ಅವರು ತಮ್ಮ ಪ್ರವಚನಗಳಿಂದ ಬಂದ ಕಾಣಿಕೆಯಿಂದ ಅವಿಭಜಿತ ವಿಜಯಪುರ ಜಿಲ್ಲೆಯ 30 ಕಡೆಗಳಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿದರು. ಈ ಮೂಲಕ ಶಾಲಾ-ಕಾಲೇಜು ಆರಂಭಿಸಿ ಮೂಲಕ ಶಿಕ್ಷಣದ ಬೀಜ ಬಿತ್ತಿ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರ ವಿರಕ್ತ ಮಠದ ಜಗದ್ಗುರು ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ನುಡಿದರು.

ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ವಿರಕ್ತ ಮಠದ ಕರ್ತೃ ಜಗದ್ಗುರು ಪಂಪಾಪತಿ ಜಾತ್ರಾಮಹೋತ್ಸವ ಅಂಗವಾಗಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಜ್ಞಾನ ದಾಸೋಹಿ ಸಂಗನಬಸವ ಸ್ವಾಮೀಜಿಯವರ 125ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅಕ್ಷರ ಕ್ರಾಂತಿಯ ನೇಗಿಲಯೋಗಿ ಬಂಥನಾಳದ ಶಿವಯೋಗಿ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರತಿಯೊಬ್ಬರ ಬದುಕಿಗೆ ಶಿಕ್ಷಣ ಬೇರಾಗಿದೆ. ಶಿಕ್ಷಣದ ಬೇರು ಚಿಗುರಿದಾಗ ಖಂಡಿತವಾಗಿ ಫಲ ನೀಡುತ್ತದೆ. ಇದನ್ನರಿತ ಬಂಥನಾಳದ ಸಂಗನಬಸವ ಸ್ವಾಮೀಜಿ ಅವರು ಶಿಕ್ಷಣದ ಬೀಜ ಬಿತ್ತಿದರು. ಇದರ ಫಲವಾಗಿ ಇಂದು ಅವಳಿ ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುತ್ತಿವೆ. ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ ಎಂದರು.

ಎಲ್ಲಿ ಧರ್ಮ, ಸಂಸ್ಕಾರ ಇರುವುದಿಲ್ಲವೋ ಅಲ್ಲಿ ಶಾಂತಿ, ನೆಮ್ಮದಿ ಇರುವುದಿಲ್ಲ. ಪ್ರಸ್ತುತ ಶ್ರೀಮಠದ ಪೀಠಾಧಿಪತಿಗಳಾದ ಗುರುಸಂಗನಬಸವ ಸ್ವಾಮೀಜಿಯವರು ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ. ಭಕ್ತರನ್ನು ಪ್ರೀತಿ ಕಾಣುವ ಜೊತೆಗೆ ವಿನಯ, ಸಮಾಧಾನ, ಸರಳ ಸಜ್ಜನಿಕೆ ಹೃದಯ ಶ್ರೀಮಂತಿಕೆ ವ್ಯಕ್ತಿತ್ವ ಹೊಂದಿದ್ದಾರೆ. ಇಂತಹ ಶ್ರೀಗಳನ್ನು ಪಡೆದ ಭಕ್ತರು ಭಾಗ್ಯವಂತರು ಎಂದು ಶ್ಲಾಘಿಸಿದರು.ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಹೊನ್ನು, ಮಣ್ಣು, ಹೆಣ್ಣಿಗಾಗಿ ಅನೇಕರು ಬಂದಿದ್ದಾರೆ. ಆದರೆ ಪರಮಾತ್ಮನನ್ನು ಅರಿಯಲು ಬಂದವರು ಬಹಳ ವಿರಳ. ಅಂತಹವರು ಶರಣರು, ಮಹಾತ್ಮರಾಗಿದ್ದಾರೆ. ಅಂತವರ ಸಾಲಿನಲ್ಲಿ ಬಂಥನಾಳ ಸಂಗನಬಸವ ಸ್ವಾಮೀಜಿ ನಿಲ್ಲುತ್ತಾರೆ. ಪ್ರಸ್ತುತ ಶ್ರೀಗಳು ಅನೇಕ ಕಾರ್ಯಕ್ರಮ ಮಾಡುವ ಮೂಲಕ ಈ ಭಾಗದಲ್ಲಿ ಜ್ಞಾನ, ಭಕ್ತಿ ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದರು.ಮಸಬಿನಾಳದ ಸಿದ್ದರಾಮ ಸ್ವಾಮೀಜಿ ಮಾತನಾಡಿದರು. ಶ್ರೀಮಠದ ಗುರುಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಂಥನಾಳದ ವೃಷಭಲಿಂಗ ಸ್ವಾಮೀಜಿ, ದ್ರಾಕ್ಷಾಯಿಣಿ ಅಮ್ಮ, ದಯಾನಂದ ಕೆಲ್ಲೂರ, ನಾಗನಾಥ ಮಾಶೆಟ್ಟಿ, ಡಾ.ಎಸ್.ಎಂ.ಹಿರೇಮಠ, ಚನ್ನಮಲ್ಲಪ್ಪ ಮೂಕರ್ತಿಹಾಳ, ಯಶವಂತ ಗುಗ್ಗರಿ, ಶಂಕರಗೌಡ ಪಾಟೀಲ, ಸ್ಮರಣ ಸಂಚಿಕೆ ಸಂಪಾದಕ ಜಗದೀಶ ಸಾಲಳ್ಳಿ ಇತರರು ಇದ್ದರು. ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎಂ.ಹಿರೇಮಠ ಅವರಿಗೆ ಶ್ರೀರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪ್ರಕಾಶ ಹತ್ತಿಕಾಳ, ಶಿವನಗೌಡ ಪಾಟೀಲ, ಮಹಾಂತೇಶ ಹಿರೇಮಠ, ವಿಠ್ಠಲ ಕುಲಕರ್ಣಿ, ವೀರೇಶಗೌಡ ಪಾಟೀಲ, ಅಮಿತ ರೋಡಗೆ, ಮಂಜುನಾಥಸ್ವಾಮಿ, ಶ್ರೀಶೈಲ ಅವಟಿ, ನಾಗರಾಜ ಕುಷ್ಟಗಿ ದಂಪತಿಯನ್ನು ಆದರ್ಶ ದಂಪತಿಗಳೆಂದು ಶ್ರೀಮಠದಿಂದ ಗೌರವಿಸಲಾಯಿತು. ವಿರೇಶ ವಾಲಿ ಪ್ರಾರ್ಥಿಸಿದರು. ಗಿರಿಜಾ ಪಾಟೀಲ, ಶರಣಬಸು ಹಳಮನಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ
ಇಂದು ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ವಿಸ್ತರಿತ ಕಟ್ಟಡ ಉದ್ಘಾಟನೆ