ಮನಮೋಹನ್ ಸಿಂಗ್ ಸಾವು ದೇಶಕ್ಕೆ ತುಂಬಲಾರದ ನಷ್ಟ: ನಗರಸಭಾ ಸದಸ್ಯ ಶ್ರೀಧರ್

KannadaprabhaNewsNetwork |  
Published : Dec 28, 2024, 12:45 AM IST
೨೭ಕೆಎಂಎನ್‌ಡಿ-೨ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾವಪೂರ್ಣ ಶ್ರಧಾಂಜಲಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಡಾ.ಮನಮೋಹನ್‌ಸಿಂಗ್ ಅವರು ಪಿ.ವಿ,ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ದೇಶದ ಹಣಕಾಸು ಸಚಿವರಾಗಿ ಪ್ರಾಮುಖ್ಯತೆ ಗಳಿಸಿದ್ದರು. ದೇಶದ ಆರ್ಥಿಕತೆಯನ್ನು ಪರಿವರ್ತಿಸುವ ವ್ಯಾಪಕ ಸುಧಾರಣೆಗಳನ್ನು ತಂದಿದ್ದರು ಎಂದು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನಗರಸಭಾ ಸದಸ್ಯ ಶ್ರೀಧರ್ ತಿಳಿಸಿದರು.

ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ.ಮನಮೋಹನ್‌ಸಿಂಗ್ ಅವರು ಪಿ.ವಿ,ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ದೇಶದ ಹಣಕಾಸು ಸಚಿವರಾಗಿ ಪ್ರಾಮುಖ್ಯತೆ ಗಳಿಸಿದ್ದರು. ದೇಶದ ಆರ್ಥಿಕತೆಯನ್ನು ಪರಿವರ್ತಿಸುವ ವ್ಯಾಪಕ ಸುಧಾರಣೆಗಳನ್ನು ತಂದಿದ್ದರು ಎಂದು ಸ್ಮರಿಸಿದರು.

ಯುಪಿಎ ಸರ್ಕಾರದ ೨ ಅವಧಿಯ ಪ್ರಧಾನಿಯಾಗಿ ಅವರು ೨೦೦೪ರಿಂದ ೨೦೧೪ರವರೆಗೆ ಸೇವೆ ಸಲ್ಲಿಸಿದರು. ಈ ವರ್ಷದ ೨೦೨೪ ಆರಂಭದವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಏಪ್ರಿಲ್ ತಿಂಗಳಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. ಗಾಂಧಿ ಕುಟುಂಬ ಹೊರತುಪಡಿಸಿ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಅವಧಿಯ ಪ್ರಧಾನಿ ಆಗಿದ್ದ ಹೆಗ್ಗಳಿಕೆ ಇವರದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ದೊರೆ ಪಣಕನಹಳ್ಳಿ, ಕನ್ನಲಿ ಚನ್ನಪ್ಪ, ಪ್ರಕಾಶ್ ಮಲ್ಲೇನಹಳ್ಳಿ. ಶ್ರೀಧರ್, ಅಜಿತ್, ಮಧುಕರ್, ಸಂಪಳ್ಳಿ ದೇವರಾಜು, ಕಿರಣ್‌ಕುಮಾರ್, ಎಚ್.ಡಿ.ಜಯರಾಮು, ಎಚ್.ಎಂ.ಉದಯ್‌ ಕುಮಾರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ