ಮೂಲ್ಕಿ: ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಸಪರಿವಾರ ಶ್ರೀ ಭಗವತೀ ಅಮ್ಮನವರಿಗೆ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ವಾನ್ ವೇದಮೂರ್ತಿ ಕೃಷ್ಣಮೂರ್ತಿ ಭಟ್ ಹೊಯ್ಗೆಗುಡ್ಡೆ ಹಾಗೂ ಶ್ರೀಪತಿ ಭಟ್ ಹೊಯ್ಗೆಗುಡ್ಡೆ ನೇತೃತ್ವದಲ್ಲಿ ವೇದಮೂರ್ತಿ ವೆಂಕಟೇಶ ತಂತ್ರಿ ಎಡಪದವು ಮಾರ್ಗದರ್ಶನದಲ್ಲಿ ನಡೆಯಿತು.
ಈ ಸಂದರ್ಭ ಕ್ಷೇತ್ರದ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಧನಂಜಯ ಶೆಟ್ಟಿ ಸಸಿಹಿತ್ಲು, ಕೃಷ್ಣಶೆಟ್ಟಿ ಎಕ್ಕಾರು ಮುಂಬೈ, ದೇವದಾಸ ಶೆಟ್ಟಿ ಬಂಟ್ವಾಳ, ಸಿಬಿ ಕರ್ಕೇರಾ, ಬಿಜೆಪಿಯ ನಾಯಕ ಸುದರ್ಶನ್ ಮೂಡಬಿದಿರೆ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ರೋಹಿ ದಾಸ್ ಬಂಗೇರ ಮುಂಬೈ, ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಲ್ಚಡ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ವಾಮನ್ ಇಡ್ಯಾ, ಮುಂಬೈ ಸಮಿತಿ ಅಧ್ಯಕ್ಷ ವೇದ ಪ್ರಕಾಶ್ ಎಂ ಶ್ರೀಯಾನ್, ಉಪಾಧ್ಯಕ್ಷ ವಿಶ್ವನಾಥ ಬೆಳ್ಚಡ, ಪದಾಧಿಕಾರಿಗಳಾದ ಚಂದ್ರಶೇಖರ ನಾನಿಲ್, ಮುರ ಸದಾಶಿವ ಶೆಟ್ಟಿ, ರಮೇಶ್ ಬಂಗೇರ, ರಾಜೇಂದ್ರ ಪ್ರಸಾದ್ ಎಕ್ಕಾರು, ಶಿವಣ್ಣ ಅಂಚನ್ ಕಾಪು, ಈಶ್ವರ ಕಟೀಲು,ಸುರೇಶ್ ಬಂಗೇರ ತೋಕೂರು, ಗುರುರಾಜ್ ಮಲ್ಲಿಗೆಯಂಗಡಿ, ಶೆಡ್ಡೆ ಮಂಜುನಾಥ ಭಂಡಾರಿ, ಕಸ್ತೂರಿ ಪಂಜ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಉಚಿತ ಬಸ್, ರಿಕ್ಷಾ ಸೇವೆ; ಬ್ರಹ್ಮಕಲಶೋತ್ಸವಕ್ಕೆ ಸುಮಾರು 40,000 ಮಿಕ್ಕಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಮಧ್ಯಾಹ್ನ, ಸಂಜೆ ಅನ್ನ ಪ್ರಸಾದ ಸ್ವೀಕರಿಸಿದರು. ಸಂಚಾರ ದಟ್ಟಣೆ ಕಂಡು ಬಂದಿದ್ದು. ವಾಹನಗಳ ಪಾರ್ಕಿಂಗ್ ಗೆ ಸ್ವಯಂ ಸೇವಕರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೆ ಮುಕ್ಕದಿಂದ ಸಸಿಹಿತ್ಲುವರೆಗೆ ಸಿದ್ದಿವಿನಾಯಕದವರ ಒಂದು ಬಸ್ಸು, ಮರೋಳಿಯವರ ಎರಡು ಬಸ್ ಮತ್ತು ನವದುರ್ಗದವರ ಒಂದು ಬಸ್ಸಿನಲ್ಲಿ ಪ್ರಯಾಣಿಕರಿಗೆ ಉಚಿತ ಸೇವೆ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಹಳೆಯಂಗಡಿಯಿಂದ ಸಸಿಹಿತ್ಲು ದೇವಸ್ಥಾನಕ್ಕೆ 10 ರಿಕ್ಷಾದವರು ಪ್ರಯಾಣಿಕರನ್ನು ಉಚಿತವಾಗಿ ಕರೆದೊಯ್ಯುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದರು. ಮೂಲ್ಕಿ, ಸುರತ್ಕಲ್, ಕಿನ್ನಿಗೋಳಿಯಿಂದ ಸರ್ಕಾರಿ ಬಸ್ಸಿನ ವ್ಯವಸ್ತೆ ಮಾಡಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಮೂಲ್ಕಿ ಶಿವಪ್ರಣಾಮ್ ಸ್ಕೂಲ್ ಆಫ್ ಡ್ಯಾನ್ಸ್ ಅವರಿಂದ ಅನ್ನ ಪೂರ್ಣ ರಿತೇಶ್ ನಿರ್ದೇಶನದಲ್ಲಿ ನೃತ್ಯ ವೈಭವ, ಮಧ್ಯಾಹ್ನ ಗಂಗೆಗೆ ನೃತ್ಯ ನಮನ ವಿದ್ವಾನ್ ಚಿತ್ರಾಕ್ಷೀ ಅಜಿತ್ ಬಳಗದವರಿಂದ ನಡೆಯಿತು. ಸಂಜೆ ಸಮುದ್ರ ತೀರದಲ್ಲಿ ಗಂಗೆಗೆ ನುಡಿ ನಮನವು ಯುವ ಬ್ರಿಗೇಡ್ ಸ್ಥಾಪಕಾಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಅವರಿಂದ ನಡೆಯಿತು. ರಾತ್ರಿ ವೈಭವದ ಗಂಗಾರತಿ ಹಾಗೂ ಮಂಗಳೂರು ಕಲಾಸಿರಿ ಬಳಗದವರಿಂದ ಗಂಗಾ ಗಾಯನ, ಖ್ಯಾತ ಗಾಯಕರಿಂದ ಭಕ್ತಿ ಭಾವ ಗಾನ ನಡೆಯಿತು.4ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ: ಭಕ್ತಿಯಲ್ಲಿ ವಿರಕ್ತಿಯಿಲ್ಲ, ಬ್ರಹ್ಮಕಲಶದ ಮೂಲಕ ದೇವಳದ ಅಭಿವೃದ್ದಿಯಾದಾಗ ನಮ್ಮ ಉದ್ದಾರವು ಆಗುತ್ತದೆ. ಇಂದಿನ 5 ಜಿ ಯುಗದಲ್ಲಿ ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ, ಸಂಸ್ಕ್ರತಿಯನ್ನು ತಿಳಿಸುವ ಕಾರ್ಯವಾಗಬೇಕೆಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಮಾಜದಲ್ಲಿ ಐಕ್ಯಮತದ ಅಗತ್ಯವಿದ್ದು, ನಾವು ಕೇವಲ ಜಾತಿಗೆ ಸೀಮಿತವಾಗದೇ ಜಾತಿ ವ್ಯವಸ್ಥೆ ಬಿಟ್ಟು ಒಗ್ಗಟ್ಟಿನ ಮನೋಭಾವ ಪ್ರದರ್ಶಿಸಿದಲ್ಲಿ ಹಿಂದೂ ಸಮಾಜ ಉಳಿಯಲು ಸಾಧ್ಯ ಎಂದರು. ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಆಶೀರ್ವಚನ ನೀಡಿ 1995ರ ಬಳಿಕ ಇದು ಮೂರನೇ ಬ್ರಹ್ಮಕಲಶವಾಗಿದ್ದು ಎಲ್ಲರ ಸಹಕಾರದಿಂದ ಕ್ಷೇತ್ರದ ಚಿತ್ರಣವೇ ಬದಲಾಗಿದೆಯೆಂದು ಹೇಳಿದರು. ಬ್ರಹ್ಮಕಲಶೋತ್ಸವದ ಮುಂಬೈ ಸಮಿತಿಯ ಅಧ್ಯಕ್ಷ ವೇದಪ್ರಕಾಶ್ ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು.ಸಾಧಕರಾದ ಚಂದ್ರಶೇಖರ ಸಾಲ್ಯಾನ್, ಧರ್ಮಪಾಲ ದೇವಾಡಿಗ, ಎಲ್.ವಿ. ಅಮೀನ್, ಮಂಗಲ್ಪಾಡಿ, ಅಡ್ಕ ಶ್ರೀ ಭಗವತೀ ಕ್ಷೇತ್ರದ ಕೃಷ್ಣ ಕಾರ್ನವರು, ಗುಲಾಬಿ ನೀಲಯ ಕೋಟ್ಯಾನ್ ಅವರಿಗೆ ವಿಶೇಷ ಗೌರವಾರ್ಪಣೆ ಸಲ್ಲಿಸಲಾಯಿತು. ಮುಂಬೈ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಶ್ರೀಯಾನ್ ಮತ್ತು ಕವಿತಾ ದಂಪತಿಗಳನ್ನು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆ ಪರಿಗಣಿಸಿ ಬೆಳ್ಳಿ ಕಿರೀಟವನ್ನಿಟ್ಟು ಗೌರವಿಸಲಾಯಿತು. ಸಂದೀಪ್ ಸಸಿಹಿತ್ಲು, ದಿನೇಶ್ ಶೆಟ್ಟಿಗಾರ್, ರಜತ್ ಸಸಿಹಿತ್ಲು, ಲ್ಯಾನ್ಸಿ ಡಿಸೋಜ, ಯೋಗೀಶ್ ರಾಮನಗರ, ಸ್ವಚ್ಚತಾ ಕಾರ್ಯದ ಯಶೋದಾ ಬಂಗೇರ, ಪುಷ್ಪಾ, ಸುಶೀಲ, ಜೋತಿ, ಜಯಾ ಚಂಪಾ ಮತ್ತು ಮುಂಬೈನಲ್ಲಿ ನಿಧಿ ಸಂಗ್ರಹ ಮಾಡಿದವರನ್ನು ಗೌರವಿಸಲಾಯಿತು.ಸಸಿಹಿತ್ಲು ಶ್ರೀ ಸಾರಂತಾಯ ಗರೊಡಿ ಬ್ರಹ್ಮಕಲಶೋತ್ಸವದ ಸಮಿತಿ ಅಧ್ಯಕ್ಷ ಸಿ.ಬಿ.ಕರ್ಕೇರ, ಮುಂಬೈ ಮೊಗವೀರ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಗಣೇಶ್ ಕಾಂಚನ್, ಮುಂಬೈ ಮೊಗವೀರ ಮಹಾಜನ ಸೇವಾ ಸಂಘದ ಸಂತೋಷ್ ಪುತ್ರನ್, ರಾಷ್ತ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ, ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ್ ಯು ದೇವಾಡಿಗ, ನಿವೃತ್ತ ಆರ್ ಬಿಐ ಅಧಿಕಾರಿ ಚಂದ್ರಕಾಂತ ಎಸ್ ಪುತ್ರನ್, ಮುಂಬೈ ಬಿಲ್ಲವರ ಅಸೋಸಿಯೇಷನ್ ಗೌರವಾಧ್ಯಕ್ಷ ಎಲ್ ವಿ ಅಮೀನ್, ರವೀಂದ್ರನಾಥ್ ಎಲ್ ಕರ್ಕೇರ, ಉದ್ಯಮಿ ಜಯ ಸಾಲ್ಯಾನ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈನ ಅಜಿತ್ ಸುವರ್ಣ , ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಚಂದ್ರಶೇಖರ ಸಾಲ್ಯಾನ್, ಬ್ರಹ್ಮಕಲಶೋತ್ಸವ ಉಪ ಸಮಿತಿಯ ಸುನಿಲ್ ಆಳ್ವ, ವಿನಯಾನಂದ ಜೋಗಿ, ಜಗನ್ನಾಥ ಆರ್. ಕೋಟ್ಯಾನ್, ಅರವಿಂದ ಸಾಲ್ಯಾನ್, ಶೋಭೇಂದ್ರ ಸಸಿಹಿತ್ಲು, ವಿಕೆ ಯಾದವ್ ಎಸ್ ಆರ್ ಪ್ರದೀಪ್ ಮತ್ತಿತರರಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.