ಕನ್ನಡಪ್ರಭ ವಾರ್ತೆ ಪಾಂಡವಪುರ
ಉಪಾಧ್ಯಕ್ಷರಾಗಿ ಅನಿತಾ, ಸದಸ್ಯರಾಗಿ ಧನಂಜಯ, ನವೀನ್ ಕುಮಾರ, ಕುಮಾರಸ್ವಾಮಿ, ಲೋಕೇಶ್, ಹನುಮಂತ, ಸ್ವಾಮಿಗೌಡ, ಸೋಮಶೇಖರ್, ದಿವಾಕರ್, ರಶ್ಮಿ, ಜಯಶೀಲ, ಪದ್ಮ, ಸುಶೀಲ, ರಂಜಿತ, ಸರಿತ, ಚೈತ್ರಾ, ಭವಾನಿ ಚುನಾಯಿತರಾದರು. ಸಮಿತಿ ಸದಸ್ಯ ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕಿ ಕೆ.ಎಂ.ವಿನೋದ ಆಯ್ಕೆಯಾದರು.
ಎಲ್ಲಾ ಸದಸ್ಯರನ್ನು ಗ್ರಾಮಸ್ಥರು ಹಾಗೂ ಶಾಲೆ ಮಕ್ಕಳ ಮನೆ ಸಮಿತಿಯಿಂದ ಅಭಿನಂದಿಸಲಾಯಿತು. ಈ ವೇಳೆ ಸಿಹಿ ವಿತರಣೆ ಮಾಡಲಾಯಿತು.ಗ್ರಾಪಂಮಾಜಿ ಅಧ್ಯಕ್ಷ ಎಂ.ಎಸ್.ಕುಮಾರ್ ಮಾತನಾಡಿ, ಅವಿರೋಧ ಆಯ್ಕೆಯಾಗಬೇಕಾಗಿದ್ದ ಎಸ್‌ಡಿಎಂಸಿಗೆ ಚುನಾವಣೆ ನಡೆಯುವ ಸನ್ನಿವೇಶ ಸೃಷ್ಟಿಯಾದದ್ದು ಬೇಸರದ ಸಂಗತಿ. ಸರ್ಕಾರಿ ಶಾಲೆಗೆ ಸಮಾಜ ಸೇವಕ ಅರವಿಂದ ರಾಘವನ್ ಅವರು 13 ಲಕ್ಷ ರು.ಗಳನ್ನು ನೀಡುವ ಮೂಲಕ ಶಾಲಾಭಿವೃದ್ಧಿಗೆ ಕೈಜೋಡಿಸಿದ್ದಾರೆ. ಇದೀಗ ಚುನಾಯಿತ ಸದಸ್ಯರ ತಂಡ ಮತ್ತಷ್ಟು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯಬೇಕಿದೆ ಎಂದರು.
ಮುಖ್ಯ ಶಿಕ್ಷಕಿ ಕೆ.ಎಂ.ವಿನೋದ ಮಾತನಾಡಿ, ಶಿಕ್ಷಕರೊಂದಿಗೆ ಸಮುದಾಯ ಒಗ್ಗೂಡಿ ಕೆಲಸ ಮಾಡಿದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಶಾಲೆ ಹಾಗೂ ಶಿಕ್ಷಕರ ಜತೆಗೆ ಸಮುದಾಯವು ಶಾಲಾಭಿವೃದ್ಧಿಗೆ ಮುಂದಾಗಲಿ ಎಂದರು.