ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಡಾ.ರಾಮದಾಸ್ ಎಂ. ಪೈ ವಿಭಾಗ ಉದ್ಘಾಟನೆ

KannadaprabhaNewsNetwork |  
Published : May 01, 2024, 01:20 AM IST
ಪೈ30 | Kannada Prabha

ಸಾರಾಂಶ

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೊಸದಾಗಿ ನಿರ್ಮಿಸಲಾದ ಡಾ. ರಾಮದಾಸ್ ಎಂ. ಪೈ ಬ್ಲಾಕ್ ಮೂಲಕ ಅತ್ಯಾಧುನಿಕ ಸೌಲಭ್ಯ, ಸೇವೆ, ತ್ವರಿತ ಆರೈಕೆ ಒದಗಿಸುವ ಗುರಿಯನ್ನು ಹೊಂದಿದೆ. ರೋಗಿಗಳಿಗೆ ದೀರ್ಘಾವಧಿಯ ಕಾಯುವಿಕೆಯನ್ನು ತಪ್ಪಿಸಲು ಆನ್‌ಲೈನ್ ಅಪಾಯಿಂಟ್‌ಮೆಂಟ್‌ಗಳು ಮತ್ತು ಸಮಾಲೋಚನಾ ಸಮಯವನ್ನು ಕಾಯ್ದಿರಿಸುವ ಮೂಲಕ ಅವರ ಆಯ್ಕೆಯ ಪರಿಣಿತ ಸಲಹೆಗಾರರನ್ನು ತಮ್ಮ ಅನುಕೂಲ ಸಮಯದಲ್ಲಿ ಭೇಟಿ ಮಾಡುವ ಹೊರರೋಗಿ ಸಮಾಲೋಚನೆಯ ಪ್ರೀಮಿಯಂ ಸೌಲಭ್ಯ ಒಳಗೊಂಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಣಿಪಾಲದ ಶಿಕ್ಷಣ, ಆರೋಗ್ಯ ಸಂಸ್ಥೆಗಳ ರೂವಾರಿ ಡಾ.ಟಿ.ಎಂ.ಎ. ಪೈ ಅವರ ೧೨೬ನೇ ಜನ್ಮ ದಿನಾಚರಣೆ ಅಂಗವಾಗಿ, ನೂತನವಾಗಿ ನಿರ್ಮಿಸಲಾಗಿರುವ ಕಸ್ತೂರ್ಬಾ ಆಸ್ಪತ್ರೆಯ ಡಾ. ರಾಮದಾಸ್ ಎಂ. ಪೈ ಬ್ಲಾಕನ್ನು ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ ಉದ್ಘಾಟಿಸಿದರು.

ಈ ಸಂದರ್ಭ ಎಂ.ಇ.ಎಂ.ಜಿ. ಮುಖ್ಯಸ್ಥ, ಮಾಹೆ ಟ್ರಸ್ಟ್‌ ಅಧ್ಯಕ್ಷ ಡಾ. ರಂಜನ್ ಆರ್. ಪೈ, ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಮಣಿಪಾಲ್ ಹೆಲ್ತ್ ಎಂಟರ್ ಪ್ರೈಸಸ್ ಪ್ರೈ.ಲಿ. ಮುಖ್ಯಸ್ಥ ಡಾ. ಎಚ್.ಸುದರ್ಶನ್ ಬಲ್ಲಾಳ್, ಮಾಹೆ ಕುಲಪತಿ ಲೆ.ಜ. (ಡಾ.) ಎಂ.ಡಿ.ವೆಂಕಟೇಶ್, ಸಹಕುಲಪತಿ ಡಾ. ಶರತ್ ಕುಮಾರ್ ರಾವ್, ಕುಲಸಚಿವ ಡಾ. ಗಿರಿಧರ್ ಕಿಣಿ, ಇತರ ಗಣ್ಯರಾದ ಟಿ. ಅಶೋಕ್ ಪೈ, ಯು. ಸತೀಶ್ ಪೈ, ಡಾ. ಕೆ.ವಿ. ಕಾಮತ್, ನಾಡೋಜ ಜಿ.ಶಂಕರ್, ಡಾ. ನಾರಾಯಣ ಸಭಾಹಿತ್, ಸಿ.ಜಿ. ಮುತ್ತಣ್ಣ, ಡಾ. ರವಿರಾಜ್, ಡಾ. ಪದ್ಮರಾಜ್ ಹೆಗ್ಡೆ, ಡಾ. ಆನಂದ್ ವೇಣುಗೋಪಾಲ್, ಡಾ. ಅವಿನಾಶ್ ಶೆಟ್ಟಿ ಮತ್ತು ಡಾ. ಶಿರನ್ ಶೆಟ್ಟಿ ಮತ್ತು ಮಾಹೆಯ ಇತರ ಉನ್ನತ ಅಧಿಕಾರಿಗಳು ಇದ್ದರು.

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೊಸದಾಗಿ ನಿರ್ಮಿಸಲಾದ ಡಾ. ರಾಮದಾಸ್ ಎಂ. ಪೈ ಬ್ಲಾಕ್ ಮೂಲಕ ಅತ್ಯಾಧುನಿಕ ಸೌಲಭ್ಯ, ಸೇವೆ, ತ್ವರಿತ ಆರೈಕೆ ಒದಗಿಸುವ ಗುರಿಯನ್ನು ಹೊಂದಿದೆ. ರೋಗಿಗಳಿಗೆ ದೀರ್ಘಾವಧಿಯ ಕಾಯುವಿಕೆಯನ್ನು ತಪ್ಪಿಸಲು ಆನ್‌ಲೈನ್ ಅಪಾಯಿಂಟ್‌ಮೆಂಟ್‌ಗಳು ಮತ್ತು ಸಮಾಲೋಚನಾ ಸಮಯವನ್ನು ಕಾಯ್ದಿರಿಸುವ ಮೂಲಕ ಅವರ ಆಯ್ಕೆಯ ಪರಿಣಿತ ಸಲಹೆಗಾರರನ್ನು ತಮ್ಮ ಅನುಕೂಲ ಸಮಯದಲ್ಲಿ ಭೇಟಿ ಮಾಡುವ ಹೊರರೋಗಿ ಸಮಾಲೋಚನೆಯ ಪ್ರೀಮಿಯಂ ಸೌಲಭ್ಯ ಒಳಗೊಂಡಿದೆ.

ಇಲ್ಲಿ ೧೦ ಹೊರರೋಗಿ ಸಮಾಲೋಚನೆ ಕೊಠಡಿಗಳು, ೩೪ ಡಬಲ್ ಆಕ್ಯುಪೆನ್ಸಿ ಕೊಠಡಿಗಳು, ೭೫ ಖಾಸಗಿ ಕೊಠಡಿಗಳು, ೪ ಸುಧಾರಿತ ಆಪರೇಷನ್ ಥಿಯೇಟರ್‌ಗಳು, ೪ ಪ್ರೀಮಿಯರ್ ಸೂಟ್ ರೂಮ್‌ಗಳೊಂದಿಗೆ ೪ ಶಸ್ತ್ರಚಿಕಿತ್ಸಾ ಪೂರ್ವ ಹಾಸಿಗೆಗಳು, ೪ ಶಸ್ತ್ರ ಚಿಕಿತ್ಸಾ ನಂತರದ ಕೊಠಡಿಗಳು, ೧೪ ತೀವ್ರ ನಿಗಾ ಘಟಕ ಹಾಸಿಗೆಗಳು, ೧೦ ಎಚ್.ಡಿ.ಯು. ಹಾಸಿಗೆಗಳು ಮತ್ತು ೧೬ ಹಾಸಿಗೆಗಳ ದಿನದ ಆರೈಕೆ ಘಟಕ ಸೇರಿ ಒಟ್ಟು ೧೬೧ ಒಳರೋಗಿ ಹಾಸಿಗೆಗಳು ಒಳಗೊಂಡಿದೆ.

ಇಲ್ಲಿ ರಕ್ತದ ಮಾದರಿ ಸಂಗ್ರಹಣೆ, ರೋಗನಿರ್ಣಯ ಮತ್ತು ಡೇ ಕೇರ್ ಸೌಲಭ್ಯವಿದೆ. ಜೊತೆಗೆ ಇಂಟರ್‌ವೆನ್ಷನಲ್ ರೇಡಿಯಾಲಜಿ, ಉನ್ನತಮಟ್ಟದ ಬೈ ಪ್ಲೇನ್ ಕ್ಯಾಥ್ ಲ್ಯಾಬ್ ಸೌಲಭ್ಯವಿದೆ.

ವಿದೇಶಿ ರೋಗಿಗಳಿಗೆ ಒಂದೇ ಕಡೆ ವೈದ್ಯಕೀಯ ಮತ್ತು ಆಡಳಿತಾತ್ಮಕ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡುವ, ವಿಶೇಷವಾದ ಅಂತಾರಾಷ್ಟ್ರೀಯ ರೋಗಿಗಳ ಲೌಂಜ್‌ನೊಂದಿಗೆ ಅಂತಾರಾಷ್ಟ್ರೀಯ ರೋಗಿಗಳನ್ನು ಚಿಕಿತ್ಸಾ ಕ್ರಮಗಳನ್ನು ಪೂರೈಸುವ ಸೌಲಭ್ಯಗಳನ್ನು ಈ ಹೊಸ ಬ್ಲಾಕ್ ಹೊಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

80 ಶಾಸಕರ ಬೆಂಬಲ ಇದೆ ಎಂಬುದು ಪ್ರಶ್ನೆಯಲ್ಲ: ಸತೀಶ್‌
ನಮ್ಮ ಪ್ರಚೋದಿಸಬೇಡಿ- ಡಿಕೆ ಸಿಎಂ ಮಾಡಿ ಅಂತ 90 ಶಾಸಕರು ಕೇಳಿದ್ದೇವೆ : ಯತೀಂದ್ರಗೆ ಇಕ್ಬಾಲ್‌