ದ.ಕ. ರೆಡ್‌ಕ್ರಾಸ್ ಚುನಾವಣೆ: ಶಾಂತಾರಾಮ ಶೆಟ್ಟಿ ತಂಡಕ್ಕೆ ಜಯ

KannadaprabhaNewsNetwork |  
Published : Feb 24, 2026, 04:00 AM IST
ಜಯ ಗಳಿಸಿದ ಶಾಂತಾರಾಮ ಶೆಟ್ಟಿ ಅವರ ತಂಡ. | Kannada Prabha

ಸಾರಾಂಶ

ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ 2026-29ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ನೇತೃತ್ವದ ತಂಡವು ಎಲ್ಲ 10 ಸ್ಥಾನ ಗೆಲ್ಲುವ ಮೂಲಕ ಜಯ ಸಾಧಿಸಿದೆ.ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು. ಸೋಮವಾರ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಮತ ಎಣಿಕೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಿಎ ಶಾಂತಾರಾಮ ಶೆಟ್ಟಿ- 1005 ಮತ, ಡಾ.ಸುಮನ ಬಿ.- 876, ಡಾ.ಸತೀಶ್ ರಾವ್- 870, ಡಾ. ಬಿ.ಸಚ್ಚಿದಾನಂದ ರೈ- 868, ರಾಘವೇಂದ್ರ ರಾವ್- 844, ಪುಷ್ಪರಾಜ್ ಜೈನ್- 835, ಪಿ.ಬಿ. ಹರಿಪ್ರಸಾದ್ ರೈ- 810, ಯತೀಶ್ ಬೈಕಂಪಾಡಿ- 797, ಸಚೇತ್ ಸುವರ್ಣ- 762, ಗುರುದತ್ ಎಂ. ನಾಯಕ್- 762 ಮತ ಗಳಿಸಿ ಜಯ ಗಳಿಸಿದರು.

ಆಡಳಿತ ಮಂಡಳಿಯ 10 ಸದಸ್ಯ ಸ್ಥಾನಗಳಿಗೆ ಫೆ.22ರಂದು ಚುನಾವಣೆ ನಡೆದಿತ್ತು. 3654 ಮತದಾರರ ಪೈಕಿ 1388 ಮಂದಿ ಮತ ಚಲಾಯಿಸಿದ್ದರು. 24 ಮತ ಅಸಿಂಧುವಾಗಿತ್ತು.

ಚುನಾವಣಾಧಿಕಾರಿಯಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ ಯು. ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಚುನಾವಣಾ ಉಪ ತಹಸೀಲ್ದಾರ್ ರಾಮಚಂದ್ರ ಬಿ. ಕಾರ್ಯ ನಿರ್ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಯಿಲ ಎಂಡೋ ಪಾಲನಾ ಕೇಂದ್ರದಲ್ಲಿ ಪೋಷಕರ ಸಭೆ
ವಾದಿರಾಜ ಕಲ್ಲೂರಾಯಗೆ ‘ಬಹುಮುಖಿ’ ಪ್ರಶಸ್ತಿ