ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಏಳು ತಾಲೂಕುಗಳ ಪೈಕಿ ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ ತಾಲೂಕುಗಳ ಫಲಿತಾಂಶ ಘೋಷಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹಾಗಾಗಿ ತಾಲೂಕುಗಳಲ್ಲಿರುವ ಐದು ಸ್ಥಾನಗಳ ಮತ ಎಣಿಗೆ ಪೂರ್ಣಗೊಂಡಿದ್ದು, ಫಲಿತಾಂಶ ಘೋಷಣೆಯಷ್ಟೇ ಬಾಕಿ ಉಳಿದಿದೆ. ಉಳಿದಂತೆ ಮಂಡ್ಯ, ಪಾಂಡವಪುರದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದ್ದರೆ ನಾಗಮಂಗಲ, ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ.
ಮಂಡ್ಯ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಎಂ.ಎಸ್.ರಘುನಂದನ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಯು.ಸಿ.ಶಿವಕುಮಾರ್ ಆಯ್ಕೆಯಾಗಿದ್ದರೆ, ನಾಗಮಂಗಲ ತಾಲೂಕಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ ಹಾಗೂ ಶ್ರೀರಂಗಪಟ್ಟಣ ತಾಲೂಕಿನಿಂದ ಮನ್‌ಮುಲ್ ಅಧ್ಯಕ್ಷ ಬಿ.ಬೋರೇಗೌಡ ಹಾಗೂ ಪಾಂಡವಪುರ ತಾಲೂಕಿನಿಂದ ಸಿ.ಶಿವಕುಮಾರ್ ಅವರು ಚುನಾಯಿತರಾಗಿದ್ದಾರೆ. ನಾಲ್ಕು ಕ್ಷೇತ್ರಗಳ ಫಲಿತಾಂಶದಲ್ಲಿ ಜೆಡಿಎಸ್ ೩ ಹಾಗೂ ಕಾಂಗ್ರೆಸ್ ೪ ಸ್ಥಾನಗಳಲ್ಲಿ ವಿಜಯ ಸಾಧಿಸಿದೆ.ಗೆಲುವು ನಮ್ಮದೇ: ಎಸ್.ಪಿ.ಸ್ವಾಮಿ, ಹರೀಶ್‌ಬಾಬು
ಹಿಂದಿನ ಆಡಳಿತ ಮಂಡಳಿಯಲ್ಲಿದ್ದವರ ಪೈಕಿ ಮಂಡ್ಯದಿಂದ ಬಿ.ಆರ್.ರಾಮಚಂದ್ರ, ಎಂ.ಎಸ್.ರಘುನಂದನ್, ಯು.ಸಿ.ಶಿವಕುಮಾರ್, ಶ್ರೀರಂಗಪಟ್ಟಣದಿಂದ ಬಿ.ಬೋರೇಗೌಡ ಮರು ಆಯ್ಕೆಯಾಗಿದ್ದರೆ, ನಾಗಮಂಗಲದಿಂದ ಆಯ್ಕೆಯಾಗಿದ್ದ ನೆಲ್ಲೀಗೆರೆ ಬಾಲು, ಪಾಂಡವಪುರದಿಂದ ಚುನಾಯಿತರಾಗಿದ್ದ ಕಾಡೇನಹಳ್ಳಿ ರಾಮಚಂದ್ರು ಪರಾಭವಗೊಂಡಿದ್ದಾರೆ.
ಮಂಡ್ಯ
ಬಿ.ಆರ್.ರಾಮಚಂದ್ರ ೧೪೯
ಯು.ಸಿ.ಶಿವಕುಮಾರ್ ೧೩೬
ಕೆ.ರಾಜು ೬೧ಶ್ರೀರಂಗಪಟ್ಟಣ
ಬಿ.ಬೋರೇಗೌಡ ೫೧
ಕೃಷ್ಣೇಗೌಡ ೦೫ಎಂ.ಕಿಶೋರ್ (ಕಿರಣ್) ೦೧ನಾಗಮಂಗಲ
ಅಭ್ಯರ್ಥಿಗಳು ಪಡೆದ ಮತಗಳುಎನ್.ಅಪ್ಪಾಜಿಗೌಡ ೧೭೦
ಲಕ್ಷ್ಮೀನಾರಾಯಣ ೧೩೩ನೆಲ್ಲೀಗೆರೆ ಬಾಲು ೭೬
ದೇವೇಗೌಡ ೭೩ಪಾಂಡವಪುರಅಭ್ಯರ್ಥಿಗಳು ಪಡೆದ ಮತಗಳು
ಸಿ.ಶಿವಕುಮಾರ್ ೯೮ಕೆ.ರಾಮಚಂದ್ರ ೨೫