ಕನ್ನಡಪ್ರಭ ವಾರ್ತೆ ಬೇತಮಂಗಲ
ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿ ಕರಡಗೂರಿನಲ್ಲಿ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ರೈತರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಳೆದ ಆರು ತಿಂಗಳಿಂದ ಜಿಲ್ಲಾಧ್ಯಕ್ಷ ಚಿನ್ನಪ್ಪರೆಡ್ಡಿ ಮಾರ್ಗದರ್ಶನದಂತೆ, ರೈತರು ಸ್ವತಃ ತಮ್ಮದೇ ಸಂಘ ಮಾಡಿಕೊಂಡರೆ ಸಮಸ್ಯೆ ಪರಿಣಾಮಕಾರಿಯಾಗಿ ನಿವಾರಣೆಯಾಗುತ್ತವೆ ಎಂಬ ಸಕಾರಾತ್ಮಕ ಉದ್ದೇಶದಿಂದ ಕೆಜಿಎಫ್ ತಾಲೂಕಿನಲ್ಲಿ ಈ ಹೊಸ ಸಂಘ ಅಸ್ತಿತ್ವಕ್ಕೆ ತರಲಾಗಿದೆ.
ಕೋಲಾರ ಜಿಲ್ಲೆಯು ಮಾವಿನ ಬೆಳೆಗೆ ಪ್ರಸಿದ್ಧವಾಗಿದ್ದು, ಶ್ರೀನಿವಾಸಪುರ ಮತ್ತು ಮುಳಬಾಗಿಲು ನಂತರ ಕೆಜಿಎಫ್ ತಾಲೂಕಿನಲ್ಲಿ ಹೆಚ್ಚು ಮಾವು ಬೆಳೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ ಎಂದರು.ಕೆಜಿಎಫ್ ತಾಲೂಕಿನಲ್ಲಿ ಸರಿ ಸುಮಾರು ೫,೦೦೦ ರಿಂದ ೬,೦೦೦ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ೩,೦೦೦ ರಿಂದ ೪,೦೦೦ ರೈತರು ಮಾವಿನ ಬೆಳೆ ನಂಬಿ ಜೀವನ ಸಾಗಿಸುತ್ತಿದ್ದಾರೆ ಎಂದು ವಿವರಿಸಿದರು.
ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಹಾಗೂ ಬೃಹತ್ ಸಮಾರಂಭ ಜ.೨೮ರಂದು ಬೆಳಗ್ಗೆ ೧೦ ಗಂಟೆಗೆ ಕ್ಯಾಸಂಬಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸುಮಾರು ೫೦೦ ರಿಂದ ೬೦೦ಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಮಾವು ಬೆಳೆಗಾರರಿಗೆ ಸಹಕಾರ ನೀಡುವ ಇತರ ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಮಟ್ಟದ ಸಂಘದ ಕಾರ್ಯಕ್ರಮ ಜ.೧೯ರಂದು ಶ್ರೀನಿವಾಸಪುರದಲ್ಲಿ ನಡೆಯಲಿದ್ದು, ಇದರ ಮುಂದುವರಿದ ಭಾಗವಾಗಿ ಕೆಜಿಎಫ್ ತಾಲೂಕು ಮಟ್ಟದಲ್ಲಿ ಸಮಾವೇಶ ನಡೆಯಲಿದೆ ಎಂದರು. ಸಭೆಯಲ್ಲಿ ಮಾವು ಬೆಳೆಗಾರರಾದ ತಿಮ್ಮಾರೆಡ್ಡಿ, ಶಂಕರಪ್ಪ, ಬಲರಾಮ್ ರೆಡ್ಡಿ, ನಾರಾಯಣ ರೆಡ್ಡಿ, ನರಸಿಂಹ ರೆಡ್ಡಿ, ಗುರುವ ರೆಡ್ಡಿ, ಗಂಗಿ ರೆಡ್ಡಿ, ಗೋಪಿನಾಥ್ ರೆಡ್ಡಿ, ಅಂಜಪ್ಪ, ಲಕ್ಷ್ಮಣ್ ರೆಡ್ಡಿ, ಬ್ರಹ್ಮಾನಂದ, ಸುನೀಲ್ ಇದ್ದರು.
ಆಂಧ್ರ ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ವಾರಕ್ಕೆ ಒಮ್ಮೆ ತೋಟಗಳಿಗೆ ಭೇಟಿ ನೀಡಿ ರೈತರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಾರೆ, ಅಂದರೆ ಕರ್ನಾಟಕದಲ್ಲಿ ರೈತರು ತೋಟಗಾರಿಕೆ ಇಲಾಖೆಗೆ ಎಷ್ಟು ಮನವಿ ಕೊಟ್ಟರು ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.- ತಿಮ್ಮಾರೆಡ್ಡಿ, ನಿವೃತ್ತ ಅಧಿಕಾರಿ ಹಾಗೂ ಮಾವು ಬೆಳೆಗಾರರು