ಶಾಸಕ ಯಶ್‌ಪಾಲ್ ಸುವರ್ಣ ಹುಟ್ಟುಹಬ್ಬ - ಅಂಗಾಂಗ ದಾನ ನೋಂದಣಿ

KannadaprabhaNewsNetwork |  
Published : Aug 25, 2026, 03:00 AM IST
ಯಶ್‌ಪಾಲ್ ಸುವರ್ಣರ ಹುಟ್ಟಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಉದ್ಘಾಟನೆ | Kannada Prabha

ಸಾರಾಂಶ

ಪ್ರತಿಫ‌ಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ನಿರಂತರವಾಗಿ ಸೇವೆ ಸಲ್ಲಿಸುವ ಮನಸ್ಸುಳ್ಳ ಶಾಸಕ ಯಶ್‌ಪಾಲ್‌ ಸುವರ್ಣ ಅವರು ಅಂಗಾಂಗ ದಾನದ ನೋಂದಣಿ ಮಾಡಿರುವುದು ಶ್ರೇಷ್ಠ ದಾನವಾಗಿದೆ. ಹುಟ್ಟು ಹಬ್ಬದ ಸಂದರ್ಭ ಆಯೋಜಿಸಿದ ರಕ್ತದಾನ ಶಿಬಿರವು ಸಾಮಾಜಿಕ ಕಾಳಕಳಿಯ ಶ್ಲಾಘನೀಯ ಕಾರ್ಯ ಎಂದು ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಹೇಳಿದರು.

ಉಡುಪಿ: ಪ್ರತಿಫ‌ಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ನಿರಂತರವಾಗಿ ಸೇವೆ ಸಲ್ಲಿಸುವ ಮನಸ್ಸುಳ್ಳ ಶಾಸಕ ಯಶ್‌ಪಾಲ್‌ ಸುವರ್ಣ ಅವರು ಅಂಗಾಂಗ ದಾನದ ನೋಂದಣಿ ಮಾಡಿರುವುದು ಶ್ರೇಷ್ಠ ದಾನವಾಗಿದೆ. ಹುಟ್ಟು ಹಬ್ಬದ ಸಂದರ್ಭ ಆಯೋಜಿಸಿದ ರಕ್ತದಾನ ಶಿಬಿರವು ಸಾಮಾಜಿಕ ಕಾಳಕಳಿಯ ಶ್ಲಾಘನೀಯ ಕಾರ್ಯ ಎಂದು ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಹೇಳಿದರು. ಟೀಮ್‌ ಯಶ್‌ಪಾಲ್‌ ಸುವರ್ಣ ಉಡುಪಿ ನೇತೃತ್ವದಲ್ಲಿ ಶಾಸಕ ಯಶ್‌ಪಾಲ್‌ ಸುವರ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಪುರಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ ಅವರು, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುತ್ತಿರುವ ಶಾಸಕರ ಸೇವಾ ಮನೋಭಾವ ಮೆಚ್ಚುವಂತದ್ದು, ಅವರ ಭವಿಷ್ಯ ಇನ್ನಷ್ಟು ಬೆಳಗಲಿ ಎಂದು ತಿಳಿಸಿದರು.

ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಅನಂತಪದ್ಮನಾಭ ಸಾಮಗ ಮಾತನಾಡಿ, ಶಾಸಕರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿರುವ ರಕ್ತದಾನ ಶಿಬಿರ ನಿಜಕ್ಕೂ ಅರ್ಥಪೂರ್ಣ ಹಾಗೂ ಸಮಾಜಮುಖಿ ಕಾರ್ಯಕ್ರಮವಾಗಿದೆ ಎಂದರು.

ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ಗೋಕುಲದಾಸ ಕಚ್ಚೂರು, ಜಿಲ್ಲಾ ಮರಾಟಿ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್, ಮಲ್ಪೆ ಮತ್ಸ್ಯೋದ್ಯಮಿ ದಯಾನಂದ ಕೆ. ಸುವರ್ಣ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ಸುಧಾಕರ ಕುಂದರ್‌, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ| ವೀಣಾ, ಟೀಮ್‌ ಯಶ್‌ಪಾಲ್‌ ಸುವರ್ಣ ಉಡುಪಿಯ ಸಂಚಾಲಕ ಶೇಖರ ಶೆಟ್ಟಿ ಹಿರಿಯಡಕ ಉಪಸ್ಥಿತರಿದ್ದರು.ಮಟ್ಟು ಯತೀಶ್‌ ಕೋಟ್ಯಾನ್‌ ಸ್ವಾಗತಿಸಿ, ವಿಜೇತಾ ಶೆಟ್ಟಿ ನಿರೂಪಿಸಿದರು. ರಕ್ತದಾನ ಶಿಬಿರದಲ್ಲಿ 215 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವೋದಯ ಸಹಕಾರ ಸಂಘ: ಶೇ.9 ಡಿವಿಡೆಂಡ್ ಘೋಷಣೆ
ಭಾಗಮಂಡಲ ವಲಯ ಪ್ರೌಢಶಾಲೆ ವಿಭಾಗ ಕ್ರೀಡಾಕೂಟ