ಮಣಿಪಾಲ್ ಮ್ಯಾರಥಾನ್: ಎಂ. ನಂಜುಂಡಪ್ಪ- ಚೈತ್ರಾ ದೇವಾಡಿಗ ಚಾಂಪಿಯನ್ಸ್

KannadaprabhaNewsNetwork |  
Published : Feb 12, 2024, 01:32 AM IST
ಮ್ಯಾರಥಾನ್ ಚಾಂಪಿಯನ್ಸ್ | Kannada Prabha

ಸಾರಾಂಶ

: 6ನೇ ವರ್ಷದ ಮಣಿಪಾಲ ಮ್ಯಾರಥಾನ್ ನಲ್ಲಿ ದೇಶವಿದೇಶಗಳಿಂದ ಸುಮಾರು 15000ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಆಫ್ರಿಕನ್ ದೇಶಗಳ ಓಟಗಾರರ ಅನುಪಸ್ಥಿತಿಯಲ್ಲಿ, ಮಣಿಪಾಲ ಮ್ಯಾರಥಾನ್ -2024ರಲ್ಲಿ ಬಹುತೇಕ ಎಲ್ಲ ಬಹುಮಾನಗಳನ್ನು ಭಾರತೀಯ ಓಟಗಾರರೇ ಗೆದ್ದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ 42 ಕಿ.ಮೀ. ಫುಲ್ ಮ್ಯಾರಥಾನ್ ಓಟವನ್ನು ಎಂ. ನಂಜುಡಪ್ಪ 02:47:18 ಗಂಟೆಗಳಲ್ಲಿ ಕ್ರಮಿಸಿ ಚಾಂಪಿಯನ್ ಆದರೆ ಮಹಿಳಾ ವಿಭಾಗದಲ್ಲಿ ಚೈತ್ರಾ ದೇವಾಡಿಗ 03:26:29 ಗಂಟೆಗಳಲ್ಲಿ ಕ್ರಮಿಸಿ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡರು. ಫಲಿತಾಂಶ ಹೀಗಿದೆ: ಪುರುಷರ ವಿಭಾಗ 42 ಕಿಮಿ - 1. ಎಂ ನಂಜುಂಡಪ್ಪ (02:47:18), 2. ಸಚಿನ್ ಪೂಜಾರಿ (02:47:18), 3. ಚೇತ್ರಾಮ್ ಕುಮಾರ್ (02:52:24). 21 ಕಿಮಿ - 1. ವೈಭವ್ ಪಾಟೀಲ್ (01:13:44), 2. ರಘುವರನ್ (01:13:57), 3. ಮೋನು ಸಿಂಗ್ (01:15:19) ಹಾಗೂ 10 ಕಿಮಿ - 1. ಮಣಿಕಂಠ (34:33), 2. ಶ್ರೀ (34:50), 3. ಘೂರಾ ಚೌಹಾಣ್ (37:20). 5 ಕಿಮಿ - 1. ನಾಗರಾಜ್ ದಿವಟೆ (17:40), 2. ರಾಹುಲ್ (18:49), 3. ವಿಲಾಸ್ ಪುರಾಣಿಕ್ (18:51). ಮಹಿಳಾ ವಿಭಾಗ: 42 ಕಿ.ಮೀ. - 1. ಚೈತ್ರಾ ದೇವಾಡಿಗ (03:26:29), 2. ಜಸ್ಮಿತಾ ಕೊಡೆಂಕಿರಿ (04:46:10) 21 ಕಿಮಿ - 1. ಅರ್ಚನಾ ಕೆ.ಎಂ. (01:32:46), 2. ನಂದಿನಿ (01:37:28), 3. ಸ್ಪಂದನ (01:44:24), 10 ಕಿಮಿ - 1. ರೂಪಶ್ರೀ ಎನ್.ಎಸ್. (44:20), 2. ರೇಖಾ ಬಸಪ್ಪ ಪಿರೋಜಿ (45:21), 3. ಅನ್ನಾ ಕ್ಯಾಂಪ್ಸ್ (49:28), 5 ಕಿಮಿ - 1. ಉಷಾ (17:40), 2. ಪ್ರಣಮ್ಯಾ (23:28), 3. ಮಾನ್ಯ ಕೆ.ಎಂ (23:28). 15000 ಓಟಗಾರರು ಭಾಗಿ: 6ನೇ ವರ್ಷದ ಮಣಿಪಾಲ ಮ್ಯಾರಥಾನ್ ನಲ್ಲಿ ದೇಶವಿದೇಶಗಳಿಂದ ಸುಮಾರು 15000ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು. ಮ್ಯಾರಥಾನ್‌ನ ವಿವಿಧ ಓಟಗಳಿಗೆ ಐಸಿಐಸಿಐ ಬ್ಯಾಂಕ್‌ನ ಕರ್ನಾಟಕ ರಾಜ್ಯ ಮುಖ್ಯಸ್ಥ ಅತುಲ್ ಜೈನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ವೃತ್ತದ ಪ್ರಧಾನ ವ್ಯವಸ್ಥಾಪಕ ಕ್ರಿಶನ್ ಶರ್ಮ, ಕರ್ನಾಟಕ ಬ್ಯಾಂಕಿನ ಉಪಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ ಸಾಮಗ, ಬ್ಯಾಂಕ್ ಆಫ್ ಬರೋಡದ ಉಪವ್ಯವಸ್ಥಾಪಕ ರವೀಂದ್ರ ರೈ, ಫೆಡರಲ್ ಬ್ಯಾಂಕ್ ಉಪಾಧ್ಯಕ್ಷ ರಾಜೀವ್ ವಿ.ಸಿ. ಚಾಲನೆ ನೀಡಿದರು.

ಪಶ್ಚಿಮ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ. ಬೋರಲಿಂಗಯ್ಯ, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಉಪಕುಲಪತಿ ಲೆ.ಜ. ಡಾ.ಎಂ.ಡಿ. ವೆಂಕಟೇಶ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ. ಕೆಂಪರಾಜು ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ