ಕನ್ನಡಪ್ರಭ ವಾರ್ತೆ ಮಣಿಪಾಲಇಲ್ಲಿನ ಎಂಐಟಿಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗವು, ಜರ್ಮಿನಿಯ ಡಾಯ್ಚೆ ಬ್ಯಾಂಕ್ ಮತ್ತು ಬೆಂಗಳೂರಿನ ಸಿವೈಎಎಎ ಟೆಕ್ನಾಲಜೀಸ್‌ನ ಸಹಯೋಗದೊಂದಿಗೆ 18ನೇ ಆವೃತ್ತಿ ಪಿಂಗ್ 2.0.2.4 ಕಾರ್ಯಾಗಾರವನ್ನು ಆಯೋಜಿಸಿತ್ತು.ಈ ವರ್ಷದ ಕಾರ್ಯಾಗಾರ, ಮುಂದಿನ ಪೀಳಿಗೆಯ ಬ್ಯಾಂಕಿಂಗ್: ಹಣಕಾಸು ಸೇವೆಗಳಿಗಾಗಿ ಕೃತಕ ಬುದ್ಧಿಮತ್ತೆಯ ಬಳಕೆ ಎನ್ನುವ ವಿಷಯದಲ್ಲಿ ನಡೆಯಿತು. ಎಂಐಟಿ ಮಣಿಪಾಲದಲ್ಲಿ ಸಂಸ್ಥಾಪಕ ಡಾ.ಟಿ.ಎಂ.ಎ. ಪೈ ಅವರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಕಾರ್ಯಾಗಾರವನ್ನು ಉದ್ಘಾಟಿಸಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯಿಂದಾಗುವ ಪರಿಣಾಮ ಮತ್ತು ಸಾಮರ್ಥ್ಯವನ್ನು ಒತ್ತಿ ಹೇಳಿದರು. ಸಮಾಜದ ಹೆಚ್ಚಿನ ಒಳಿತಿಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದರು. ಕೃತಕ ಬುದ್ಧಿಮತ್ತೆಯನ್ನು ನಾವೀನ್ಯತೆ ಮತ್ತು ಸಂಶೋಧನೆಯನ್ನು ಪೋಷಿಸುವಲ್ಲಿ ಎಂಐಟಿಯ ಮಣಿಪಾಲದ ಪಾತ್ರಕ್ಕಾಗಿ ಅವರು ಶ್ಲಾಘಿಸಿದರು.ಡಾಯ್ಷೆ ಬ್ಯಾಂಕಿನ ಕ್ಲೌಡ್‌ನ ಉಪಾಧ್ಯಕ್ಷ ರಜನೀಶ್ ರೈ ಮಾತನಾಡಿ, ಕೃತಕ ಬುದ್ಧಿಮತ್ತೆಯು ಗ್ರಾಹಕರ ಅನುಭವಗಳನ್ನು ಹೆಚ್ಚಿಸುವಲ್ಲಿ, ಕಾರ್ಯಾಚರಣೆಗಳನ್ನು ಉತ್ತಮಗೊಳಿಸುವಲ್ಲಿ ಮತ್ತು ಹಣಕಾಸಿನ ವಲಯದಲ್ಲಿ ಅಪಾಯ ನಿರ್ವಹಣೆಯಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಲಿದೆ ಎಂದರು.ಅಮೆರಿಕದ ಅಮೆಜಾನ್‌ನ ಹಿರಿಯ ಕಾರ್ಯಕ್ರಮ ನಿರ್ವಾಹಕಿ ರಿಯಾ ಮಹತೋ ಸೇರಿದಂತೆ ಗೌರವಾನ್ವಿತ ಗಣ್ಯರ ಉಪಸ್ಥಿತಿಯಲ್ಲಿ ಎರಡು ದಿನಗಳ ಕಾರ್ಯಕ್ರಮವು ಎಂಐಟಿಯ ನಿರ್ದೇಶಕ ಡಾ. ಅನಿಲ್ ರಾಣಾ ಅವರ ನೇತೃತ್ವದಲ್ಲಿ ನಡೆಯಿತು.ಐ ಆ್ಯಂಡ್ ಸಿಟಿ ವಿಭಾಗದ ಮುಖ್ಯಸ್ಥೆ ಡಾ. ಸ್ಮಿತಾ ಎನ್. ಪೈ ಅವರು ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಪ್ರಾಧ್ಯಾಪಕ ಡಾ.ಮನೋಹರ ಪೈ ಅವರು ಪಿಂಗ್ 2.0.2.4 ನ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಧ್ಯಾಪಕ ಡಾ. ಪ್ರೀತಂ ಕುಮಾರ್ ವಂದಿಸಿದರು.