ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: 50 ರೊಬೊಟಿಕ್‌ ಶಸ್ತ್ರಚಿಕಿತ್ಸೆ ಸಾಧನೆ

KannadaprabhaNewsNetwork |  
Published : Dec 26, 2025, 02:45 AM IST
50ನೇ ರೊಬೊಟಿಕ್ ಆಧಾರಿತ ಶಸ್ತ್ರಚಿಕಿತ್ಸೆಯ ಯಶಸ್ಸನ್ನು ಆಚರಿಸಿದ ಆಸ್ಚತ್ರೆಯ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿಗಳು | Kannada Prabha

ಸಾರಾಂಶ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ರೊಬೊಟಿಕ್ ನೆರವಿನ 50 ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಇದು ತನ್ನ ಸುಧಾರಿತ ಮತ್ತು ರೋಗಿಕೇಂದ್ರಿತ ಶಸ್ತ್ರಚಿಕಿತ್ಸಾ ಆರೈಕೆಗೆ ಬದ್ಧತೆಗೆ ಸಾಕ್ಷಿಯಾಗಿದೆ

ಮಣಿಪಾಲ: ಇಲ್ಲಿನ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ರೊಬೊಟಿಕ್ ನೆರವಿನ 50 ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಇದು ತನ್ನ ಸುಧಾರಿತ ಮತ್ತು ರೋಗಿಕೇಂದ್ರಿತ ಶಸ್ತ್ರಚಿಕಿತ್ಸಾ ಆರೈಕೆಗೆ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೊಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಯನ್ನು ಜೂನ್‌ನಿಂದ ಆರಂಭಿಸಲಾಯಿತು ಮತ್ತು 6 ತಿಂಗಳಿಗೂ ಕಡಿಮೆ ಅವಧಿಯಲ್ಲಿ, ಆಸ್ಪತ್ರೆಯು ಸ್ಥಿರವಾಗಿ ಸಕಾರಾತ್ಮಕ ಕ್ಲಿನಿಕಲ್ ಫಲಿತಾಂಶಗಳನ್ನು ಸಾಧಿಸಿದೆ. ಈ ಹೆಚ್ಚು ನಿಖರ ಶಸ್ತ್ರಚಿಕಿತ್ಸೆಗಳನ್ನು ಮುಖ್ಯವಾಗಿ ಆಂಕೊಲಾಜಿ ಮತ್ತು ಮೂತ್ರಶಾಸ್ತ್ರ ಕಾಯಿಲೆಗಳ ಚಿಕಿತ್ಸೆಗೆ ನಡೆಸಲಾಗಿದೆ.

ರೊಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಯಲ್ಲಿ ಹಲವಾರು ವೈದ್ಯಕೀಯ ಪ್ರಯೋಜನಗಳಿವೆ. ಚಿಕ್ಕ ಹೆಚ್ಚು ನಿಖರ ಛೇದನಗಳು, ಕಡಿಮೆ ನೋವು, ಕನಿಷ್ಠ ರಕ್ತ ನಷ್ಟ, ಕಡಿಮೆ ಸೋಂಕಿನ ಅಪಾಯ ಮತ್ತು ವೇಗದ ಚೇತರಿಕೆಗಳು ಈ ಚಿಕಿತ್ಸೆಯ ಲಾಭಗಳಾಗಿವೆ. ಜೊತೆಗೆ ರೋಗಿಗಳು ಕಡಿಮೆ ಆಸ್ಪತ್ರೆ ವಾಸದಿಂದಾಗಿ ತುಲನಾತ್ಮಕವಾಗಿ ಕೈಗೆಟುಕುವ ವೆಚ್ಚದಲ್ಲಿ ಈ ಚಿಕಿತ್ಸೆ ಸಾಧ್ಯವಾಗುತ್ತದೆ.

ಈ ಚಿಕಿತ್ಸೆಗೆ ರೋಗಿಗಳ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ, ಅನೇಕರು ವೇಗದ ಚೇತರಿಕೆ, ಕಡಿಮೆ ಅಸ್ವಸ್ಥತೆ ಮತ್ತು ಒಟ್ಟಾರೆ ಧನಾತ್ಮಕ ಶಸ್ತ್ರಚಿಕಿತ್ಸಾ ಅನುಭವವನ್ನು ವರದಿ ಮಾಡಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’