ರಾಜ್ಯ ಮಟ್ಟದ ಜಾನಪದ ಸಂಜೆಗೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಚಾಲನೆ‌

KannadaprabhaNewsNetwork |  
Published : Feb 05, 2025, 12:30 AM IST
4ಕೆಎಂಎನ್ ಡಿ33 | Kannada Prabha

ಸಾರಾಂಶ

ಜಾನಪದ ಕಲೆ ಬಾಯಿ ನಮ್ಮ ಸಂಸ್ಕ್ರತಿಯ ಪ್ರತೀಕವಾಗಿದೆ. ಬಾಯಿಯಿಂದ ಬಾಯಿಂದ ಬೆಳೆದ ಜಾನಪದ ಕಲೆಯನ್ನು ಗ್ರಾಮೀಣ ಭಾಗದಲ್ಲಿ ಉಳಿಸಿ ಬೆಳೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಮುಂದಿನ‌ ದಿನಗಳಲ್ಲಿ ಜಾನಪದ ಕಲಾ ಮೇಳಕ್ಕೆ ಮತ್ತಷ್ಟು ಮೆರಗು ನೀಡಲಿ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮೇಲುಕೋಟೆಯಲ್ಲಿ ಶ್ರೀಚೆಲುವನಾರಾಯಣಸ್ವಾಮಿಯ ರಥಸಪ್ತಮಿ ಅಂಗವಾಗಿ ನಡೆದ 26ನೇ ಅಂತ ರಾಜ್ಯಮಟ್ಟದ ಜಾನಪದ ಸಂಜೆ ಕಾರ್ಯಕ್ರಮಕ್ಕೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಚಾಲನೆ‌ ನೀಡಿದರು.

ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಯತಿರಾಜದಾಸರ್ ಚಾರಿಟಬಲ್ ಟ್ರಸ್ಟ್, ಸ್ಥಾನೀಕಂ ನಾಗರಾಜ ಅಯ್ಯಂಗರ್ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿ.ಶಿವಕುಮಾರ್. ರಥಸಪ್ತಮಿಯ ಅಂಗವಾಗಿ ನಡೆದ ಜಾನಪದ ಕಲಾಸಂಜೆಗೆ ಚಾಲನೆ ನೀಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ ಎಂದರು.

ಜಾನಪದ ಕಲೆ ಬಾಯಿ ನಮ್ಮ ಸಂಸ್ಕ್ರತಿಯ ಪ್ರತೀಕವಾಗಿದೆ. ಬಾಯಿಯಿಂದ ಬಾಯಿಂದ ಬೆಳೆದ ಜಾನಪದ ಕಲೆಯನ್ನು ಗ್ರಾಮೀಣ ಭಾಗದಲ್ಲಿ ಉಳಿಸಿ ಬೆಳೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಮುಂದಿನ‌ ದಿನಗಳಲ್ಲಿ ಜಾನಪದ ಕಲಾ ಮೇಳಕ್ಕೆ ಮತ್ತಷ್ಟು ಮೆರಗು ನೀಡಲಿ ಎಂದು ಹಾರೈಸಿದರು.

ಇದೇ ವೇಳೆ ಕರ್ನಾಟಕ‌ ಮಾಧ್ಯಮ ಮಾನ್ಯತೆ ಸಮಿತಿ ಸದಸ್ಯ ಡಿ.ಶಶಿಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಕುಮಾರ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಜನಪದ ಸೇವೆಗಾಗಿ ಜನಪದ ಕಲಾವಿದರಾದ ಖಡ್ಗಪವಾಡ ಕಲಾವಿದ ಕೋಣನಹಳ್ಳಿ ಮಾಯಿಗಯ್ಯ ಚಕ್ರಾದಿಬಳೆ, ಪೂಜಾಕುಣಿತ ಕಲಾವಿದರಾದ ಸಿ.ಎ.ಕೆರೆ ಸಿದ್ದೇಗೌಡ, ಜಿ.ರಮೇಶ್, ವೀರಗಾಸೆ ರಂಗಭೂಮಿಕಲಾವಿದ ಕುದರಗುಂಡಿ ಪರಮೇಶ್ವರಯ್ಯ, ವೀರಗಾಸೆ ಕಲಾವಿದ ಸಂಕನಹಳ್ಳಿ ಎಸ್.ಎಸ್.ಮಂಜು, ಪೂಜಾಕುಣಿತ ನಂದಿಧ್ವಜ ಕಲಾವಿಧರಾದ ಕಾರಸವಾಡಿ ಜಗದೀಶ್ ಅವರನ್ನು ಅಭಿನಂಧಿಸಲಾಯಿತು.

ಹಲವಾರು ಭರತನಾಟ್ಯ, ಕುಚುಕುಡಿ, ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ಹಲವು ಕಲಾವಿದರು ಪ್ರದರ್ಶನ ನೀಡಿದರು.

ಸಮಾರಂಭದಲ್ಲಿ ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಮಣಿಮುರುಗನ್, ಉಪಾಧ್ಯಕ್ಷ ಕುಮಾರ್, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮುಖಂಡರಾದ ಆನಂದ್, ಸರ್ವಪಿಳ್ಳೆ ಐಯ್ಯಂಗರ್, ಈಸಾಮುರುಳಿ, ಸಂತಾನ್ ರಾಮನ್, ಅಶ್ವಥ್ ಕುಮಾರೇಗೌಡ, ಜೆ.ಪಿ.ಶಿವಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ