ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಪ್ರಥಮ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ ಯಶಸ್ವಿ

KannadaprabhaNewsNetwork |  
Published : Jun 21, 2026, 02:45 AM IST
19ಕಸ್ತೂರ್ಬಾ | Kannada Prabha

ಸಾರಾಂಶ

ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ರಪ್ರಥಮ ತೃತೀಯ ಲಿಂಗಿ ವ್ಯಕ್ತಿಯೊಬ್ಬರಿಗೆ ಲಿಂಗ ದೃಢೀಕರಣ (ಜೆಂಡರ್ ಅಫರ್ಮಿಂಗ್) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ರಪ್ರಥಮ ತೃತೀಯ ಲಿಂಗಿ ವ್ಯಕ್ತಿಯೊಬ್ಬರಿಗೆ ಲಿಂಗ ದೃಢೀಕರಣ (ಜೆಂಡರ್ ಅಫರ್ಮಿಂಗ್) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಆಸ್ಪತ್ರೆಯಲ್ಲಿ ಈಗಾಗಲೇ ಪ್ಲಾಸ್ಟಿಕ್ ಸರ್ಜರಿ ವಿಭಾಗವು ಮುಖದ ಸ್ತ್ರೀಕರಣ ಮತ್ತು ಸ್ತನಗಳ ವರ್ಧನೆ ಸೇರಿದಂತೆ ಲಿಂಗ ದೃಢೀಕರಣ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಇದು ಹಲವಾರು ವರ್ಷಗಳಿಂದ ತೃತೀಯ ಲಿಂಗಿ ರೋಗಿಗಳಿಗೆ ಸಹಾಯಕವಾಗಿದೆ.ಆದರೆ ಈ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಮತ್ತು ಮೂತ್ರಶಾಸ್ತ್ರ ವಿಭಾಗದ ತಂಡವು, ಸಂಪೂರ್ಣ ಲಿಂಗ ದೃಢೀಕರಣ ಜನನಾಂಗ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿರುವುದು ಇದೇ ಮೊದಲು.

ಪ್ಲಾಸ್ಟಿಕ್ ಸರ್ಜರಿಯ ಮುಖ್ಯಸ್ಥ ಡಾ. ಜೋಸೆಫ್ ಥಾಮಸ್, ಸಹಪ್ರಾಧ್ಯಾಪಕ ಡಾ. ಹರ್ಷವರ್ಧನ್ ಶೆಟ್ಟಿ ಹಾಗೂ ಮೂತ್ರಶಾಸ್ತ್ರ ವಿಭಾಗದ ಡಾ. ಅನುಪಮ್ ಚೌಧರಿ ಅವರಿದ್ದ ತಂಡವು ಶಸ್ತ್ರಚಿಕಿತ್ಸೆಯ ಯಶಸ್ವಿಗೊಳಿಸಿದೆ.

ಹುಟ್ಟಿನಿಂದಲೇ ತೃತೀಯ ಲಿಂಗಿಗಳಾಗಿರುವವರಿಗೆ ತಾವು ನಿಜವಾಗಿಯೂ ಯಾರೆಂದು ಅರ್ಥವಾಗದೆ ಬೆಳೆಯುತ್ತಾರೆ. ಅನೇಕರಿಗೆ ತಮ್ಮ ತೂಕ, ನೋಟಗಳು ಇತರರಿಗಿಂತ ಭಿನ್ನವಾಗಿದೆ. ತಾವು ಹುಟ್ಟಿನಿಂದಲೇ ಹೊಂದಿರುವ ಲಿಂಗವು ತಮ್ಮ ದೇಹಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಭಾವಿಸುತ್ತಿರುತ್ತಾರೆ. ತಜ್ಞರು ಇದನ್ನು ಜೆಂಡರ್ ಡಿಸ್ಫೋರಿಯಾ ಎಂದು ಕರೆಯುತ್ತಾರೆ.ಜೆಂಡರ್ ಡಿಸ್ಫೋರಿಯಾ ಸಮಸ್ಯೆಯು ಅವರ ಮಾನಸಿಕ ಆರೋಗ್ಯ, ಸಂಬಂಧಗಳು, ಶಿಕ್ಷಣ ಮತ್ತು ಕೆಲಸದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಯು ಈ ತೊಂದರೆಯನ್ನು ಕಡಿಮೆ ಮಾಡುತ್ತದೆ ಮತ್ತು ಅವರಿಗೆ ತಮ್ಮ ಸ್ವಂತ ದೇಹದಲ್ಲಿ ತಮ್ಮಿಷ್ಟದ ಲಿಂಗತ್ವದೊಂದಿಗೆ ಹೆಚ್ಚು ಆರಾಮವಾಗಿ ಬದುಕಲು ಸಹಾಯ ಮಾಡುತ್ತದೆ.ಭಾರತದಲ್ಲಿ ತೃತೀಯ ಲಿಂಗಿಗಳು ತಮಗೆ ಗೌರವದಿಂದ ಮತ್ತು ಸ್ಥಳೀಯವಾಗಿ ಚಿಕಿತ್ಸೆ ಆರೈಕೆಯನ್ನು ನೀಡುವ ಆಸ್ಪತ್ರೆಗಳನ್ನು ಹುಡುಕಲು ಕಷ್ಟಪಡುತ್ತಾರೆ. ಅನೇಕರು ದೂರದ ಪ್ರಯಾಣ ಮಾಡುತ್ತಾರೆ ಅಥವಾ ಆರೈಕೆಯಿಲ್ಲದೆ ಹಾಗೆ ಸಮಸ್ಯೆ, ಯಾತನೆಯೊಂದಿಗೆ ಬದುಕುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಸ್ತೂರ್ಬಾ ಆಸ್ಪತ್ರೆಯು ಈ ಹೊಸ ಹೆಜ್ಜೆಯನ್ನಿಟ್ಟಿದೆ. ಜೂ. 10ರಂದು ಶಸ್ತ್ರಚಿಕಿತ್ಸೆಗೊಳಗಾದ ವ್ಯಕ್ತಿಯು ಆಸ್ಪತ್ರೆಯ ಉತ್ತಮ ಆರೈಕೆಯಿಂದ ಶೀಘ್ರ ಚೇತರಿಸಿಕೊಂಡಿದ್ದಾರೆ. ರೋಗಿಯ ಆರೈಕೆ ಶಸ್ತ್ರಚಿಕಿತ್ಸೆಯೊಂದಿಗೆ ಕೊನೆಗೊಳ್ಳುವುದಿಲ್ಲ, ಅಗತ್ಯ ಫಾಲೋಅಪ್ ಭೇಟಿಗಳು, ಫಿಸಿಯೋಥೆರಪಿ (ಅಗತ್ಯವಿದ್ದರೆ) ಮತ್ತು ನಿಯಮಿತ ಸಮಾಲೋಚನೆಗಳು ಮುಂದುವರಿಯುತ್ತವೆ ಎಂದು ಆಸ್ಪತ್ರೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿಗೆ ಪಿಎಂವಿಬಿಆರ್‌ವೈನಲ್ಲಿ 3.66 ಕೋಟಿ ರು.: ಕೋಟ
ಪರಿಸರ ಜಾಗೃತಿಯಲ್ಲಿ ಮಾಧ್ಯಮ ಪಾತ್ರ ಮುಖ್ಯ: ಶಿವರಾಮ್ ಬಾಬು