ಮಂಗಳೂರು: ಕ್ರೀಡಾಕೂಟ ತಂಡದ ಒಗ್ಗಟ್ಟನ್ನು ಸಾರುತ್ತದೆ. ವಿದ್ಯಾರ್ಥಿಗಳಿಗೆ ಶಾರೀರಿಕ ವ್ಯಾಯಾಮ, ಸ್ಪರ್ಧಾತ್ಮಕ ಮನೋಭಾವವನ್ನು ಬೋಧಿಸುತ್ತದೆ. ಕ್ರೀಡಾಕೂಟ ಶಿಕ್ಷಣದ ಒಂದು ಭಾಗ ಎಂದು ಮಂಗಳೂರು ನಗರ ವಿಶೇಷ ಘಟಕದ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಹೇಳಿದರು.
ರೈಲ್ವೇ ಅಥ್ಲೆಟಿಕ್ ಚಾಂಪಿಯನ್ ಪವಿತ್ರಾ ಜಿ. ಮಾತನಾಡಿ, ಸೋತಾಗ ದೃಢವಾಗಿ, ಗೆದ್ದಾಗ ಬೀಗದೇ ಕಠಿನ ಪರಿಶ್ರಮ, ಧೈರ್ಯ, ಸವಾಲನ್ನು ಸಮರ್ಥವಾಗಿ ಎದುರಿಸಲು ಗಮನಹರಿಸಬೇಕು ಎಂದರು.
ನ್ಯಾಯವಾದಿ ರವಿಪ್ರಸನ್ನ ಸಿ.ಕೆ. ಮಾತನಾಡಿ, ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುವ ರೀತಿ ಮಾದರಿಯಾಗಿದೆ ಎಂದರು.ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕಿ ಸ್ನೇಹಗೌರಿ ಸ್ವಾಗತಿಸಿದರು. ಉಪನ್ಯಾಸಕಿ ಭಾಗ್ಯಲಕ್ಷ್ಮಿ ನಿರೂಪಿಸಿದರು. ಶಿಕ್ಷಕಿ ಮಲ್ಲಿಕಾ ವಂದಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದಂತ ವೈದ್ಯ ಡಾ.ಶ್ಯಾಮಕಿಶೋರ್ ಮಾತನಾಡಿ, ಶರೀರಕ್ಕೆ ವ್ಯಾಯಾಮ, ಉತ್ತಮ ಆಹಾರ, 8 ಗಂಟೆ ನಿದ್ದೆ ಮಾಡಿದಾಗ ಆರೋಗ್ಯ ಕಾಪಾಡುವುದು ಸುಲಭ. ಸದಾ ಕ್ರಿಯಾಶೀಲವಾಗಿರಬೇಕು ಎಂದರು.ಆಯುರ್ವೇದ ತಜ್ಞ ಡಾ.ಈಶ್ವರ ಭಟ್ ಪಳ್ಳಾದೆ ಮಾತನಾಡಿ, ನಿಯಮಿತ ಹಾಗೂ ಕ್ರಮಬದ್ಧ ಆಹಾರ, ಪರಿಶ್ರಮ, ಸೂಕ್ತ ನಿದ್ದೆಯ ಮೂಲಕ ಹಿರಿಯರು ಆರೋಗ್ಯವಂತರಾಗಿದ್ದರು. ಮಕ್ಕಳು ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕಿ ಪವಿತ್ರಾ ಸ್ವಾಗತಿಸಿದರು. ಶಿಕ್ಷಕಿ ತುಳಸಿ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಭಿಷೇಕ್ ವಂದಿಸಿದರು.