ಮಂಗಳೂರು: ಮಹಿಳಾ ದಿನಾಚರಣೆಗೆ ‘ಸಾರಿ ರನ್‌’ ಕಳೆ

KannadaprabhaNewsNetwork |  
Published : Mar 10, 2026, 04:00 AM IST
ಅಂ.ರಾ.ಮಹಿಳಾ ದಿನಾಚರಣೆ ಅಂಗವಾಗಿ ಮಂಗಳೂರಲ್ಲಿ ಸಾರಿ ರನ್‌ | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭಾನುವಾರ ‘ಸಾರಿ ರನ್’ ಏರ್ಪಟ್ಟಿತು. ಬಣ್ಣ ಬಣ್ಣದ ಆಕರ್ಷಕ ಸೀರೆಯುಟ್ಟ ನೀರೆಯರ ಓಟ ಮುಂಜಾನೆ ನಗರದಲ್ಲಿ ಹೊಸ ಅನುಭೂತಿಯನ್ನು ಒದಗಿಸಿತು.

ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭಾನುವಾರ ‘ಸಾರಿ ರನ್’ ಏರ್ಪಟ್ಟಿತು. ಬಣ್ಣ ಬಣ್ಣದ ಆಕರ್ಷಕ ಸೀರೆಯುಟ್ಟ ನೀರೆಯರ ಓಟ ಮುಂಜಾನೆ ನಗರದಲ್ಲಿ ಹೊಸ ಅನುಭೂತಿಯನ್ನು ಒದಗಿಸಿತು. ಸಿಟಿ ಸೆಂಟರ್ ಮಾಲ್‌ನಿಂದ ಸಾರಿ ರನ್ ಆರಂಭಗೊಂಡು ಪಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೆಲ್ ಸರ್ಕಲ್, ಪಿವಿಎಸ್ ಮೂಲಕ ಸಿಟಿ ಸೆಂಟರ್ ಮುಂಭಾಗಕ್ಕೆ ಆಗಮಿಸಿತು. ಒಟ್ಟು 3 ಕಿ.ಮೀ ನಡಿಯನ್ನು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಆಯೋಜನೆಗೊಳಿಸಲಾಯಿತು.

ಮಹಿಳೆಯರಿಗೆಂದೇ ವಿಶೇಷವಾಗಿ ಸಂಘಟಿಸಲಾದ ಸಾರಿ ರನ್‌ನಲ್ಲಿ ತಾಯಿ- ಮಗಳು, ಅತ್ತೆ- ಸೊಸೆ, ಒಂದಿಡೀ ಕುಟುಂಬ, ಸ್ನೇಹಿತರ ಗುಂಪು ಹೀಗೆ ವೈವಿಧ್ಯಮಯವಾಗಿ ನಾರಿಯರು ಓಟಕ್ಕಿಳಿದಿದ್ದರು. ಕಚೇರಿ, ಮನೆ ಎಂಬಿತ್ಯಾದಿ ವಿಷಯಗಳಲ್ಲಿಯೇ ತೊಡಗಿಸಿಕೊಂಡಿದ್ದ ಮಹಿಳೆಯರು ಸಾರಿ ರನ್‌ನಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮಹಿಳೆಯರ ಫಿಟ್ನೆಸ್‌ ರನ್‌: ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳೂರು ರನ್ನರ್ಸ್ ಕ್ಲಬ್ ಆಯೋಜನೆಯಲ್ಲಿ ಫಿಟ್ನೆಸ್ ರನ್ ತಣ್ಣೀರುಬಾವಿ ಸರ್ಫ್ ಕ್ಲಬ್ ಜಂಕ್ಷನ್ ನಿಂದ ಶುರುವಾಯಿತು. ಈ ರನ್ ನಲ್ಲಿ ಮಂಗಳೂರು ರನ್ನರ್ಸ್ ಕ್ಲಬ್ ಸದಸ್ಯರ ಜತೆಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಸುಮಾರು 45 ಮಂದಿ ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು. ಸರ್ಫ್ ಕ್ಲಬ್, ಕೆಐಒಸಿಎಲ್ ಜಂಕ್ಷನ್, ಎನ್ ಎಂಪಿಎ ವರೆಗೆ 5 ಹಾಗೂ 10 ಕಿ.ಮೀ ಫಿಟ್ನೆಸ್ ರನ್ನಿಂಗ್, ವಾಕಿಂಗ್ ಹಾಗೂ ಜಾಗಿಂಗ್ ನಡೆಯಿತು.ಮಂಗಳೂರು ಪೊಲೀಸ್ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಚಾಲನೆ ನೀಡಿದರು. ಎಸಿಪಿ ವಿಜಯಕ್ರಾಂತಿ ಮತ್ತಿತರರಿದ್ದರು. ಮಂಗಳೂರು ರನ್ನರ್ಸ್ ಕ್ಲಬ್ ಅಧ್ಯಕ್ಷ ಜೋಯೆಲ್ ರೆಬೆಲ್ಲೋ, ಪ್ರಮುಖರಾದ ರಿತು ಬರಿವಾಲ್, ಅಮರ್ ಕಾಮತ್, ರಾಯ್ ಸ್ಟರ್ ಡಿಸೋಜಾ, ವಾಸುದೇವ ಕಾಮತ್, ಚಂದ್ರಶೇಖರ ಶೆಟ್ಟಿ, ಪ್ರಾಚಿ ಕಾಮತ್, ನಿಶ್ಮಿತಾ ಪುತ್ರನ್, ಶುಭಾನಂದ ರಾವ್, ಶಿವಾನಂದ ರಾವ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಟಿಪ್ಪರ್‌
ಗಡಿನಾಡು ಬೆಳಗಾವಿ ಕನ್ನಡಿಗರ ದೊಡ್ಡ ಅಸ್ಮಿತೆ