ಮನ್ ಕೀ ಬಾತ್ ಕಾರ್ಯಕ್ರಮ ಸಂಚಾಲಕ ವೆಂಕಟೇಗೌಡ

KannadaprabhaNewsNetwork |  
Published : Feb 25, 2026, 02:00 AM IST
23  | Kannada Prabha

ಸಾರಾಂಶ

ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ದೇವನಹಳ್ಳಿ ಮಂಡಲದ ತಾಲೂಕು ಸಂಚಾಲಕರಾಗಿ ಅರುವನಹಳ್ಳಿ ಎ.ಆರ್.ವೆಂಕಟೇಗೌಡ ನೇಮಕಗೊಂಡಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶ್ ಗೌಡ ಆಯ್ಕೆ ಆದೇಶ ಪತ್ರವನ್ನು ನೀಡಿ ಅಭಿನಂದಿಸಿದರು

ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ದೇವನಹಳ್ಳಿ ಮಂಡಲದ ತಾಲೂಕು ಸಂಚಾಲಕರಾಗಿ ಅರುವನಹಳ್ಳಿ ಎ.ಆರ್.ವೆಂಕಟೇಗೌಡ ನೇಮಕಗೊಂಡಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶ್ ಗೌಡ ಆಯ್ಕೆ ಆದೇಶ ಪತ್ರವನ್ನು ನೀಡಿ ಅಭಿನಂದಿಸಿದರು. ಈ ವೇಳೆ ವೆಂಕಟೇಗೌಡ ಮಾತನಾಡಿ, ಬಿಜೆಪಿ ತತ್ವ ಸಿದ್ಧಾಂತಗಳಡಿ ನಡೆಯುವ ಪ್ರತಿ ಕಾರ್ಯ ಚಟುವಟಿಕೆಯನ್ನು ಜವಾಬ್ದಾರಿಯುತವಾಗಿ ಮಾಡಲಾಗುತ್ತದೆ. ತಮ್ಮನ್ನು ಮನ್‌ಕೀ ಬಾತ್ ಮಂಡಲ ಸಂಚಾಲಕನನ್ನಾಗಿ ನೇಮಿಸಿದ ಮಂಡಲದ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಪಕ್ಷವನ್ನು ಬಲಿಷ್ಠಗೊಳಿಸುತ್ತೇನೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಅನೇಕ ಜನಪರ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮತ್ತಷ್ಟು ಮನದಟ್ಟು ಮಾಡುವ ಮೂಲಕ ಪಕ್ಷವನ್ನೂ ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಬಿಜೆಪಿ ಮುಖಂಡರಾದ ಆವತಿ ಶಕ್ತಿ ಕೇಂದ್ರದ ಅಧ್ಯಕ್ಷ ಎಸ್‌.ಕೆ.ರವಿಕುಮಾರ್, ವಿಜಯಪುರದ ಮುನೀಂದ್ರ, ಬಿ.ಟಿ.ಅನಿಲ್ ಕುಮಾರ್, ಪಿಳ್ಳೇಗೌಡ, ಎರ್‌ಟೆಲ್ ಮಂಜುನಾಥ್, ನಾಗರಾಜ್ (ಬಂಡೆ), ಮಂಜುನಾಥ್, ಸುಬ್ರಹ್ಮಣಿ, ರವಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡುಗೊಲ್ಲರ ಸಾಂಪ್ರದಾಯಿಕ ಆಚರಣೆಗಳು ಮುಂದುವರಿಯಬೇಕು
ದೌರ್ಜನ್ಯ ಪ್ರಕರಣಗಳ ವಿಚಾರಣೆ ತ್ವರಿತ ನ್ಯಾಯಾಲಯಗಳಲ್ಲಿ ನಡೆಯಲಿ: ಪಿ.ಯಶೋಧ