ಮಂಗಳೂರು ವಿವಿ ರ‍್ಯಾಂಕ್ ಪ್ರಕಟ: ಆಳ್ವಾಸ್ ವಿದ್ಯಾರ್ಥಿಗಳ ಪಾರಮ್ಯ

KannadaprabhaNewsNetwork |  
Published : Jun 07, 2024, 12:33 AM IST
ಮಂಗಳೂರು ವಿವಿ ರ‍್ಯಾಂಕ್: ಆಳ್ವಾಸ್ ಪಾರಮ್ಯ | Kannada Prabha

ಸಾರಾಂಶ

ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮಂಗಳೂರು ವಿಶ್ವವಿದ್ಯಾಲಯದ ೨೦೨೨- ೨೩ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಕಾಲೇಜು ಪಾರಮ್ಯ ಮೆರೆದಿದೆ. ಪದವಿ, ಸ್ನಾತಕೋತ್ತರ, ಶಿಕ್ಷಣ (ಬಿಇಡಿ) ಹಾಗೂ ದೈಹಿಕ ಶಿಕ್ಷಣ (ಬಿಪಿಇಡಿ) ವಿಭಾಗಗಳಲ್ಲಿ ಕಾಲೇಜಿಗೆ ಒಟ್ಟು೨೪ ರ‍್ಯಾಂಕ್ ಲಭಿಸಿವೆ.

ಪದವಿ ರ‍್ಯಾಂಕ್‌ಗಳು: ಬಿಎಸ್ಸಿ ಫುಡ್, ನ್ಯೂಟ್ರಿಷನ್‌ ಆ್ಯಂಡ್‌ ಡಯಟಿಕ್ಸ್ ವಿಭಾಗದಲ್ಲಿ ದ್ಯುತಿ ರಾವ್ (೧ನೇ ರ‍್ಯಾಂಕ್), ರಚನಾ (೩ನೇ ರ‍್ಯಾಂಕ್), ಅರ್ಪಿತಾ (೭ನೇ ರ‍್ಯಾಂಕ್), ಬಿಎಸ್ಸಿ ವಿಭಾಗದಲ್ಲಿ ನಿರೀಕ್ಷಾ (೮ನೇ ರ‍್ಯಾಂಕ್), ಬಿಎಸ್ಸಿ ಫ್ಯಾಶನ್‌ ಡಿಸೈನಿಂಗ್ ವಿಭಾಗದಲ್ಲಿ ರಮ್ಯಾ (೨ನೇ ರ‍್ಯಾಂಕ್), ಬಿಕಾಂ. ವಿಭಾಗದಲ್ಲಿ ಗ್ರೀಷ್ಮಾ (೧ನೇ ರ‍್ಯಾಂಕ್), ಬಿಎ -ಎಚ್‌ಆರ್‌ಡಿ ವಿಭಾಗದಲ್ಲಿ ಸ್ವಾತಿ ನಾಯಕ್ (೨ನೇ ರ‍್ಯಾಂಕ್) ಪಡೆದಿದ್ದಾರೆ. ಬಿಬಿಎ ವಿಭಾಗದಲ್ಲಿ ಸಂಪಾ ದಾಸ್ (೬ನೇ ರ‍್ಯಾಂಕ್), ಎಂ. ಸೌಮ್ಯ (೭ನೇ ರ‍್ಯಾಂಕ್), ಭೂಮಿಕಾ ಬಿ.ಎಚ್. (೮ನೇ ರ‍್ಯಾಂಕ್), ಬಿಎಸ್‌ಡಬ್ಲೂ ವಿಭಾಗದಲ್ಲಿ ಐಶ್ವರ್ಯ ಎಸ್. (೩ನೇ ರ‍್ಯಾಂಕ್), ಬಿಸಿಎ ವಿಭಾಗದಲ್ಲಿ ಪೃಥ್ವಿ (೫ನೇ ರ‍್ಯಾಂಕ್) ಬಿಎ ವಿಭಾಗದಲ್ಲಿ ಶ್ರೀಲಕ್ಷ್ಮೀ (೪ನೇ ರ‍್ಯಾಂಕ್) ಗಳಿಸಿದ್ದಾರೆ.

ಸ್ನಾತಕೋತ್ತ ರ‍್ಯಾಂಕ್: ಎಂಎ ಇಂಗ್ಲಿಷ್ ವಿಭಾಗದಲ್ಲಿ ಅಫ್ರಾ ಮೊಹಮದ್‌ ಇರ್ಫಾನ್ (೧ನೇ ರ‍್ಯಾಂಕ್), ಎಂಎಸ್ಸಿ ಮನಶಾಸ್ತ್ರ ವಿಭಾಗದಲ್ಲಿ ಅನುಶ್ರೀ (೧ನೇ ರ‍್ಯಾಂಕ್), ಎಂಎಸ್ಸಿ ಆನ್ವಯಿಕ ರಸಾಯನಶಾಸ್ತ್ರ ಆಶ್ರಯ್ (೧ನೇ ರ‍್ಯಾಂಕ್), ಎಂಎಸ್ಸಿ ಆಹಾರ ವಿಜ್ಞಾನದಲ್ಲಿ ಯಶಸ್ವಿ (೧ನೇ ರ‍್ಯಾಂಕ್) ಪಡೆದಿದ್ದಾರೆ.ಬಿಪಿಇಡಿ ಹಾಗೂ ಎಂಪಿಇಡಿ: ಎಂಪಿಇಡಿ ವಿಭಾಗದಲ್ಲಿ ಶಾಲಿನಿ ಕೆ. (೧ನೇ ರ‍್ಯಾಂಕ್), ಬಿಪಿಇಡಿ ವಿಭಾಗದಲ್ಲಿ ದಿವ್ಯಾ (೧ನೇ ರ‍್ಯಾಂಕ್), ಮನೀಷಾ (೨ನೇ ರ‍್ಯಾಂಕ್), ತನುಜಾ (೩ನೇ ರ‍್ಯಾಂಕ್) ಪಡೆದಿದ್ದಾರೆ. ಬಿಇಡಿ: ೨೦೨೩ನೇ ಸಾಲಿನಲ್ಲಿ ರಿಯೋನಾ (೨ನೇ ರ‍್ಯಾಂಕ್), ಸೋನಿಯಾ (೩ನೇ ರ‍್ಯಾಂಕ್), ೨೦೨೪ನೇ ಸಾಲಿನ ಪರೀಕ್ಷೆಯಲ್ಲಿ ಭವ್ಯಶ್ರೀ (೬ನೇ ರ‍್ಯಾಂಕ್) ಗಳಿಸಿದ್ದಾರೆ. ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರ ಮೂರ್ತಿ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಮಧು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆ ಪಾಲಿಕೆ ಜತೆ ಹರಿಹರ ನಗರಸಭೆ ವಿಲೀನಗೊಳಿಸಿ: ಬಿಎಸ್‌ಪಿ
ಕಾಂಗ್ರೆಸ್ ಸಂಘಟನೆಗೆ ವಿಜಯ ರಾಮೇಗೌಡರಿಗೆ ಅಧಿಕಾರ ನೀಡಿ: ಅಭಿಮಾನಿಗಳ ಬಳಗ ಆಗ್ರಹ