ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ನಂತರ ಶ್ರೀಗಳು ನೂತನ ಅಧ್ಯಕ್ಷ ಎಂ.ಎಸ್.ಉಮೇಶ್ ಮಣಿಕೆರೆರನ್ನು ಅಭಿನಂದಿಸಿ ಆಶೀರ್ವದಿಸಿ ಆಶೀರ್ವಚನ ನೀಡಿ ಲಿಂಗೈಕ್ಯ ಹಾನಗಲ್ಲು ಶ್ರೀಕುಮಾರ ಮಹಾಸ್ವಾಮೀಜಿ ಕನ್ನಡ ನಾಡು ಅಪೂರ್ವ ತ್ಯಾಗಯೋಗಿಗಳು ಅವರು ಕಳೆದ ನೂರು ವರ್ಷಗಳ ಹಿಂದೆಯೇ ಸಮಾಜವನ್ನು ಸಂಘಟಿಸುವ ಮೂಲಕ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ ಮಹಾನ್ ಚೇತನ ಆವರ ತತ್ವಾದರ್ಶಗಳು ಇಂದಿನ ಯುವಕರು ಮೈಗೊಡಿಸಿಕೊಂಡು ಹೊಸನಗರ ತಾಲೂಕು ಮಾದರಿಯನ್ನಾಗಿ ಮಾಡುವಂತಾಗಲಿ ಎಂದು ನೂತನ ಅಧ್ಯಕ್ಷರಿಗೆ ಹಿತವಚನ ನೀಡಿ ಅಶೀರ್ವದಿಸಿದರು.
ಈ ಸಂದರ್ಭದಲ್ಲಿ ರಿಪ್ಪನ್‍ಪೇಟೆ ಶ್ರೀಬಸವೆಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜಗೌಡ, ಎಂ.ಆರ್.ಶಾಂತವೀರಪ್ಪಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಜಯಶೀಳಗೌಡರು ಹರತಾಳು, ಬೆಳಂದೂರು ನಾಗಭೂಷಣಗೌಡರು, ಡಿ.ಈ.ಮಧುಸೂದನ್, ಕುಮಾರಗೌಡ ದೂನ, ಎಚ್.ಎಸ್.ರವಿಗೌಡರು ಹಾಲುಗುಡ್ಡೆ, ಅಖಿಲಭಾರತ ವೀರಶೈವ ತಾಲೂಕು ಸಮಿತಿ ನಿರ್ದೇಶಕ ಬಿ.ಎಲ್.ಲಿಂಗಪ್ಪ ಬೆನವಳ್ಳಿ, ನೆವಟೂರು ಈಶ್ವರಪ್ಪಗೌಡ, ಜೆ.ಜಿ.ಸದಾನಂದ ಜಂಬಳ್ಳಿ, ಕಮದೂರು ರಾಜಶೇಖರ ಮತ್ತಿತರರು ಇದ್ದರು.