ಮಂಗಳೂರು-ಬೆಂಗಳೂರು ಮಧ್ಯೆ ಹಳಿ ಪೂರ್ತಿ ವಿದ್ಯುದೀಕರಣಗೊಂಡು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವೂ ನಡೆದಿದೆ. ರಾಜ್ಯದ ಅತ್ಯಂತ ಪ್ರಮುಖ ರೂಟ್ ಆಗಿರುವ ಮಂಗಳೂರು-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಓಡಾಟದ ಕನಸು ಶೀಘ್ರ ನನಸಾಗಲಿದೆ ಎಂದು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಪುತ್ತೂರು: ಮಂಗಳೂರು-ಬೆಂಗಳೂರು ಮಧ್ಯೆ ಹಳಿ ಪೂರ್ತಿ ವಿದ್ಯುದೀಕರಣಗೊಂಡು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವೂ ನಡೆದಿದೆ. ರಾಜ್ಯದ ಅತ್ಯಂತ ಪ್ರಮುಖ ರೂಟ್ ಆಗಿರುವ ಮಂಗಳೂರು-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಓಡಾಟದ ಕನಸು ಶೀಘ್ರ ನನಸಾಗಲಿದೆ ಎಂದು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಅವರು ಸೋಮವಾರ ಪುತ್ತೂರಿನಲ್ಲಿ ಮಾದ್ಯಮದೊಂದಿಗೆ ಮಾತನಾಡುತ್ತಾ ಮಂಗಳೂರು-ಸುಬ್ರಹ್ಮಣ್ಯದ ನಡುವೆ ರೈಲ್ವೇ ಹಳಿಯ ವಿದ್ಯುದೀಕರಣದ ಕಾರ್ಯ ಪೂರ್ತಿಗೊಂಡು ವಿದ್ಯುತ್ ಪೂರೈಕೆಯ ಕಾರ್ಯ ನಡೆದಿದೆ. ಘಾಟ್ ಭಾಗದಲ್ಲಿ ವಿದ್ಯುದೀಕರಣಗೊಂಡು 2-3 ಬಾರಿ ಪ್ರಾಯೋಗಿಕ ಓಡಾಟ ನಡೆದಿದೆ. ಏರ್ ಬ್ರೇಕಿಂಗ್ ವ್ಯವಸ್ಥೆಯ ಪರೀಕ್ಷೆ ಪೂರ್ಣವಾಗಿದೆ. ಮುಂದೆ ವಂದೇ ಭಾರತ್ ರೈಲಿನ ಓಡಾಟಕ್ಕೆ ಸಮಯ, ವೇಳಾಪಟ್ಟಿಯನ್ನು ನಿಗದಿ ಮಾಡುವ ಕಾರ್ಯವನ್ನು ಶೀಘ್ರ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಜತೆಗೆ ಮಂಗಳೂರು-ಬೆಂಗಳೂರು ನಡುವೆ ಮುಂದಿನ ದಿನಗಳಲ್ಲಿ ರೈಲ್ವೇ ಹಳಿಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೇ ಸಚಿವರ ಜತೆಗೆ ಮಾತನಾಡಿದ್ದು, ಲೋಕಸಭೆಯಲ್ಲಿ ಆಗ್ರಹ ಮಾಡಿದ ವೇಳೆ ದ್ವಿಗುಣಗೊಳಿಸುವ ಕಾರ್ಯಕ್ಕೆ ಫೈನಲ್ ಲೊಕೇಶನ್ ಸರ್ವೆಗೆ ಆದೇಶವಾಗಿದೆ ಎಂಬ ಉತ್ತರ ನೀಡಿದ್ದಾರೆ. ಪ್ರಸ್ತುತ ಘಾಟ್ ಭಾಗದಲ್ಲಿ ಹಳಿಯು 1:50 ಗ್ರೆಡಿಯೆಂಟ್ ಇದ್ದು, ಅದನ್ನು 1: 150 ಮಾಡಿ ರೈಲ್ವೇ ಹಳಿಯನ್ನು ಅಭಿವೃದ್ಧಿ ಪಡಿಸಲು ಆಗ್ರಹಿಸಲಾಗಿದೆ ಎಂದರು. ಮಂಗಳೂರು ಭಾಗದ ರೈಲ್ವೇ ವ್ಯವಸ್ಥೆಯು ದಕ್ಷಿಣ, ನೈಋತ್ಯ, ಕೊಂಕಣ್ ರೈಲ್ವೆಯ ಮಧ್ಯೆ ಆಡಳಿತಾತ್ಮಕವಾಗಿ ಹಂಚಿ ಹೋಗಿದ್ದು, ದಕ್ಷಿಣದ ಭಾಗವನ್ನು ನೈಋತ್ಯದೊಂದಿಗೆ ವಿಲೀನಗೊಳಿಸಿ ಹೆಮ್ಮೆಯ ಪ್ರಧಾನಿ ಮೋದಿಯವರು ಕರಾವಳಿ ಕರ್ನಾಟಕದ ಜತೆಗೆ ಸಂತೋಷದ ಸುದ್ದಿಯನ್ನು ಕೊಟ್ಟಿದ್ದಾರೆ. ಇದು ಮುಂದಿನ ದಿನಗಳಲ್ಲಿ ಒಟ್ಟಾರೆಯಾಗಿ ಇಲ್ಲಿನ ರೈಲ್ವೇ ಮೂಲಸೌಕರ್ಯ ಅಭಿವೃದ್ಧಿಯ ಅಮೂಲಾಗ್ರ ಪರಿವರ್ತನೆಗೆ ಐತಿಹಾಸಿಕ ತೀರ್ಮಾನ ಎನಿಸಿಕೊಂಡಿದೆ.ದಕ್ಷಿಣ ರೈಲ್ವೇಯ 20 ಕಿ.ಮೀ.ಭಾಗವನ್ನು ನೈಋತ್ಯ ರೈಲ್ವೆಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಕೊಂಕಣ್ ರೈಲ್ವೇ ಕೂಡ ಭಾರತೀಯ ರೈಲ್ವೇ ಜತೆಗೆ ವಿಲೀನವಾಗಬೇಕು ಎಂದು ನಾನು ಸಹಿತ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ.ರಾಘವೇಂದ್ರ ಅವರು ಒಟ್ಟಾಗಿ ಆಗ್ರಹ ಮಾಡಿದ್ದೇವೆ. ಕ್ಷುಲ್ಲಕ ರಾಜಕೀಯಕ್ಕೆ ವಿರೋಧ: ವಿಲೀನಕ್ಕೆ ಕೇರಳದ ವಿರೋಧಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಂಸದರು, ಈ ವಿಚಾರವನ್ನು ಕೇರಳ-ಕರ್ನಾಟಕ ಮಾಡುವುದಕ್ಕೆ ನಾನು ಯೋಚನೆ ಮಾಡುವುದಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತಾತ್ಮಕ ಬದಲಾವಣೆ ಮಾಡಿದ್ದು, ಅದರಲ್ಲಿ ಕ್ಷುಲ್ಲಕ ರಾಜಕೀಯ ಮಾಡವುದಕ್ಕೆ ಬಯಸುವುದಿಲ್ಲ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.