ಮಂಗಳೂರು: ಎಂಆರ್‌ಪಿಎಲ್ ತನ್ನ ಕಾರ್ಯಾಚರಣೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಎಂಆರ್‌ಪಿಎಲ್ ಎಂಎಂಆರ್‌ಟಿ ರೈಲ್ವೆ ಸೈಡಿಂಗ್‌ನಿಂದ 1,000ನೇ ಪೆಟ್‌ಕೋಕ್ ರೈಲು ರೇಕ್ ಅನ್ನು ಯಶಸ್ವಿಯಾಗಿ ರವಾನೆ ಮಾಡಿದೆ.ಈ ಐತಿಹಾಸಿಕ ರೇಕ್ ಅನ್ನು ಮಂಗಳವಾರ ಜೆಎಸ್‌ಡಬ್ಲ್ಯೂ ಸಿಮೆಂಟ್‌ಗೆ ಕಳುಹಿಸಲಾಯಿತು.ಈ ರೇಕ್ ಅನ್ನು ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಹೆಚ್.ವಿ. ಪ್ರಸಾದ್ (ಪ್ರಾಜೆಕ್ಟ್ಸ್) ಮತ್ತು ದೀಪಕ್ ಪ್ರಭಾಕರ್ (ಮಾರ್ಕೆಟಿಂಗ್)ಅವರು ಬಾವುಟ ತೋರಿಸಿ ಚಾಲನೆ ನೀಡಿದರು.ಕೊಂಕಣ ರೈಲ್ವೆ ಕಾರವಾರ ವಿಭಾಗದ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ, ಹಿರಿಯ ಪ್ರಾದೇಶಿಕ ಟ್ರಾಫಿಕ್ ಮ್ಯಾನೇಜರ್ ದಿಲೀಪ್ ಡಿ. ಭಟ್ ಹಾಗೂ ಜೆಎಸ್‌ಡಬ್ಲ್ಯೂ ಸಿಮೆಂಟ್ ಮುಖ್ಯ ಖರೀದಿ ಅಧಿಕಾರಿ ವಿನಾನಿಲ್ ತಿವಾರಿ ಇದ್ದರು.
.