ಮಣಿಪಾಲ: ಸಿಲಿಂಡರ್‌ ಸ್ಫೋಟದಿಂದ ಹೊತ್ತಿ ಉರಿದ ಹೊಟೇಲ್‌

KannadaprabhaNewsNetwork |  
Published : Nov 28, 2025, 03:00 AM IST
23 | Kannada Prabha

ಸಾರಾಂಶ

ಆರ್.ಎಸ್.ಬಿ ಸಭಾಭವನದ ಸಮೀಪದ ಕಟ್ಟಡದಲ್ಲಿರುವ ಹೊಟೇಲೊಂದರಲ್ಲಿ ಗುರುವಾರ ಸಂಜೆ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಇದರ ಪರಿಣಾಮ ಇಡೀ ಹೊಟೇಲ್ ಸುಟ್ಟು ಕರಕಲಾಗಿದೆ

ಮಣಿಪಾಲ: ಇಲ್ಲಿನ ಆರ್.ಎಸ್.ಬಿ ಸಭಾಭವನದ ಸಮೀಪದ ಕಟ್ಟಡದಲ್ಲಿರುವ ಹೊಟೇಲೊಂದರಲ್ಲಿ ಗುರುವಾರ ಸಂಜೆ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಇದರ ಪರಿಣಾಮ ಇಡೀ ಹೊಟೇಲ್ ಸುಟ್ಟು ಕರಕಲಾಗಿದೆ.

ಡೆಲ್ಲಿ ಡಾಬಾ ಎಂಬ ಹೊಟೇಲಿನ ಒಂದು ಗ್ಯಾಸ್ ಸಿಲಿಂಡರ್ ಅಕಸ್ಮಿಕವಾಗಿ ಸ್ಪೋಟಗೊಂಡಿದ್ದು, ಕೆಲಹೊತ್ತಿನಲ್ಲಿ ಇನ್ನೊಂದು ಸಿಲಿಂಡರ್ ಕೂಡ ಸ್ಪೋಟಗೊಂಡು, ಕ್ಷಣ ಮಾತ್ರದಲ್ಲೇ ಬೆಂಕಿ ಕೆನ್ನಾಲಿಗೆ ಇಡೀ ಹೊಟೇಲ್ ವಿಸ್ತರಿಸಿತು. ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಇನ್ನೆರೆಡು ಗ್ಯಾಸ್ ಸಿಲಿಂಡರ್ಗಳು ಸ್ಪೋಟಗೊಳ್ಳದಂತೆ ತಡೆದು ಇನ್ನಷ್ಟು ಅನಾಹುತವನ್ನು ತಡೆದಿದ್ದಾರೆ. ಇದರಿಂದ ಯಾವುದೇ ಜೀವ ಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಧಾಬಾದ ಒಳಗಿದ್ದ ಎರಡು ಗ್ಯಾಸ್ ಸಿಲಿಂಡರ್‌ಗಗಳು ಸ್ಫೋಟಗೊಂಡಿವೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಈಗಾಗಲೇ ಪರಿಶೀಲನೆ ನಡೆಸಿದ್ದು, ಯಾವುದೇ ಸಂಶಯಾಸ್ಪದ ಅಂಶಗಳು ಕಂಡುಬಂದಿಲ್ಲ. ವದಂತಿಗಳು ಹರಡದಂತೆ ಈ ಸ್ಪಷ್ಟೀಕರಣವನ್ನು ನೀಡಲಾಗುತ್ತಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕೇಸ್‌
ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ