ಮಂಜನಾಡಿ ಗ್ಯಾಸ್ ಸ್ಫೋಟ ಪ್ರಕರಣ: ಮತ್ತೊಬ್ಬ ಬಾಲಕಿಯೂ ಸಾವು

KannadaprabhaNewsNetwork |  
Published : Dec 29, 2024, 01:18 AM IST
11 | Kannada Prabha

ಸಾರಾಂಶ

ಡಿ.13ರಂದು ತಾಯಿ ಖುಬ್ರಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು, ಡಿ.26 ರಂದು ಹಿರಿಯ ಪುತ್ರಿ ಝುಲೇಖಾ ಮೆಹದಿಯಾ ಮೃತಪಟ್ಟಿದ್ದಳು. ಇದೀಗ ಕೊನೆಯ ಪುತ್ರಿ ಫಾತಿಮತ್ ಮಾಯಿಝ (9) ಕೊನೆಯುಸಿರೆಳೆದಿದ್ದಾಳೆ. ಪ್ರಕರಣದಲ್ಲಿ ಮಾಝಿಯಾ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ.

ಕನ್ನಡಪ್ರಭ ವಾರ್ತೆ ಉಳ್ಳಾಲ ಮಂಜನಾಡಿ ಗ್ರಾಮದ ಖಂಡಿಕೆ ಎಂಬಲ್ಲಿ ಡಿ.8ರಂದು ಮನೆಯಲ್ಲಿ ಗ್ಯಾಸ್ ಸ್ಫೋಟಗೊಂಡು ತಾಯಿ, ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಬಾಲಕಿಯೂ ಶನಿವಾರ ಮೃತಪಟ್ಟಿದ್ದಾಳೆ. ಇದರೊಂದಿಗೆ ತಾಯಿ, ಇಬ್ಬರು ಮಕ್ಕಳು ಮೃತಪಟ್ಟು ಸಾವಿನ ಸಂಖ್ಯೆ ಮೂರಕ್ಕೇರಿದೆ. ಓರ್ವ ಪುತ್ರಿ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ.

ಫಾತಿಮತ್ ಮಾಯಿಝ (9) ಮೃತಪಟ್ಟ ಕೊನೆಯ ಮಗಳು. ಘಟನೆ ವಿವರ: ಡಿ.8ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭ ಗ್ಯಾಸ್ ಸ್ಫೋಟಗೊಂಡು ಇಡೀ ಮನೆ ಹೊತ್ತಿಯುರಿದು, ಮನೆಯೊಳಗಿದ್ದ ತಾಯಿ ಖುಬ್ರಾ ಹಾಗೂ ಮೂವರು ಮಕ್ಕಳಾದ ಝುಲೇಖಾ ಮಹದಿಯಾ, ಮಝಿಯಾ, ಫಾತಿಮತ್ ಮಾಯಿಝ ಗಂಭೀರವಾಗಿ ಗಾಯಗೊಂಡಿದ್ದರು. ಎಲ್ಲರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಡಿ.13ರಂದು ತಾಯಿ ಖುಬ್ರಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು, ಡಿ.26 ರಂದು ಹಿರಿಯ ಪುತ್ರಿ ಝುಲೇಖಾ ಮೆಹದಿಯಾ ಮೃತಪಟ್ಟಿದ್ದಳು. ಇದೀಗ ಕೊನೆಯ ಪುತ್ರಿ ಫಾತಿಮತ್ ಮಾಯಿಝ (9) ಕೊನೆಯುಸಿರೆಳೆದಿದ್ದಾಳೆ. ಪ್ರಕರಣದಲ್ಲಿ ಮಾಝಿಯಾ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ. ಮನೆಯಲ್ಲಿದ್ದ ಹೆಚ್ಚುವರಿ ಅಡುಗೆ ಅನಿಲ ಸಿಲಿಂಂಡರ್‌ನಿಂದ ಗ್ಯಾಸ್‌ ಸೋರಿಕೆ ಉಂಟಾದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿರುವುದಾಗಿ ಮೇಲ್ನೋಟದ ತನಿಖೆಯಿಂದ ತಿಳಿದುಬಂದಿದ್ದು, ಅದರಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಗ್ಯಾಸ್ ಏಜೆನ್ಸಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಜನಾಡಿ ಗ್ಯಾಸ್ ಸ್ಫೋಟಗೊಂಡ ಮನೆಗೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಶನಿವಾರ ಭೇಟಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ
ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?