ಕನ್ನಡಪ್ರಭ ವಾರ್ತೆ ಮಣಿಪಾಲನೇಚರ್ ರಿಸರ್ಚ್ ಗ್ರೂಪ್‌ನ ಮುಂಚೂಣಿಯ ಪತ್ರಿಕೆ ನೇಚರ್ ಕಮ್ಯುನಿಕೇಷನ್ಸ್ ಆ್ಯಂಡ್ ನೇಚರ್ ನ್ಯಾನೊಟೆಕ್ನಾಲಜಿ ಸಹಯೋಗದಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ಯಲ್ಲಿ ನಡೆದ ‘ನ್ಯಾನೊಮೆಟೀರಿಯಲ್ಸ್ ಇನ್ ಬಯೋಮೆಡಿಕಲ್ ಸೈನ್ಸಸ್’ ಕುರಿತಾದ ಮೊದಲ ನೇಚರ್ ಸಮ್ಮೇಳನ ಯಶಸ್ವಿಯಾಗಿ ಸಮಾರೋಪಗೊಂಡಿತು.ವಿಶ್ವದ ನ್ಯಾನೊಮೆಟೀರಿಯಲ್ ಕ್ಷೇತ್ರದ ಖ್ಯಾತನಾಮರು ಭಾಗವಹಿಸಿದ್ದ ಈ ಸಮ್ಮೇಳನವು ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮ ನಾಯಕರಿಗೆ ವೇದಿಕೆಯಾಗಿ ಕೆಲಸ ಮಾಡಿದ್ದು, ಅವರಿಗೆ ತಮ್ಮ ಮಹತ್ತರ ಸಂಶೋಧನೆ ಪ್ರದರ್ಶಿಸಲು, ಸಹಯೋಗ ಹೊಂದಲು ಮತ್ತು ಥೆರನೊಸ್ಟಿಕ್ಸ್, ಬಯೋ-ಇಮೇಜಿಂಗ್, ಡ್ರಗ್ ಡೆಲಿವರಿ, ಲಸಿಕೆಗಳು ಮತ್ತು ಇಮ್ಯುನೊಥೆರಪಿಯಲ್ಲಿನ ಕೆಲ ಪ್ರಮುಖ ಸವಾಲುಗಳಿಗೆ ಆವಿಷ್ಕಾರಕ ಪರಿಹಾರಗಳನ್ನುಕಂಡುಕೊಳ್ಳಲು ಅವಕಾಶ ಒದಗಿಸಿತು.ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್, ಈ ಸಮ್ಮೇಳನವು ಐಡಿಯಾಗಳ ಕಣಜವಾಗಿದ್ದು, ಇಲ್ಲಿ ಪ್ರದರ್ಶಿಸಲಾದ ವೈಜ್ಞಾನಿಕ ಸಂಶೋಧನೆಗಳು ಭವಿಷ್ಯದಲ್ಲಿ ಮಹತ್ತರ ಸಾಧನೆಗಳಿಗೆ ಸುಧಾರಣೆಗಳಿಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ. ಇದು ಮಾಹೆಗೆ ಮಾನವಕುಲದ ಅನುಕೂಲಕ್ಕೆ ಹೊಸ ಜಾಲಗಳು ಮತ್ತು ಮಿತೃತ್ವಗಳನ್ನು ರೂಪಿಸಲು ನಮಗೆ ವೇದಿಕೆ ಒದಗಿಸಿದೆ ಎಂದರು.