ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಲರ್ನಿಂಗ್ (ಸಿಎಫ್‌ಎಎಲ್)ನಿಂದ ಮೂವರು ವಿದ್ಯಾರ್ಥಿಗಳು ಇಂಡಿಯನ್ ಒಲಿಂಪಿಯಾಡ್ ಕ್ವಾಲಿಫೈಯರ್ ಇನ್ ಮ್ಯಾಥಮ್ಯಾಟಿಕ್ಸ್ (ಐಒಕ್ಯೂಎಂ) ಮೂಲಕ ಪ್ರಾದೇಶಿಕ ಗಣಿತ ಒಲಿಂಪಿಯಾಡ್ (ಆರ್‌ಎಂಒ) 2026ಗೆ ಅರ್ಹತೆ ಪಡೆದಿದ್ದಾರೆ.
ಮಂಗಳೂರು: ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಲರ್ನಿಂಗ್ (ಸಿಎಫ್‌ಎಎಲ್)ನಿಂದ ಮೂವರು ವಿದ್ಯಾರ್ಥಿಗಳು ಇಂಡಿಯನ್ ಒಲಿಂಪಿಯಾಡ್ ಕ್ವಾಲಿಫೈಯರ್ ಇನ್ ಮ್ಯಾಥಮ್ಯಾಟಿಕ್ಸ್ (ಐಒಕ್ಯೂಎಂ) ಮೂಲಕ ಪ್ರಾದೇಶಿಕ ಗಣಿತ ಒಲಿಂಪಿಯಾಡ್ (ಆರ್‌ಎಂಒ) 2026ಗೆ ಅರ್ಹತೆ ಪಡೆದಿದ್ದಾರೆ.
ಪ್ರಥಮ ಪಿಯುಸಿಯ ಚಿರಾಗ್ 67 ಅಂಕ, ಪ್ರಥಮ ಪಿಯುಸಿಯ ಶ್ರೀಧರ ಹೆಗ್ಡೆ 56 ಅಂಕ, ದ್ವಿತೀಯ ಪಿಯುಸಿಯ ತೇಜಸ್ ಎಸ್. 56 ಅಂಕಗಳೊಂದಿಗೆ ಅರ್ಹತೆ ಪಡೆದಿದ್ದಾರೆ. ಚಿರಾಗ್‌ಗೆ ಇದು ಆರ್‌ಎಂಒಗೆ ಸತತ ಎರಡನೇ ಅರ್ಹತೆಯಾಗಿದ್ದು, ಈ ಹಿಂದೆ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದ ವೇಳೆಯೂ ಅರ್ಹತೆ ಪಡೆದಿದ್ದರು.
ಐಒಕ್ಯೂಎಂ ಮೂಲಕ ಅರ್ಹತೆ ಪಡೆದವರು ಆರ್‌ಎಂಒಗೆ ಮುನ್ನಡೆಯುತ್ತಾರೆ, ನಂತರ ಭಾರತೀಯ ರಾಷ್ಟ್ರೀಯ ಗಣಿತ ಒಲಿಂಪಿಯಾಡ್ (ಐಎನ್ಎಂಒ). ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ಗಾಗಿ ರಾಷ್ಟ್ರೀಯ ತರಬೇತಿ ಮತ್ತು ಆಯ್ಕೆ ಹಂತಗಳಿಗೆ ತೇರ್ಗಡೆಯಾಗುತ್ತಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.