ಮಣಿಪಾಲ: ‘ವಿಷುಕಣಿ-ಕವಿದನಿ’ ಬಹು ಭಾಷಾ ಕವಿಗೋಷ್ಠಿ ಸಂಪನ್ನ

KannadaprabhaNewsNetwork |  
Published : Apr 12, 2025, 12:48 AM IST
11ಕವಿದನಿ | Kannada Prabha

ಸಾರಾಂಶ

‘ವಿಷುಕಣಿ-ಕವಿದನಿ’ ಬಹು ಭಾಷಾ ಕವಿಗೋಷ್ಠಿ ಗುರುವಾರ ರೇಡಿಯೊ ಮಣಿಪಾಲ್, ಎಂ.ಐ.ಸಿ ಕ್ಯಾಂಪಸ್ ಮಣಿಪಾಲದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ರೇಡಿಯೊ ಮಣಿಪಾಲ್ - ಸಮುದಾಯ ಬಾನುಲಿ ಕೇಂದ್ರ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗ ದೊಂದಿಗೆ ‘ವಿಷುಕಣಿ-ಕವಿದನಿ’ ಬಹು ಭಾಷಾ ಕವಿಗೋಷ್ಠಿ ಗುರುವಾರ ರೇಡಿಯೊ ಮಣಿಪಾಲ್, ಎಂ.ಐ.ಸಿ ಕ್ಯಾಂಪಸ್ ಮಣಿಪಾಲದಲ್ಲಿ ನಡೆಯಿತು.

ಕಾಯಕ್ರಮ ಉದ್ಘಾಟಿಸಿದ ಮಾಹೆಯ ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್ ನಿರ್ದೇಶಕಿ ಡಾ. ಶುಭ ಎಚ್. ಎಸ್‌. ಮಾತನಾಡಿ, ಕವನಗಳಿಗೆ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶವಿದೆ, ಹೀಗಾಗಿ ಕವಿತೆಗಳಿಗೆ ವಿಮರ್ಶೆಯ ಅವಶ್ಯಕತೆ ಎದುರಾಗುವುದಿಲ್ಲ. ಯುಗಾದಿ ಹಬ್ಬದ ಕುರಿತು ನಮ್ಮಲ್ಲಿರುವ ಸಂಸ್ಕೃತಿ ಆಚಾರಗಳನ್ನು ಕವನಗಳ ಮೂಲಕ ಪ್ರಚುರಪಡಿಸುವ ಈ ಅಪೂರ್ವ ಅವಕಾಶ ಸಿಕ್ಕಿರುವುದು ಎಲ್ಲರಿಗೂ ಅಭಿನಂದನೀಯ ಎಂದರು.

ಸಭಾಧ್ಯಕ್ಷತೆಯನ್ನು ಭಾಷಾ ತಜ್ಞ ನಾಡೋಜ ಪ್ರೊ. ಕೆ.ಪಿ. ರಾವ್ ವಹಿಸಿ, ಮಾತನಾಡಿ, ಭಾಷೆಗಳನ್ನು ಬಳಸಿ ಬೆಳೆಸಬೇಕು, ಇಲ್ಲವಾದಲ್ಲಿ ಭಾಷೆಯೊಂದಿಗೆ ಅದರ ಅಪೂರ್ವ ಸಂಸ್ಕೃತಿ ಕೂಡ ನಾಶವಾಗುವ ಸಂಭವವಿರುತ್ತದೆ. ನಮ್ಮ ದೇಶದಲ್ಲಿರುವ ಹಲವಾರು ಭಾಷೆಗಳು ಅವನತಿಯ ಹಾದಿಯಲ್ಲಿರುವುದು ದುಃಖದ ವಿಷಯ ಎಂದರು.

ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕಿ ನಿರ್ದೇಶಕಿ ಪೂರ್ಣಿಮಾ, ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ಮತ್ತು ಉಡುಪಿ ಕಸಾಪ ಉಡುಪಿ ತಾಲೂಕು ಈ ರೀತಿಯ ವಿನೂತನ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಮಾದರಿಯಾಗಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್‌. ಪಿ., ಕಸಾಪ ಜಿಲ್ಲಾ ಮಾಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು. ಕವಿಗೋಷ್ಠಿಯ ಸಮನ್ವಯಕಾರರಾಗಿ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಭಾಗವಹಿಸಿ ಕವನಗಳು ಹುಟ್ಟುವ ಬಗ್ಗೆ ಅದೇ ರೀತಿ ಕವನಗಳನ್ನು ಮತ್ತಷ್ಟು ಆಕಷ೯ಕವಾಗಿ ಬರೆಯುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕವಿಗಳಾದ ಕವಿತಾ ಎಸ್. ಮಣಿಪಾಲ (ಹವ್ಯಕ ಕನ್ನಡ), ವೈಷ್ಣವಿ ಸುಧೀಂದ್ರ ರಾವ್ (ಕುಂದಾಪ್ರ ಕನ್ನಡ), ರಾಮಾಂಜಿ ಉಡುಪಿ (ಕನ್ನಡ), ಮಾಲತಿ ರಮೇಶ್ ಭಂಡಾರಿ ಕೆಮ್ಮಣ್ಣು (ತುಳು), ಕೆ. ವಾಣಿಶ್ರೀ ಅಶೋಕ್ ಐತಾಳ್ (ತೆಲುಗು), ಪ್ರಣತಿ ಪಿ. ಭಟ್ ಮಣಿಪಾಲ (ಹಿಂದಿ), ವಿನೋದ ಪಡುಬಿದ್ರಿ (ತುಳು), ವಿಜಯಲಕ್ಷ್ಮೀ ಆರ್. ಕಾಮತ್ (ಕೊಂಕಣಿ), ಮನೋಹರ ಶೆಟ್ಟಿ ಬಿಟ್ಕಲ್ ಕಟ್ಟೆ (ತುಳು), ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ (ಮಲಯಾಳಂ), ವಸುಧಾ ಅಡಿಗ ನೀಲಾವರ (ಕನ್ನಡ), ಲಲಿತ ಪ್ರದೀಪ್ ಭಟ್ (ಕನ್ನಡ) ಮಂಜುನಾಥ ಮರವ೦ತೆ (ಕುಂದಾಪ್ರ ಕನ್ನಡ), ಸುಲೋಚನ ಪಚ್ಚಿನಡ್ಕ (ತುಳು), ನೀಮಾ ಲೋಬೊ ಶಂಕರಪುರ (ಕೊಂಕಣಿ), ಪುಂಡಲೀಕ ನಾಯಕ್ ಬೈಂದೂರು ಇವರೆಲ್ಲರು ಸ್ವರಚಿತ ಕವನ ವಾಚಿಸಿದರು.

ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ರೇಡಿಯೋ ಮಣಿಪಾಲ್ ಸಂಯೋಜಕ ಡಾ. ಅಮ್ಮೆಂಬಳ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲ್ ವಂದಿಸಿದರು. ಸುಲೋಚನಾ ಪಚ್ಚಿನಡ್ಕಹಾಗು ವಸುಧಾ ಅಡಿಗ ನೀಲಾವರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ