ಸಾಮಾಜಿಕ ಜಾಗೃತಿ ಉದ್ದೇಶದಿಂದ ಕೆನರಾ ಬ್ಯಾಂಕ್ ಆಯೋಜಿಸುತ್ತಿರುವ 5ನೇ ಆವೃತ್ತಿಯ ಸ್ವಾತಂತ್ರ್ಯ ಓಟ (ಫ್ರೀಡಂ ರನ್) ಸ್ಪರ್ಧೆಯ ಆ. 9ರಂದು (ಭಾನುವಾರ) ಮಣಿಪಾಲದಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಸಚಿನ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ: ಸಾಮಾಜಿಕ ಜಾಗೃತಿ ಉದ್ದೇಶದಿಂದ ಕೆನರಾ ಬ್ಯಾಂಕ್ ಆಯೋಜಿಸುತ್ತಿರುವ 5ನೇ ಆವೃತ್ತಿಯ ಸ್ವಾತಂತ್ರ್ಯ ಓಟ (ಫ್ರೀಡಂ ರನ್) ಸ್ಪರ್ಧೆಯ ಆ. 9ರಂದು (ಭಾನುವಾರ) ಮಣಿಪಾಲದಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಸಚಿನ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಫ್ರೀಡಂ ರನ್ ಅನ್ನು ‘ಗೋ ಗ್ರೀನ್’ ಎಂಬ ವಿಷಯದಡಿ ಆಯೋಜಿಸಲಾಗಿದ್ದು, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ 21 ಕಿ.ಮೀ., 10 ಕಿ.ಮೀ., 5 ಕಿ.ಮೀ., 3ಕಿ.ಮೀ. ಹಾಗೂ ಫನ್ ರನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಬೆಳಿಗ್ಗೆ 5 ಗಂಟೆಗೆ ಮಣಿಪಾಲದಲ್ಲಿ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಆವರಣದಲ್ಲಿ ಫ್ರೀಡಂ ರನ್‌ಗೆ ಚಾಲನೆ ನೀಡಲಾಗುವುದು, ವಿಜೇತರಿಗೆ ಒಟ್ಟು 5 ಲಕ್ಷ ರು. ನಗದು ಬಹುಮಾನಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಸ್ಥಳದಲ್ಲಿಯೂ ನೋಂದಣಿಗೆ ಅವಕಾಶ ಇದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು. ಅಧಿಕಾರಿಗಳಾದ ದುರ್ಗಾಪ್ರಸಾದ್, ಸೂರಜ್ ಉಪ್ಯೂರು, ಸಿದ್ದಾರ್ಥ್ ಮೊದಲಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.